Vinay kularni: ಯೋಗೇಶ್ ಗೌಡ ಕೇಸ್‌ನಲ್ಲಿ ಮತ್ತೆ ಜೈಲು ಸೇರ್ತಾರಾ ವಿನಯ್ ಕುಲಕರ್ಣಿ, ಜಾಮೀನು ನೀಡಿದ್ದಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿದ್ದೇಕೆ?

Kannadaprabha News   | Kannada Prabha
Published : Oct 02, 2026, 05:55 AM IST
Supreme court on vinay kulkarni

ಸಾರಾಂಶ

Vinay Kulkarni ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿಗೆ ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗಂಭೀರ ಆರೋಪ ಹೊತ್ತವರು ವಿಧಾನಸಭೆಯಲ್ಲಿ ಇರಬೇಕೇ ಎಂದು ಪ್ರಶ್ನಿಸಿರುವ ನ್ಯಾಯಪೀಠ, ವಿಚಾರಣೆ ಅಕ್ಟೋಬರ್‌ 9ಕ್ಕೆ ಮುಂದೂಡಿದೆ.

ಕೋರ್ಟ್‌ ಪ್ರಶ್ನೆಗಳು

  • - ಗಂಭೀರ ಆರೋಪಗಳಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿ ಇರಲು ಅರ್ಹರೇ?
  • - ಕೊಲೆಯಂತಹ ಗಂಭೀರ ಅಪರಾಧ ಕೇಸಲ್ಲಿ ತಡೆಯಾಜ್ಞೆ ನೀಡಲು ಹೇಗೆ ಸಾಧ್ಯ?
  • - ಈ ರೀತಿ ತಡೆ ನೀಡುತ್ತಾ ಹೋದರೆ ವಿಧಾನಸಭೆ ಕೊಲೆಗಡುಕರಿಂದ ತುಂಬಲ್ಲವೇ?
  • - ವಿನಯ್‌ ಕುಲಕರ್ಣಿ ಕೇಸ್‌ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಿಂದ ಪ್ರಶ್ನೆ

ನವದೆಹಲಿ (ಸೆ.2): ಕೊಲೆಗಡುಕರು ವಿಧಾನಸಭೆಯಲ್ಲಿ ಇರಬೇಕೇ ಎಂದು ಖಾರವಾಗಿ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, ಕೊಲೆ ಪ್ರಕರಣದ ಅಪರಾಧಿ ವಿನಯ್‌ ಕುಲಕರ್ಣಿಗೆ ಜಾಮೀನು ನೀಡಿದ್ದ ಕರ್ನಾಟಕದ ಹೈಕೋರ್ಟ್‌ನ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ?

ಗಂಭೀರ ಆರೋಪಗಳಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿ ಇರಲು ಅರ್ಹರೇ? ಇಂತವರನ್ನು ಅನರ್ಹ ಮಾಡಬೇಕು ಎಂದು ನ್ಯಾಯಪೀಠ ಅಕ್ರೋಶ ವ್ಯಕ್ತಪಡಿಸಿದೆ. ನ್ಯಾಯಪೀಠದ ಕಟ್ಟುನಿಟ್ಟಿನ ಧೋರಣೆಯಿಂದಾಗಿ ವಿನಯ್‌ ಕುಲಕರ್ಣಿ ಅವರಿಗೆ ಮತ್ತೆ ಜೈಲು ಸೇರುವ ಆತಂಕ ಎದುರಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್‌ ಕುಲಕರ್ಣಿ, ಯೋಗೇಶ್‌ ಗೌಡ ಸಹೋದರ ಗುರುನಾಥ ಗೌಡ ಅವರಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಅಕ್ಟೋಬರ್‌ 9ಕ್ಕೆ ವಿಚಾರಣೆ ಮುಂದೂಡಿದೆ.

ವಿನಯ್ ಕುಲಕರ್ಣಿ ಜಾಮೀನು ಪ್ರಕರಣದ ಹಿನ್ನೆಲೆ

ಜನಪ್ರತಿನಿಧಿಗಳ ನ್ಯಾಯಾಲಯವು ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೇಶ್‌ ಗೌಡ ಅವರ ಸಹೋದರ ಗುರುನಾಥ ಗೌಡ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಜಾ ಮಾಡುವಂತೆ ವಿನಯ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಗುರುವಾರ ಬಂದಿತ್ತು.

ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ಈ ವೇಳೆ ನ್ಯಾಯಪೀಠ ಹೈಕೋರ್ಟ್‌ನ ಆದೇಶದ ವಿರುದ್ಧ ಗರಂ ಆಯಿತು. ಮೇಲ್ಮನವಿ ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್, ಈ ರೀತಿ ಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿ ಇರಬೇಕೇ? ಗಂಭೀರ ಆರೋಪಗಳಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿ ಇರಲು ಅರ್ಹರೇ? ಇಂತವರನ್ನು ಅನರ್ಹ ಮಾಡಬೇಕು ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಕೊಲೆಯಂತಹ ತೀವ್ರ ಸ್ವರೂಪದ ಗಂಭೀರ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡಲು ಹೇಗೆ ಸಾಧ್ಯ? ಈ ರೀತಿಯಾಗಿ ಎಲ್ಲ ಪ್ರಕರಣಗಳಲ್ಲೂ ತಡೆಯಾಜ್ಞೆ ನೀಡುತ್ತಾ ಹೋದರೆ, ನಾಳೆ ಶಾಸನಸಭೆ ಅಥವಾ ವಿಧಾನಸಭೆಯ ಮಹಡಿಯ ಮೇಲೆ ಕೊಲೆಗಡುಕರು ಹಾಗೂ ದರೋಡೆಕೋರರೇ ತುಂಬಿ ತುಳುಕುತ್ತಾರೆ ಎಂದು ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತು.

ಕುಲಕರ್ಣಿ ಪರ ವಕೀಲರು ಕನಿಷ್ಠ ಪಕ್ಷ ವಾದ ಮಂಡಿಸಲು ಕಾಲಾವಕಾಶ ನೀಡಿ ಸಂಪೂರ್ಣ ವಿಚಾರಣೆ ನಡೆಸುವಂತೆ ಕೋರಿದರು. ಈ ಮನವಿಗೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ಒಪ್ಪಿಗೆ ಸೂಚಿಸಿತು. ಅಲ್ಲದೆ ವಿನಯ್ ಕುಲಕರ್ಣಿ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ಅಧಿಕೃತ ನೋಟಿಸ್ ಜಾರಿಗೊಳಿಸಿ ಉತ್ತರ ನೀಡುವಂತೆ ಸೂಚಿಸಿತು. ವಿಚಾರಣೆಯನ್ನು ಅ.9ಕ್ಕೆ ಮುಂದೂಡಿ ಆದೇಶ ಹೊರಡಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನೀ ಹಂಗ ನೋಡಬ್ಯಾಡ ನನ್ನ..' ಎಂದಿದ್ದ ರಾಜ್‌ಕುಮಾರ್ ಭಾರತಿ ಈಗ್ಯಾಕೆ ಹಾಡುತ್ತಿಲ್ಲ? ಈಗೆಲ್ಲಿದಾರೆ, ಏನ್ ಮಾಡ್ತಿದ್ದಾರೆ?
GST ಸಂಗ್ರಹ: ದಾಖಲೆ ಬರೆದ ಕರ್ನಾಟಕ! 2ನೇ ಸ್ಥಾನದಲ್ಲಿ ರಾಜ್ಯ- ಒಂದೇ ತಿಂಗಳಿನಲ್ಲಿ ದಾಖಲಾದ ಮೊತ್ತವೆಷ್ಟು