ಪ್ರೀತಿಸಿದ ಜೋಡಿಗೆ ಮದ್ವೆಗೆ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಲಾಕ್‌ಡೌನ್‌ನಿಂದ ಬದುಕೇ ಅಂತ್ಯ!

Suvarna News   | Asianet News
Published : May 09, 2020, 06:35 PM IST
ಪ್ರೀತಿಸಿದ ಜೋಡಿಗೆ ಮದ್ವೆಗೆ ಸಿಕ್ಕಿತ್ತು ಗ್ರೀನ್ ಸಿಗ್ನಲ್; ಲಾಕ್‌ಡೌನ್‌ನಿಂದ ಬದುಕೇ ಅಂತ್ಯ!

ಸಾರಾಂಶ

ಲಾಕ್‌ಡೌನ್ ಎಲ್ಲರಿಗೂ ಸಂಕಷ್ಟ ತಂದಿದೆ. ಆರ್ಥಿಕ ಸಂಕಷ್ಟವೇ ಹೆಚ್ಚು. ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲ, ತಿನ್ನಲು ಆಹಾರವಿಲ್ಲ, ಆರೋಗ್ಯ ಸಮಸ್ಯೆ ಇದ್ದವರಿಗೆ ಇನ್ನೂ ಕಷ್ಟ. ಬಡವ, ಶ್ರೀಮಂತ ಸೇರಿದಂತೆ ಎಲ್ಲರಿಗೂ ಒಂದೊಂದು ರೀತಿಯಲ್ಲಿ ಕಷ್ಟ. ಇತ್ತ ಪ್ರೇಮಿಗಳಿಗೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಅನ್ನೋ ಸಂಕಟ. ಆದರೆ ತೆಲಂಗಾಣದ ಆದಿಲ್‌ಬಾದ್ ಜಿಲ್ಲೆಯ ಜೋಡಿಗೆ ಎದುರಾದ ಸಮಸ್ಯೆಯೇ ವಿಚಿತ್ರ.   

ಹೈದರಾಬಾದ್(ಮೇ.09): ಕೆಲ ವರ್ಷಗಳಿಂದ ಪ್ರೀತಿ ಆರಂಭಗೊಂಡಿತ್ತು. ಹುಡುಗನ ವಯಸ್ಸು 22, ಹುಡಿಗಿಯ ವಯಸ್ಸು 20. ಮನೆಯವರ ಒಪ್ಪಿಗೆ ಪಡೆದಿದ್ದರು. ಲಾಕ್‌ಡೌನ್‌ಗೂ ಮುನ್ನ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಲಾಕ್‌ಡೌನ್ ಕಾರಣ 3 ಬಾರಿ ಮದುವೆ ಮುಂದೂಡಲಾಯಿತು. ಇಷ್ಟೇ ನೋಡಿ ಆಗಿದ್ದು, ಈ ಯುವಜೋಡಿಗಳು ತಮ್ಮ ಬದುಕಿಗೆ ಅಂತ್ಯ ಹಾಡಿದ್ದಾರೆ.

ವಿಷಾನಿಲ ಸೋರಿಕೆ ಪ್ರಕರಣ: ಎಲ್‌ಜಿಗೆ 50 ಕೋಟಿ ದಂಡ!.

ಕೃಷಿಕನಾಗಿ ತೊಡಗಿಸಿಕೊಂಡಿದ್ದ ತೆಲಂಗಾಣದ ಆದಿಲ್‌ಬಾದ್ ಜಿಲ್ಲೆಯ ಕನ್ನಾಪುರ್ ಗ್ರಾಮದ 22ರ ಹರಯ ಪೆಂದೂರ್ ಗಣೇಶ್ ಹಾಗೂ ಅದೇ ಗ್ರಾಮದ  20ರ ಹರೆಯ ಸೀತಾಬಾಯಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರಿಗೆ ಹೇಳಿ ಎಲ್ಲರ ಒಪ್ಪಿಗೆ ಪಡೆದು ಮದುವೆಗೆ ತಯಾರಿ ಆರಂಭಿಸಿದ್ದರು. ಲಾಕ್‌ಡೌನ್ ಕಾರಣದಿಂದ ಮದುವೆ ವಿಳಂಬವಾಗುತ್ತಲೇ ಹೋಯಿತು.

ಮೊದಲೇ ಪ್ರೀತಿಸಿ ಮದುವೆಯಾಗುತ್ತಿರುವ ಕಾರಣ ತಮ್ಮ ಮದುವೆ ನಡೆಯುತ್ತೋ ಇಲ್ವೋ ಅನ್ನೋ ಅನಮಾನಗಳು ಕಾಡತೊಡಗಿದೆ. ತೆಲಂಗಾಣದಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುತ್ತಲೇ ಇದೆ. ಹೀಗಾಗಿ ಈ ಜೋಡಿ ನಮ್ಮ ಮದುವೆ ನಡೆಯುವುದೇ ಇಲ್ಲ ಎಂದುಕೊಂಡು ಕ್ರಿಮಿನಾಶಕ ಸೇವಿಸಿ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಇದೀಗ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !