6 ಬ್ಯಾಂಕ್‌ಗಳಿಗೆ 400 ಕೋಟಿ ಪಂಗನಾಮ, ದೇಶ ಬಿಟ್ಟು ಪರಾರಿಯಾದ ವ್ಯಾಪಾರಿ!

Published : May 09, 2020, 01:44 PM ISTUpdated : May 09, 2020, 01:47 PM IST
6 ಬ್ಯಾಂಕ್‌ಗಳಿಗೆ 400 ಕೋಟಿ ಪಂಗನಾಮ, ದೇಶ ಬಿಟ್ಟು ಪರಾರಿಯಾದ ವ್ಯಾಪಾರಿ!

ಸಾರಾಂಶ

ವಿಜಯ್ ಮಲ್ಯ, ನೀರವ್ ಮೋದಿ ಬೆನ್ನಲ್ಲೇ ಮತ್ತೊಬ್ಬ ವ್ಯಾಪಾರಿ ವಿದೇಶಕ್ಕೆ ಪರಾರಿ| ಬ್ಯಾಂಕ್ಗಳಿಂದ ಕೊಟ್ಯಾಂತರ ರೂಪಾಯಿ ಮೊತ್ತ ಸಾಲ ಪಡೆದಿದ್ದ ಅಕ್ಕಿ ಕಂಪನಿ ವ್ಯಾಪಾರಿ| ನಾಲ್ಕು ವರ್ಷದಿಂದ ಪತ್ತೆ ಇಲ್ಲ

ನವದೆಹಲಿ(ಮೇ.09): ಭಾರತೀಯ ಬ್ಯಾಂಕ್‌ಗಳಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು, ಅದನ್ನು ಪಾವತಿಸದೆ ವಿದೇಶಕ್ಕೆ ಪರಾರಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಈ ಪಟ್ಟಿಗೆ ಬಾಸ್ಮತಿ ಅಕ್ಕಿ ವ್ಯಾಪಾರ ನಡೆಸುವ ಕಂಪನಿ ರಾಮ್‌ದೇವ್ ಇಂಟರ್‌ ನ್ಯಾಷನಲ್ ಲಿಮಿಟೆಡ್‌ನ ಮಾಲೀಕನ ಹೆಸರೂ ಸೇರ್ಪಡೆಯಾಗಿದೆ. 

ದೆಹಲಿ ನಿವಾಸಿಯಾಗಿರುವ ಈ ಕಂಪನಿ ಒಡೆಯ ಎಸ್‌ಬಿಐ ಸೇರಿ ಇನ್ನಿತರ ಕೆಲ ಬ್ಯಾಂಕ್‌ಗಳಿಂದ ಸುಮಾರು 400 ಕೋಟಿ ಸಾಲ ಪಡೆದಿದ್ದರೆಂಬ ಆರೋಪ ಕೇಳಿ ಬಂದಿದೆ. ಹೀಗಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಇವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೀಗ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಬಿಐ ನೀಡಿರುವ ದೂರಿನ ಮೇರೆಗೆ ಸಿಬಿಐ ಕಂಪನಿ ಮಾಲೀಕ ಹಾಗೂ ಅವರ ನಾಲ್ವರು ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಎಸ್‌ಬಿಐ ನಡೆಸಿದ ತನಿಖೆಯಲ್ಲಿ ಮಾಲೀಕ ಸುಮಾರು ಆರು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದು, 2016ರಿಂದಲೇ ತಲೆಮರೆಸಿಕೊಂಡಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.

ಚೋಕ್ಸಿ, ಮಲ್ಯ ಸೇರಿ 50 ಸುಸ್ತಿದಾರರ 68 ಸಾವಿರ ಕೋಟಿ ರೂ ಸಾಲ ‘ಮನ್ನಾ’!

2016ರಲ್ಲೇ ಈ ಕಂಪನಿಯನ್ನು ಎನ್‌ಪಿಎ ಎಂದು ಘೋಷಿಸಿತ್ತು. ಇದಾದ ನಾಲ್ಕು ವರ್ಷಗಳ ಬಳಿಕ ಫೆಬ್ರವರಿಯಲ್ಲಿ ಎಸ್‌ಬಿಐ ದೂರು ನಿಡಿತ್ತು. ಇದಾದ ಬಳಿಕ ಏಪ್ರಿಲ್ 28 ರಂದು ಸಿಬಿಐ FIR  ದಾಖಲಿಸಿದೆ.

ಸದ್ಯ ಲಭ್ಯವಾದ ಮಾಹಿತಿ ಅನ್ವಯ ರಾಮ್‌ದೇವ್ ಇಂಟರ್‌ ನ್ಯಾಷನಲ್ ಒಟ್ಟು 414 ಕೋಟಿ ರೂಪಾಯಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಇದರಲ್ಲಿ 173.11 ಕೋಟಿ ಎಸ್‌ಬಿಐನಿಂದ ಪಡೆದಿದ್ದರೆ, 76.09 ಕೋಟಿ ಕೆನರಾ ಬ್ಯಾಂಕ್, 64.31 ಕೋಟಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, 51.31 ಕೋಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, 51.31 ಕೋಟಿ ಕೋ-ಆಪರೇಷನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ 51.31 ಕೋಟಿ ಐಡಿಬಿಐ ಬ್ಯಾಂಕ್‌ನಿಂದ ಎನ್ನಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Cockroach Janata Party ಅಸಲಿ ಮುಖ ಬಯಲು?: ಪ್ರಧಾನಿ ಮೋದಿ ವಿರುದ್ಧ ಸಂಚಿಗೆ ಗಡಿಯಾಚೆ ಪ್ಲಾನ್? ರಾಜೀವ್ ಚಂದ್ರಶೇಖರ್ ಸ್ಫೋಟಕ ಹೇಳಿಕೆ!
India News Live: ಇಂದು ಐಪಿಎಲ್ ಪ್ಲೇ-ಆಫ್‌ ರೇಸ್‌ ಕ್ಲೈಮ್ಯಾಕ್ಸ್‌ - ರಾಜಸ್ಥಾನ, ಕೋಲ್ಕತಾ ಭವಿಷ್ಯ ನಿರ್ಧಾರ