ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ ರಾಹುಲ್‌ ಗಾಂಧಿ ಪಾಲಿಗೆ ಜಾತ್ಯಾತೀತ ಪಕ್ಷ!

By Santosh Naik  |  First Published Jun 2, 2023, 10:57 AM IST

ಧರ್ಮದ ಆಧಾರದಲ್ಲಿ ದೇಶ ವಿಭಜನೆಗೆ ಮೂಲ ಕಾರಣವಾಗಿದ್ದ ಮುಸ್ಲಿಂ ಲೀಗ್‌ ಅನ್ನು ಜಾತ್ಯಾತೀತ ಪಕ್ಷ ಎಂದು ರಾಹುಲ್‌ ಗಾಂಧಿ ಕರೆದಿದ್ದಾರೆ. ಇದೇ ಕಾರಣಕ್ಕಾಗಿ ಕೇರಳದಲ್ಲಿ ಅವರೊಂದಿಗೆ ಕೈಜೋಡಿಸಿದ್ದೇವೆ ಎಂದು ರಾಹುಲ್‌ ಹೇಳಿರುವ ಮಾತಿಗೆ ದೇಶದಲ್ಲಿ ವಿರೋಧ ವ್ಯಕ್ತವಾಗಿದೆ.
 


ನವದೆಹಲಿ (ಜೂ.2): ಪ್ರತಿ ಬಾರಿ ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲಾ ದೇಶದ ವಿರುದ್ಧ, ದೇಶದ ಪ್ರಜಾಪ್ರಭುತ್ವ ವಿರುದ್ಧವಾಗಿ ಮಾತನಾಡಿರುವ ರಾಹುಲ್‌ ಗಾಂಧಿಯ ಅಮೆರಿಕ ಪ್ರವಾಸ ಕೂಡ ಇದಕ್ಕೆ ಹೊರತಾಗಿಲ್ಲ. ಹೊಸ ಸಂಸತ್ತಿನ ಕಟ್ಟಡದಲ್ಲಿ ಸ್ಥಾಪಿಸಲಾಗಿರುವಸ ಸೆಂಗೋಲ್‌ ಅನ್ನು ಡ್ರಾಮಾ ಎಂದಿದ್ದ ರಾಹುಲ್‌ ಗಾಂಧಿ, ಹೊಸ ಕಟ್ಟಡದ ಬಗ್ಗೆಯೂ ಟೀಕೆ ಮಾಡಿದ್ದರು. ಗುರುವಾರ ಇನ್ನೊಂದು ಸಭೆಯಲ್ಲಿ ಮಾತನಾಡಿರುವ ರಾಹುಲ್‌ ಗಾಂದಿ ಇಂಡಿಯನ್‌ ಮುಸ್ಲಿಂ ಲೀಗ್‌ಅನ್ನು ಜಾತ್ಯಾತೀತ ಪಕ್ಷ ಎಂದು ಕರೆದಿದ್ದಾರೆ. ಅದಕ್ಕಾಗಿಯೇ ನಾವು ಅವರೊಂದಿಗೆ ಕೇರಳದಲ್ಲಿ ಕೈಜೋಡಿಸಿದ್ದೇವೆ ಎಂದು ತಿಳಿಸಿದ್ದಾರೆ. ಅದರೊಂದಿಗೆ 2024ರ ಚುನಾವಣೆ ಎಲ್ಲರಿಗೂ ಅಚ್ಚರಿ ನೀಡುವುದು ಖಚಿತ. ವಿರೋಧ ಪಕ್ಷಗಳು ಒಟ್ಟಾಗುತ್ತಿವೆ ಎಂದು ಎಚ್ಚರಿಸಿದ್ದಾರೆ. ಆದರೆ, ರಾಹುಲ್‌ ಗಾಂದಿ ಮಾತಿಗೆ ವಿರೋದ ವ್ಯಕ್ತಪಡಿಸಿರುವ ಬಿಜೆಪಿ, ದೇಶವನ್ನು ಧರ್ಮದ ಆಧಾರದಲ್ಲಿ ವಿಜಭನೆ ಮಾಡಲು ಮೂಲ ಕಾರಣವಾಗಿದ್ದೇ ಇಂಡಿಯನ್‌ ಮುಸ್ಲಿಂ ಲೀಗ್‌. ರಾಹುಲ್‌ ಗಾಂಧಿ ಈ ಪಕ್ಷವನ್ನೇ ಜಾತ್ಯಾತೀತ ಪಕ್ಷ ಎಂದು ಕರೆಯುತ್ತಿದ್ದಾರೆ. ಜಿನ್ನಾ ಸ್ಥಾಪನೆ ಮಾಡಿದ್ದ ಇದೇ ಮುಸ್ಲಿಂ ಲೀಗ್‌ ದೇಶ ವಿಭಜನೆಯ ವಿಷ ಬೀಜವನ್ನು ಬಿತ್ತಿತ್ತು. ಕೇರಳದ ವಯ್ನಾಡಿನಲ್ಲಿ ಈಗಲೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಜನರ ಒತ್ತಾಯದ ಮೇರೆಗೆ ರಾಹುಲ್‌ ಗಾಂಧಿ ಈ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದೆ.

ಆರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಗುರುವಾರ ವಾಷಿಂಗ್ಟನ್‌ ಡಿಸಿಯ ರಾಷ್ಟ್ರೀಯ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು ಈ ವೇಳೆ ಅವರಿಗೆ ಕೆರಳದಲ್ಲಿ ಇಂಡಿಯನ್‌ ಯೂನಿಯಮ್‌ ಮುಸ್ಲಿಂ ಲೀಗ್‌ ಜೊತೆ ಕೈಜೋಡಿಸಿರುವ ಬಗ್ಗೆ ಪ್ರಶ್ನೆ ಕೇಳಲಾಯಿತು. 'ಮುಸ್ಲಿಂ ಲೀಗ್‌ ಸಂಪೂರ್ಣವಾಗಿ ಜಾತ್ಯಾತೀತ ಪಕ್ಷ. ಆಡಳಿತ ಪಕ್ಷದ ವಿರುದ್ಧ ಎಲ್ಲಾ ಎದುರಾಳಿಗಳು ಒಗ್ಗಟ್ಟಾಗುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷಗಳೊಂದಿಗೂ ನಾವು ಮಾತುಕತೆ ನಡೆಸುತ್ತಿದ್ದೇವೆ. ಈ ವಿಚಾರದಲ್ಲಿ ತುಂಬಾ ಒಳ್ಳೆಯ ಕೆಲಸಗಳು ಆಗುತ್ತಿವೆ' ಎಂದು ತಿಳಿಸಿದ್ದಾರೆ.

ನಾವು ಇದೇ ಪಕ್ಷಗಳೊಂದಿಗೆ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಹಲವು ವಿಚಾರಗಳ ಬಗ್ಗೆ ಅಭಿಪ್ರಾಯ ರೂಪಿಸಬೇಕಾದರೂ ಚುನಾವಣೆಯಲ್ಲಿ ಒಗ್ಗೂಡುವುದು ಖಚಿತ. ಮತ್ತೆ ಸಂಸದರಾಗಿ ಆಯ್ಕೆಯಾಗುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, 1947ರ ಬಳಿಕ ಮಾನನಷ್ಟ ಮೊಕದ್ದಮೆಯಲ್ಲಿ ಯಾರಿಗಾದರೂ ದೊಡ್ಡ ಶಿಕ್ಷೆ ಆಗಿದ್ದರೆ, ಅದು ನನಗೆ ಮಾತ್ರ. ನಾನು ಸಂಸತ್ತಿನಲ್ಲಿ ಅದಾನಿ ಕುರಿತಾಗಿ ಮಾತನಾಡಿದ್ದೆ. ಅದಕ್ಕೆ ಶಿಕ್ಷೆ ಎನ್ನುವ ರೀತಿಯನ್ನು ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದಿದ್ದಾರೆ.

ಇನ್ನು ರಷ್ಯಾ-ಉಕ್ರೇನ್‌ ಯುದ್ಧದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎನ್ನುವ ಪ್ರಶ್ನೆಗೆ, ಇಂದು ಆಡಳಿತಾರೂಢ ಬಿಜೆಪಿ ಈ ವಿಚಾರದಲ್ಲಿ ಯಾವ ಧೋರಣೆ ತೆಗೆದುಕೊಂಡಿದೆಯೋ ಕಾಂಗ್ರೆಸ್‌ ಪಕ್ಷದ್ದೂ ಕೂಡ ಅದೇ ಧೋರಣೆಯಾಗಿ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ರಷ್ಯಾ ಹಾಗೂ ಭಾರತದ ನಡುವಿನ ಆಪ್ತ ಸಂಬಂಧವನ್ನು ಯಾರೂ ಅಲ್ಲಗೆಳೆಯಲಾರರು. ಹಾಗಾಗಿ ನಮ್ಮ ನೀತಿಗಳು ಈಗಿನ ಸರ್ಕಾರಕ್ಕಿಂತ ಬಹಳ ಭಿನ್ನವಾಗಿರೋದಿಲ್ಲ ಎಂದಿದ್ದಾರೆ.

Watch: ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಅವಮಾನ!

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ದುರ್ಬಲವಾಗುತ್ತಿದೆ ಮತ್ತು ಇದು ಎಲ್ಲರಿಗೂ ತಿಳಿದಿದೆ. ಪ್ರಜಾಪ್ರಭುತ್ವಕ್ಕೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಟೀಕೆಗಳಿಗೆ ಕಿವಿಗೊಡುವುದು ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ. ಕೇಳುವ ಎಲ್ಲವನ್ನೂ ನಾನು ನಂಬುವುದಿಲ್ಲ. ನಾನು ಭಾರತದಾದ್ಯಂತ ಪ್ರವಾಸ ಮಾಡಿದ್ದೇನೆ. ನಾನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಯಾಣಿಸಿದ್ದೇನೆ. ಲಕ್ಷಾಂತರ ಭಾರತೀಯರೊಂದಿಗೆ ನೇರವಾಗಿ ಮಾತನಾಡಿದ್ದೇನೆ. ಆ ಜನರು ಸಂತೋಷವಾಗಿರುವುದನ್ನು ನಾನು ಕಾಣಲಿಲ್ಲ ಮತ್ತು ನಿರುದ್ಯೋಗ ಮತ್ತು ಹಣದುಬ್ಬರದಿಂದಾಗಿ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ದಾಖಲೆಯ ನಿರುದ್ಯೋಗದಿಂದಾಗಿ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಆರ್ಥಿಕತೆಯ ಬಗ್ಗೆ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ನಂಬುವುದು ಕಷ್ಟಕರವೆಂದು ತೋರುತ್ತದೆ ಎಂದಿದ್ದಾರೆ.

Tap to resize

Latest Videos

 

ಬಿಜೆಪಿ ಸೋಲಿಸಲು ಕರ್ನಾಟಕ ತಂತ್ರವೇ ಮಾದರಿ: ರಾಹುಲ್‌ ಗಾಂಧಿ

click me!