ಚೀನಾಗೆ ನೇರ ವಿಮಾನ ಸೇವೆ ಇಲ್ಲ, 23,000 ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ!

Published : Oct 11, 2022, 04:06 PM ISTUpdated : Oct 11, 2022, 04:33 PM IST
ಚೀನಾಗೆ ನೇರ ವಿಮಾನ ಸೇವೆ ಇಲ್ಲ,  23,000 ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ!

ಸಾರಾಂಶ

ಮೊದಲ ಬಾರಿಗೆ ಕೊರೋನಾ ವಕ್ಕರಿಸಿದ ಬೆನ್ನಲ್ಲೇ ಭಾರತ ಚೀನಾ ನಡುವಿನ ನೇರ ವಿಮಾನ ರದ್ದುಗೊಳಿಸಲಾಗಿತ್ತು. ಬಳಿಕ ವಿಮಾನ ಸೇವೆ ಪುನರ್ ಆರಂಭಿಸುವ ಕುರಿತು ಚೀನಾ ತನ್ನ ನಿಯಮ ಬದಲಿಸಿಲ್ಲ. ಚೀನಾದ ಈ ನಿರ್ಧಾರದಿಂದ  ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 23,000 ಭಾರತೀಯ ವಿದ್ಯಾರ್ಥಿಗಳು ಹಾಗೂ ಅವರ ಕಟುಂಬಹಳು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಬಿಜಿಂಗ್(ಅ.10): ಕೋವಿಡ್ ಮಹಾಮಾರಿಯಿಂದ ಜಗತ್ತು ನಿಧಾನವಾಗಿ ಹೊರಬರುತ್ತಿದೆ. ಭಾರತದ ಬಹುತೇಕ ಹೊರಬಂದಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧವಿಲ್ಲ. ಆದರೆ ಚೀನಾ ಪರಿಸ್ಥಿತಿ ಹಾಗಿಲ್ಲ. ಒಂದೊಂದು ಪ್ರಕರಣಗಳು ವರದಿಯಾಗುತ್ತಿದ್ದರೂ ಚೀನಾದಲ್ಲಿ ಕಠಿಣ ನಿರ್ಬಂಧ ಸಡಿಲಗೊಂಡಿಲ್ಲ. 2019ರಲ್ಲಿ ಕೋವಿಡ್ ಮಹಾಮಾರಿ ವಕ್ಕರಿಸಿದ ಸಂದರ್ಭದಲ್ಲಿ ಹೇರಿದ್ದ ನಿಯಮಗಳನ್ನು ಬದಲಿಸುವ ಪ್ರಯತ್ನಕ್ಕೂ ಚೀನಾ ಕೈಹಾಕಿಲ್ಲ. ಇನ್ನು ಭಾರತ ಹಾಗೂ ಚೀನಾ ನಡುವಿನ ನೇರವ ವಿಮಾನ ಸೇವೆ ಮತ್ತೆ ಆರಂಭಿಸಲು ಹಿಂದೇಟು ಹಾಕುತ್ತಿದೆ. ಕೋವಿಡ್ ಕಾರಣ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ವಿಮಾನ ರದ್ದುಗೊಳಿಸುವ ತನ್ನ ನಿಯಮವನ್ನೂ ಬದಲಿಸಿಲ್ಲ. ಇದರಿಂದ ಚೀನಾದಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು, ಚೀನಾದಲ್ಲಿ ಹೂಡಿಕೆ ಮಾಡಿರುವ ಉದ್ಯಮಿಗಳು, ಚೀನಾದಲ್ಲಿ ಕೆಲಸ ಮಾಡುತ್ತಿುವ ಭಾರತೀಯ ಮೂಲದ ಹಲವರು ಸಂಕಷ್ಟಕ್ಕೆಸಿಲುಕಿದ್ದಾರೆ. ಬರೋಬ್ಬರಿ 23,000 ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿದೆ.  ಇತ್ತೀಚೆಗೆ ವೀಸಾ ನಿಷೇಧ ನೀತಿಯನ್ನು ತೆಗೆದುಹಾಕಿದರೂ ಚೀನಾ ಮತ್ತೆ ವಿಮಾನ ಸೇವೆ ಆರಂಭಿಸಿಲ್ಲ. ಭಾರತದಲ್ಲಿ ವೈದ್ಯಕೀಯ ವ್ಯಾಸಾಂಗ ಮುಂದುವರಿಸುವ ಪ್ರಯತ್ನಗಳನ್ನು ನಡೆಸಿದ್ದಾರೆ. ಮತ್ತೆ ಚೀನಾದಲ್ಲಿ ತಮ್ಮ ಕಾಲೇಜಿಗೆ ಮರಳಲು ಯತ್ನಿಸುತ್ತಿರುವ ಈ ವಿದ್ಯಾರ್ಥಿಗಳಿಗೆ ಇದೀಗ ತೀವ್ರ ಸಮಸ್ಯೆಯಾಗಿದೆ. ಹಠಾತ್ ವಿಮಾನ ಸೇವೆ ರದ್ದುಗೊಳಿಸುವ ಚೀನಾ ನಿರ್ಧಾರಗಳು ಭಾರತೀಯರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. 

ಚೀನಾದಲ್ಲಿ ಕೆಲ ನಗರದಲ್ಲಿ ಬೆರಳೆಣಿಕೆ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ ಚೀನಾ ತನ್ನ ಕಠಿಣ ನಿರ್ಬಂಧವನ್ನು ಸಡಿಲಿಕೆ ಮಾಡಿಲ್ಲ. ಹಲವು ಭಾಗದಲ್ಲಿ ಇನ್ನೂ ಲಾಕ್‌ಡೌನ್ ಮುಂದುವರಿದಿದೆ. ವಿದೇಶಗಳಿಂದ ಚೀನಾಗೆ ಆಗಮಿಸುವ ಪ್ರಯಾಣಿಕರಲ್ಲಿನ ಕೋವಿಡ್ ಸೋಂಕಿನನಿಂದ ಚೀನಾದಲ್ಲಿ ಮತ್ತೆ ಆತಂಕ ಸ್ಥಿತಿ ಎದುರಾಗಬಹುದು ಅನ್ನೋ ಕಾರಣಕ್ಕೆ ಚೀನಾ-ಭಾರತ ನಡುವೆ ನೇರ ವಿಮಾನ ಸೇವೆ ಆರಂಭಿಸಿಲ್ಲ.  ಆದರೆ ಇತರ ದೇಶಗಳ ಜೊತೆ ವಿಮಾನ ಸೇವೆ ಆರಂಭಿಸಿದೆ.  ಇದೀಗ ಭಾರತೀಯ ವಿದ್ಯಾರ್ಥಿಗಳು ಮೂರನೇ ದೇಶದ ಮೂಲಕ ಚೀನಾ ತಲುಪಬೇಕಾದ ಪರಿಸ್ಥಿತಿ ಎದುರಾಗಿದೆ. ಭಾರತ-ಚೀನಾ ನಡುವಿನ ನೇರ ವಿಮಾನ ಸೇವೆ ಸದ್ಯಕ್ಕೆ ಆರಂಭಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಭಾರತದಿಂದ ಹಾಂಕ್ ಕಾಂಗ್ ತೆರಳಿ, ಅಲ್ಲಿಂದ ಚೀನಾ ಪ್ರಯಾಣ ದುಬಾರಿಯಾಗುತ್ತಿದೆ. ಇಷ್ಟೇ ಅಲ್ಲ ಚೀನಾದಲ್ಲಿ 7 ದಿನದ ಕ್ವಾರಂಟೈನ್‌ಗೆ ಒಳಗಾಬೇಕು.

ಉಗ್ರರ ರಕ್ಷಿಸುವ ಚೀನಾ, ಪಾಕ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ Jaishankar ವಾಗ್ದಾಳಿ

ಭಾರತೀಯ ವಿದ್ಯಾರ್ಥಿಗಳು ಚೀನಾ, ನೇಪಾಳ, ಮಯನ್ಮಾರ್, ಹಾಂಕ್ ಕಾಂಗ್ ಮೂಲಕ ಚೀನಾ ಪ್ರಯಾಣಿಸುತ್ತಿದ್ದಾರೆ. ಚೀನಾದಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸಲಾಗುತ್ತಿದೆ. ಹೀಗಾಗಿ ಅತ್ಯಂತ ಕಠಿಣ ನಿಯಮಗಳು ಈಗಲೂ ಮುಂದುವರಿದಿದೆ. ಇನ್ನು ಸದ್ಯ ನೇಪಾಳ, ಶ್ರೀಲಂಕಾ, ಹಾಂಕ್ ಕಾಂಗ್ ಸೇರಿದಂತೆ ಹಲವು ದೇಶಗಳ ಜೊತೆ ಚೀನಾ ನೇರ ವಿಮಾನ ಸೇವೆ ಆರಂಭಿಸಿದೆ. ಆದರೆ ಕೋವಿಡ್ ಪ್ರಕರಣ ಪತ್ತೆಯಾದರೆ ನೇರವ ವಿಮಾನ ಸೇವೆಯನ್ನು ಹಠಾತ್ ರದ್ದುಗೊಳಿಸಲಿದೆ ಎಂದು ಚೀನಾ ಹೇಳಿದೆ. 

ಚೀನಾ ನಡುವಿನ ನೇರ ವಿಮಾನ ಸೇವೆ ಪುನರ್ ಆರಂಭಿಸಲು ಭಾರತ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಯಾವುದು ಪ್ರಯೋಜನವಾಗಿಲ್ಲ. ಸದ್ಯ ಚೀನಾ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ಚೀನಾ ರಾಯಭಾರ ಕಚೇರಿ ನಿಗದಿಪಡಿಸಿದ ಕೇಂದ್ರಗಳಲ್ಲಿ  ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ನೆಗಟೀವ್ ರಿಪೋರ್ಟ್ ಇದ್ದರೆ ಚೀನಾ ರಾಯಭಾರ ಕಚೇರಿ ಪ್ರಯಾಣಕ್ಕೆ ಅನುಮತಿ ನೀಡಲಿದೆ. ಇನ್ನು ಯಾವುದೇ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ ಕಾಣಿಸಿಕೊಂಡರೇ ವಿಮಾನ ಸೇವೆ ರದ್ದಾಗಲಿದೆ. ಹೀಗಾಗಿ ಭಾರತ ಹಾಗೂ ಚೀನಾ ನಡುವಿನ ನೇರ ವಿಮಾನ ಸೇವೆ ಸದ್ಯಕ್ಕೆ ಪುನರ್ ಆರಂಭಗೊಳ್ಳುವ ಸಾದ್ಯತೆಗಳಿಲ್ಲ. ಇದು ಚೀನಾದಲ್ಲಿ ವೈದ್ಯಕೀಯ, ಇತರ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ತಲೆನೋವು ತಂದಿದೆ. 

ಚೀನಾಕ್ಕಿಂತ, ಭಾರತದಂಥ ಮುಕ್ತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಯೋಕೆ ಇಷ್ಟ: ದಲೈಲಾಮಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana