ಗಾಲಿ ಕುರ್ಚಿ ಇಲ್ಲದೆ ಪ್ರಯಾಣಿಕ ಮೃತಪಟ್ಟ ಪ್ರಕರಣ, ಏರ್ ಇಂಡಿಯಾಗೆ 30 ಲಕ್ಷ ರೂ ದಂಡ!

By Suvarna NewsFirst Published Feb 29, 2024, 2:56 PM IST
Highlights

ಗಾಲಿಕುರ್ಚಿ ಇಲ್ಲದೆ ನಡೆದುಕೊಂಡು ಸಾಗುತ್ತಿದ್ದ ವೇಳೆ ಕುಸಿದು ಬಿದ್ದು 80 ವರ್ಷದ ಪ್ರಯಾಣಿಕ ಮೃತಪಟ್ಟ ಘಟನೆ ಸಂಬಂಧ ಏರ್ ಇಂಡಿಯಾಗೆ DGCA ಶಾಕ್ ನೀಡಿದೆ. 30 ಲಕ್ಷ ರೂಪಾಯಿ ದಂಡ ವಿಧಿಸಿದೆ, ಜೊತೆಗೆ ಖಡಕ್ ವಾರ್ನಿಂಗ್ ನೀಡಿದೆ.

ಮುಂಬೈ(ಫೆ.29) ಟಾಟಾ ಮಾಲೀಕತ್ವದ  ಏರ್ ಇಂಡಿಯಾ ವಿರುದ್ಧ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA) ಮಹತ್ವದ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಗಾಲಿ ಕುರ್ಚಿ ಇಲ್ಲದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದುಕೊಂಡೆ ಹೋದ 80 ವಯಸ್ಸಿನ ಪ್ರಯಾಣಿಕ ಕುಸಿದು ಬಿದ್ದು ಮೃತಪಟ್ಟಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ DGCA ಕಠಿಣ ಕ್ರಮ ಕೈಗೊಂಡಿದೆ. ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಫೆಬ್ರವರಿ 12ರಂದು ನ್ಯೂಯಾರ್ಕ್‌ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ಆಗಮಿಸಿತ್ತು. ಈ ವಿಮಾನದಲ್ಲಿ ಆಗಮಿಸಿದ 80 ವರ್ಷಕ್ಕೂ ಮೇಲ್ಪಟ್ಟ ಪ್ರಯಾಣಿಕ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಗಾಲಿ ಕುರ್ಚಿಗೆ ಮನವಿ ಮಾಡಿದ್ದಾರೆ. ಆದರೆ ಗಾಲಿ ಕುರ್ಚಿ ಸೌಲಭ್ಯ ಇಲ್ಲದ ಕಾರಣ ಪ್ರಯಾಣಿಕ ತಮ್ಮ ಪತ್ನಿ ಜೊತೆ ನಡೆದುಕೊಂಡು ಸಾಗಿದ್ದಾರೆ. ಈ ವೇಳೆ ಆರೋಗ್ಯ ಏರಿಳಿತವಾಗಿ ಕುಸಿದು ಬಿದ್ದು ಮೃತಪಟ್ಟಿದ್ದರು.

ಏರ್‌ಪೋರ್ಟ್‌ ಟಾರ್‌ಮ್ಯಾಕ್‌ನಲ್ಲಿ ಆಹಾರ ತಿಂದ ಪ್ರಯಾಣಿಕರು: ಇಂಡಿಗೋಗೆ ಬರೋಬ್ಬರಿ 1.2 ಕೋಟಿ ರೂ. ದಂಡ!

ಕುಸಿದು ಬಿದ್ದ ಬೆನ್ನಲ್ಲೇ ಏರ್ ಇಂಡಿಯಾ ಸಿಬ್ಬಂದಿಗಳು ಪ್ರಯಾಣಿಕನನ್ನು ತಕ್ಷಣವೇ ಆಸ್ಪತ್ರ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ ಪ್ರಯೋಜನವಾಗಲಿಲ್ಲ. 80 ವರ್ಷದ ಪ್ರಯಾಣಿಕರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ DGCA ಇದೀಗ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

ನ್ಯೂಯಾರ್ಕ್‌ನಿಂದ ಮುಂಬೈಗೆ ಬಂದಳಿದ ವೃದ್ಧ ದಂಪತಿಗಳು ಇಮಿಗ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಗಾಲಿ ಕುರ್ಚಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವ ಕಾರಣ 80 ವರ್ಷದ ವೃದ್ಧರು ಕೇಳಿದಾಗ ಲಭ್ಯವಿರಲಿಲ್ಲ. ಈ ವೇಳೆ ಕೆಲ ಹೊತ್ತು ಕಾಯುವಂತೆ ಏರ್ ಇಂಡಿಯಾ ಸಿಬ್ಬಂದಿಗಳು ವಿನಂತಿಸಿದ್ದರೆ. ಇದರಿಂದ ವೃದ್ಧ ದಂಪತಿಗಳು ನಡೆದು ಸಾಗಲು ನಿರ್ಧರಿಸಿದ್ದಾರೆ.

ನಡೆದುಕೊಂಡು ಸಾಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ. ಆದರೆ ಆಸ್ಪತ್ರೆ ದಾಖಲಿಸುವ ವೇಳೆ ಪ್ರಯಾಣಿಕ ಮೃತಪಟ್ಟಿದ್ದಾರೆ. ಬಳಿಕ ವೃದ್ಧರ ಕುಟುಂಬಸ್ಥರ ಜೊತೆ ಏರ್ ಇಂಡಿಯಾ ನಿರಂತರ ಸಂಪರ್ಕದಲ್ಲಿದೆ. ಅವರಿಗೆ ಎಲ್ಲಾ ನೆರವು ನೀಡಲು ಏರ್ ಇಂಡಿಯಾ ಪ್ರಯತ್ನಿಸುತ್ತಿದ ಎಂದು ಏರ್ ಇಂಡಿಯಾ ಹೇಳಿದೆ.

ವಿಮಾನಗಳ ಸಿಗ್ನಲ್ ಜ್ಯಾಮಿಂಗ್: ಪೈಲಟ್‌ಗಳಿಗೆ ಎಸ್ಒಪಿ ಸಿದ್ಧಪಡಿಸಲು ಏರ್‌ಲೈನ್ಸ್‌ಗೆ ಸೂಚಿಸಿದ ಡಿಜಿಸಿಎ

ಭಾರತದ 2ನೇ ಅತೀ ದಟ್ಟಣೆ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿರುವ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇತ್ತ ಗಾಲಿ ಕುರ್ಚಿಗೆ ಬೇಡಿಕೆಯೂ ಹೆಚ್ಚಾಗಿದೆ. ಇದರಿಂದ ತಕ್ಷಣಕ್ಕೆ ಲಭ್ಯವಿರಲಿಲ್ಲ. ಆದರೆ ಸಿಬ್ಬಂದಿಗಳು ಕೆಲವೇ ನಿಮಿಷಗಳಲ್ಲಿ ಗಾಲಿ ಕುರ್ಚಿ ಒದಗಿಸುವ ಭರವಸೆ ನೀಡಿದ್ದರು. ಇತ್ತ ಹೆಚ್ಚಿನ ಸಮಯವಾಗುವ ಕಾರಣದಿಂದ ದಂಪತಿಗಳು ನಡೆದುಕೊಂಡು ಸಾಗಿದ್ದಾರೆ ಎಂದು ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ.
 

click me!