
ಎಲ್ಲಾ ರಾಜ್ಯಗಳಲ್ಲಿ ಡಿಸಿಎಂ ಪೋಸ್ಟ್‌ಗಳನ್ನು ಮುಸ್ಲಿಮರಿಗೆ ಮಾತ್ರವಾಗಿ ಮೀಸಲಿಡಬೇಕು ಎಂದು ಅಝಾದುದ್ದೀನಿ ಓವೈಸ್ ನೇತೃತ್ವದ ಆಲ್ ಇಂಡಿಯಾ-ಮಸ್ಜಿದ್-ಇ-ಇತ್ತೆಹಾದ್-ಉಲ್-ಮುಸ್ಲಿಮೀನ್(AIMIM) ಮುಖಂಡ ಅಸಿಂ ವಝರ್ ಬೇಡಿಕೆ ಇಟ್ಟಿದ್ದಾರೆ.
ಈ ವಿಚಾರವಾಗಿ ತಮ್ಮ ಅಭಿಪ್ರಯಗಳನ್ನು ತಿಳಿಸುವಂತೆ ಅಸಿಂ ಅವರು ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ ಹಾಗೂ ಕಾಂಗ್ರೆಸ್‌ಗೆ ತಿಳಿಸಿದ್ದಾರೆ.
ಜನರು ಮುಸ್ಲಿಮರಲ್ಲಿ ಮತ ಚಲಾಯಿಸುವಂತೆ ಕೇಳುತ್ತಾರೆ ಆದರೆ ಅದಕ್ಕೆ ಪ್ರತಿಯಾಗಿ ಮುಸ್ಲಿಮರು ಉಪಮುಖ್ಯಮಂತ್ರಿ ಹುದ್ದೆಯನ್ನು ಕೋರಿದಾಗ ಸಮಸ್ಯೆ ಉಂಟಾಗುತ್ತದೆ ಎಂದು AIMIM ಮುಖಂಡ ತಿಳಿಸಿದ್ದಾರೆ.
ವ್ಯಾಕ್ಸಿನ್ ಬಂದಿಲ್ಲ ಎಂದ ರಾಹುಲ್: ಅಜ್ಞಾನಕ್ಕೆ ವ್ಯಾಕ್ಸಿನ್ ಇಲ್ಲ ಎಂದ ಆರೋಗ್ಯ ಸಚಿವ!
ಈ ಬೇಡಿಕೆಯನ್ನು ಎಐಎಂಐಎಂನ ಮಿತ್ರ ಭಾಗೀಧರಿ ಸಂಕಲ್ಪ ಮೋರ್ಚಾ ಒಪ್ಪುತ್ತದೆಯೇ ಎಂದು ಕೇಳಿದಾಗ ಓಮ್ ಪ್ರಕಾಶ್ ರಾಜ್ಭರ್ ಅವರ ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷವು ಬಿಎಸ್ಎಂ ಅನ್ನು ಮುನ್ನಡೆಸುತ್ತದೆ. ಈ ಪ್ರಸ್ತಾಪವನ್ನು ಖಂಡಿತವಾಗಿ ವಿರೋಧಿಸುವುದಿಲ್ಲ ಎಂದ ಅಸಿಂ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ