ಪಾಕಿಸ್ತಾನದಿಂದ LoC ಗಡಿ ದಾಟಿ ಭಾರತಕ್ಕೆ ಬಂದ 17ರ ಹುಡುಗಿ, ಜಮ್ಮು ಪೊಲೀಸರ ವಶಕ್ಕೆ

Published : Oct 03, 2026, 03:34 PM IST
indian army

ಸಾರಾಂಶ

ಸೀಮಾ ಹೈದರ್ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಹಾಗೂ ಭಾರತದಿಂದ ಪಾಕಿಸ್ತಾನಕ್ಕೆ ಸದ್ದಿಲ್ಲದೆ ಗಡಿ ದಾಟಿದ ಟ್ರೆಂಡ್ ಶುರುವಾಗಿತ್ತು. ಇದೀಗ ಪಾಕಿಸ್ತನ ಆಕ್ರಮಿತ ಕಾಶ್ಮೀರದಿಂದ 17ರ ಹುಡುಗಿ ಭಾರತ ಪ್ರವೇಶಿಸಿದ್ದಾಳೆ, ಗಡಿ ದಾಟಿ ಬಂದ ಹುಡುಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರ (ಅ.03) ಪಾಕಿಸ್ತಾನದಿಂದ ತನ್ನ ಪ್ರೀತಿಗಾಗಿ ಭಾರತಕ್ಕೆ ಯಾವುದೇ ದಾಖಲೆ ಇಲ್ಲದೆ ದಾಟಿ ಬಂದ ಸೀಮಾ ಹೈದರ್ ಇದೀಗ ಭಾರತೀಯಳಾಗಿದ್ದಾಳೆ. ಇದೇ ರೀತಿಯ ಭಾರತದಿಂದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ ಘಟನೆಗಳು ನಡೆದಿದೆ. ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಗಡಿ ದಾಟಿ ಭಾರತ ಪ್ರವೇಶಿದ 17ರ ಹುಡುಗಿಯನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಬಳಿಕ ಜಮ್ಮು ಮತ್ತು ಪೊಲೀಸರಿಗೆ ಹಸ್ತಾಂತರಿಸಿದೆ.

ಗಡಿ ದಾಟಿ ಬಂದ 17ರ ಹುಡುಗಿ

ರಜೌರಿ ಜಿಲ್ಲೆಯ ನೌಶೆರಾ ಭಾಗದಲ್ಲಿ ಭಾರತೀಯ ಸೇನೆ ಗಸ್ತು ತಿರುಗುತ್ತಿತ್ತು. ಎಲ್ಒಸಿ ಗಡಿ ಭಾಗದಲ್ಲಿ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೇನೆಯ ಯೋಧರಿಗೆ ಗಡಿಯಲ್ಲಿ ಅನುಮಾನಸ್ಪದ ನಡೆ ಪತ್ತೆಯಾಗಿದೆ. 17ರ ಹುಡುಗಿಯೊಬ್ಬಳು ಗಡಿ ದಾಟುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಸೇನೆ ಅಲರ್ಟ್ ಆಗಿದೆ. ಭಾರತೀಯ ಸೇನೆ ತಕ್ಷಣವೇ 17ರ ಹುಡುಗಿಯನ್ನು ಸುತ್ತುವರಿದಿದೆ. ಬಳಿಕ ವಶಕ್ಕೆ ಪಡೆದಿದೆ.

ಸೇನೆಯಿಂದ ಜಮ್ಮು ಮತ್ತು ಪೊಲೀಸರಿಗೆ ಹಸ್ತಾಂತರ

ಭಾರತೀಯ ಸೇನೆ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ವೇಳೆ ಈ ಬಾಲಕಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿಯೆಟ್ಟಾ ಮೂಲದವಳು ಅನ್ನೋದು ಗೊತ್ತಾಗಿದೆ. ಈಕೆ ಹೆಸರು ಎಸ್ ಅಜೀಮ್ ಎಂದು ಹೇಳಿಕೊಂಡಿದ್ದಾಳೆ. ಮೊಹಮ್ಮದ್ ಅಜೀಮ್ ಪುತ್ರಿ ಎಂದಿದ್ದಾಳೆ. ಹೆಚ್ಚಿನ ವಿಚಾರಣೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು 17ರ ಹುಡುಗಿಯನ್ನು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಗೊತ್ತಿಲ್ಲದೆ ಗಡಿ ದಾಟಿರುವುದಾಗಿ ವರದಿಯಾಗಿದೆ. ಈ ಹುಡುಗಿ ಮನೆಯಿಂದ ಕೆಲ ದೂರ ಬಂದಿದ್ದಾಳೆ. ಬಳಿಕ ಗಡಿಯಲ್ಲಿ ದಾರಿ ತಪ್ಪಿ ಭಾರತ ಪ್ರವೇಶಿಸಿದ್ದಾಳೆ ಎಂದು ವರದಿಯಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಗೊತ್ತಿಲ್ಲದೆ ಅಥವಾ ತಪ್ಪಾಗಿ ಭಾರತ ಗಡಿ ಪ್ರವೇಶಿಸಿದರೆ ಅಂತವರನ್ನು ಮತ್ತೆ ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಕಾರ್ಯಗಳು ನಡೆಯಲಿದೆ. ಆದರೆ ಗಡಿ ಪ್ರವೇಶದ ಹಿಂದೆ ಬೇರೆ ಉದ್ದೇಶಗಳಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಸದ್ಯ ಜಮ್ಮು ಮತ್ತು ಪೊಲೀಸರು ಬಾಲಕಿಯಿಂದ ಮಾಹಿತಿ ಪಡೆದು ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ತಪ್ಪಾಗಿ ಭಾರತ ಗಡಿ ಪ್ರವೇಶಿಸಿರುವುದು ಸಾಬೀತಾದರೆ ಕೆಲ ನಿರ್ದಿಷ್ಟ ಗಡಿಗಳ ದ್ವಾರ ಮೂಲಕ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ಜನರ ಮುಂದೆ ಅವಮಾನ… ಮ್ಯಾನೇಜರ್‌ಗೆ ಹೊಡೆಯಲು ಮುಂದಾಗಿದ್ದ ಟೆಕ್ಕಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು ಹೇಗೆ?
ಪ್ರೇಮಾನಂದ್ ಜಿ ಮಹಾರಾಜ್‌ರಿಂದ ದೀಕ್ಷೆ ಪಡೆದ 17 ವರ್ಷದ ಬಾಲಕ ನಾಪತ್ತೆ! ಪೊಲೀಸರ ಹೇಳಿಕೆಯಿಂದ ಕೇಸ್‌ಗೆ ಬಿಗ್ ಟ್ವಿಸ್ಟ್!