PM Modi security breach : ಚನ್ನಿಗೆ ಹೇಳ್ಬಿಡಿ, "ಟೈಗರ್ ಅಭಿ ಜಿಂದಾ ಹೇ" ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮೋದಿ ಅಲೆ!

By Suvarna News  |  First Published Jan 6, 2022, 4:29 PM IST

ಸಾಮಾಜಿಕ ಜಾಲತಾಣದಲ್ಲಿ ಮೋದಿ ಭದ್ರತಾ ಲೋಪ ಟ್ರೆಂಡಿಂಗ್
ಟ್ವಿಟರ್ ನಲ್ಲಿ ಏಕಕಾಲಕ್ಕೆ ಮೂರು ಹ್ಯಾಶ್ ಟ್ಯಾಗ್ ನಲ್ಲಿ ಪೋಸ್ಟ್
ಭದ್ರತಾ ಲೋಪದ ಬಗ್ಗೆ ದೇಶದ ಜನರು ಹೇಳಿದ್ದೇನು
 


ಬೆಂಗಳೂರು (ಜ. 6): ಪಂಜಾಬ್ ನಲ್ಲಿ (Punjab) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭದ್ರತೆಯಲ್ಲಿ ಎಸಗಿದ ಭಾರೀ ಲೋಪ (Security Breach) ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿದೆ. ಪ್ರಕರಣ ಸುಪ್ರೀಂ ಕೋರ್ಟ್ (Supreem Court) ಮೆಟ್ಟಿಲನ್ನೂ ಏರಿದ್ದು ಶುಕ್ರವಾರ ಇದರ ವಿಚಾರಣೆಯಾಗಲಿದೆ. ಪರ-ವಿರೋಧದ ಚರ್ಚೆ ಏನೇ ಇರಬಹುದು, ದೇಶದ ಪ್ರಧಾನ ಹುದ್ದೆಯಲ್ಲಿರುವ ವ್ಯಕ್ತಿಗೆ ಭದ್ರತೆಯಲ್ಲಿ ಆಗಿರುವಂಥ ಲೋಪವನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ ಎಂದು ಕೆಲ ವಿರೋಧ ಪಕ್ಷದ ನಾಯಕರುಗಳು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಈ ವಿಚಾರದಲ್ಲಿ ಸ್ಪಷ್ಟೀಕರಣದ ಮೇಲೆ ಸ್ಪಷ್ಟೀಕರಣ ನೀಡುತ್ತಿದೆ. ಇದರ ನಡುವೆ ಸಾಮಾಜಿಕ ಜಾಲ ತಾಣದಲ್ಲಿ "ಲಾಂಗ್ ಲೈವ್ ಮೋದಿ" (#LongLivePMModi) "ಮೋದಿಜಿ ಜಿಯೋ ಹಜಾರೋ ಸಾಲ್" (#ModiJiJiyoHazaroSaal)ಸಖತ್ ಟ್ರೆಂಡಿಂಗ್ ಆಗಿವೆ.

ಇದರ ನಡುವೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಭೋಪಾಲ್ ನ ಗುಫಾ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರ ದೀರ್ಘ ಆಯಸ್ಸಿಗೆ ವಿಶೇಷ ಪೂಜೆ ಸಲ್ಲಿಸಿದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಭದ್ರತಾ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

"ಭ್ರಷ್ಟಾಚಾರಿಗಳು, ಕ್ರಿಮಿನಲ್ ಗಳು, ಭಯೋತ್ಪಾದಕರು ಖಂಡಿತವಾಗ ಮೋದಿ ಅವರಿಗೆ ಆತಂಕ ನೀಡುತ್ತಾರೆ. ಆದರೆ, ಭಗವಂತ ಹೇಳಿದ ಹಾಗೆ ಧರ್ಮವನ್ನು ರಕ್ಷಿಸುವವನಿಗೆ, ಧರ್ಮ ರಕ್ಷಿಸುತ್ತದೆ. ಅರಾಜಕತವಾದಿಗಳ ಇಂಥ ಹೇಡಿತನದ ಕೃತ್ಯಗಳಿಂದ ಮೋದಿಗೆ ಏನೂ ಆಗುವುದಿಲ್ಲ" ಎಂದು ರವಿ ಭಾರದ್ವಾಜ್ (@RaviBhardwaj__) ಎನ್ನುವವರು ಟ್ವೀಟ್ ಮಾಡಿದ್ದಾರೆ. ಅಭಿಷೇಕ್ ತ್ರಿಪಾಠಿ (@hinduabhishek01) ಎನ್ನುವ ವ್ಯಕ್ತಿ ಮೋದಿ ಅವರ ಫೋಟೋ ಒಂದನ್ನು ಹಂಚಿಕೊಂಡಿದ್ದು, "ಚನ್ನಿಗೆ (ಪಂಜಾಬ್ ಮುಖ್ಯಮಂತ್ರಿ) ಹೇಳ್ಬಿಡಿ, ಟೈಗರ್ ಅಭಿ ಜಿಂದಾ ಹೇ" ಎಂದು ಅದರ ಮೇಲೆ ಬರೆಯಲಾಗಿದೆ.
 

pic.twitter.com/MZczqFalff

— Abhishek Tripathi (@hinduabhishek01)


ಇನ್ನು ಅನುಜ್ ದಾಗರ್ (@TheAnujDagar) ಎನ್ನುವ ವ್ಯಕ್ತಿ, ಮೋದಿ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡಿದ್ದರು, ಈ ವೇಳೆ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯಾವ ರೀತಿಯಲ್ಲಿ ಭದ್ರತೆಯ ವ್ಯವಸ್ಥೆ ಮಾಡಿದ್ದರು ಎಂದು ತಿಳಿಸುವ ನಿಟ್ಟಿನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

PM Security Breach ರಾಷ್ಟ್ರಪತಿ ಭೇಟಿಯಾದ ನರೇಂದ್ರ ಮೋದಿ, ಭದ್ರತಾ ಲೋಪ ಕುರಿತು ಗಂಭೀರ ಚರ್ಚೆ!
"ಒಟ್ಟಾರೆ ಈ ಪ್ರಕರಣದ ವಾಸ್ತವ ಏನೆಂದರೆ, ಯಾರೊಬ್ಬರೂ ಮೋದಿ ಹಿಂದೆ ಇಲ್ಲ. ಅವರೆಲ್ಲ ನಮ್ಮ ಹಿಂದೆ ಇದ್ದಾರೆ. ಆದರೆ, ಮೋದಿ ಅವರ ದಾರಿಗೆ ಅಡ್ಡವಾಗಿ ನಿಂತಿದ್ದಾರೆ' ಎಂದು ವಿಜಯೇಂದ್ರ ಸಿಂಗ್ ಪರ್ಮಾರ್ (@Vijen_parmar) ಎನ್ನುವ ವ್ಯಕ್ತಿ ಬರೆದುಕೊಂಡಿದ್ದಾರೆ. "ಭಾರತ ವಿರೋಧಿ ಶಕ್ತಿಗಳು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತವೆ ಏಕೆಂದರೆ ಜನರು ಅವರನ್ನು ಪ್ರೀತಿಸುತ್ತಾರೆ" ಎಂದು ಶ್ರದ್ಧಾ ಎನ್ನುವವರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರು ದೆಹಲಿಯ ಝಾಂಡೇವಾಲನ್ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯಕ್ಕಾಗಿ 'ಮಹಾಮೃತ್ಯುಂಜಯ ಜಪ' ಮಾಡಿದರು.

PM Modi security breach : ರಾಷ್ಟ್ರಪತಿ, ಮಾಜಿ ಪ್ರಧಾನಿ ದೇವೇಗೌಡ ಕಳವಳ, ಹಿಂದೆಯೂ ಆಗಿತ್ತು ಇಂಥ ಘಟನೆಗಳು!
ಮೋದಿ ಆ ಮಾತು ಹೇಳಬಾರದಿತ್ತು: ಈ ನಡುವೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್, ಭದ್ರತಾ ಲೋಪವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕೆ ಮಾಡಿದ್ದಾರೆ. "ದೇಶದ ಪ್ರಧಾನಿಯ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಕಾಂಗ್ರೆಸ್ ಮತ್ತೊಮ್ಮೆ ಹೇಳಲು ಬಯಸುತ್ತದೆ. ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಪ್ರಧಾನಿ ಆ ಒಂದು ಮಾತನ್ನು ಹೇಳಬಾರದಿತ್ತು (ವಾಪಾಸ್ ಬದುಕಿ ಬಂದೆ ಎಂದು ಮೋದಿ ಹೇಳಿದ್ದರು)' ಎಂದು ತಿಳಿಸಿದ್ದಾರೆ. 

Latest Videos

click me!