ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಹುಲ್ ಟ್ವಿಟ್ ದಾಳಿ/ ಡಿಮಾನಿಟೈಸೇಶನ್ ಪರಿಣಾಮ ಈಗ ಗೊತ್ತಾಗುತ್ತಿದೆ/ ದೇಶದ ಅಸಂಘಟಿತ ವಲಯದ ಮೇಲೆ ಅತಿ ಕೆಟ್ಟ ಪರಿಣಾಮ ಬೀರಿದ ನಿರ್ಧಾರ
ನವದೆಹಲಿ(ಸೆ. 03) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ವಿಡಿಯೋ ಒಂದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗಿ ಡಿಮಾನಿಟೈಸೇಶನ್ ವಿಚಾರ ಮತ್ತೆ ಟೀಕೆ ಮಾಡಿದ್ದಾರೆ.
2016ರಲ್ಲಿ ನೋಟು ಅನಾನ್ಯೀಕರಣ ಬಡವರು, ರೈತರು, ಅಸಂಘಟಿತ ವಲಯಗಳ ಮೇಲೆ ದಾಳಿ ನಡೆಸಿದಂತಾಯಿತು ಎಂದಿದ್ದಾರೆ. ಚಿಕ್ಕ ಚಿಕ್ಕ ಉದ್ದಿಮೆದಾರರು, ರೈತರು ಮತ್ತು ಇಡೀ ದೇಶದ ಮೇಲೆ ಅಮಾನ್ಯೀಕರಣ ಕೆಟ್ಟ ಪರಿಣಾಮ ಬೀರಿತು. ಮೋದಿಯವರ ಕ್ಯಾಶ್ ಫ್ರೀ ಇಂಡಿಯಾ ಎಂಬುದು ಚಿಕ್ಕ ಉದ್ದಿಮೆದಾರರು-ರೈತರು-ಕಾರ್ಮಿಕರು ಮುಕ್ತ ಭಾರತವಾಯಿತು ಎಂದು ವ್ಯಂಗ್ಯವಾಡಿದ್ದಾರೆ.
undefined
ಮೋದಿ ನಿರ್ಮಿತ ಆರು ವಿಪತ್ತುಗಳ ಪಟ್ಟಿ ಕೊಟ್ಟ ರಾಹುಲ್ ಗಾಂಧಿ
2016ರ ನವೆಂಬರ್ 8ರ ನೋಟು ಅಮಾನ್ಯೀಕರಣದ ಪರಿಣಾಮ ಏನು ಎಂಬುದು ಆಗಸ್ಟ್ 31, 2020ಕ್ಕೆ ಗೊತ್ತಾಗಿದೆ ಎಂದು ಜಿಎಸ್‌ಟಿ ಮಹಾಕುಸಿತದ ವಿಚಾರ ಇಟ್ಟುಕೊಂಡು ಟೀಕಿಸಿದ್ದಾರೆ.
ಜೂನ್ 30ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕಳೆದ 40 ವರ್ಷಗಳಲ್ಲಿ ಶೇಕಡಾ 23.9ರಷ್ಟು ಕುಸಿದಿದೆ ಎಂದು ಸರ್ಕಾರವೇ ಮಾಹಿತಿ ನೀಡಿದೆ. ನೋಟು ನಿಷೇಧದ ಹಿಂದಿನ ಅವರ ರಾಜಕೀಯ ಉದ್ದೇಶಗಳೇನಾಗಿದ್ದವು? ಕಾರ್ಪೊರೇಟ್ ವಲಯಗಳ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಲು ಅಸಂಘಟಿತ ವಲಯದ ಜನರ ಹಣವನ್ನು ಮೋದಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಎಸ್ಟಿ ಮಹಾಕುಸಿತ ಕಂಡ ನಂತರ ರಾಹುಲ್ ಕೇಂದ್ರ ಮತ್ತು ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮಾಡುತ್ತಲೆ ಬಂದಿದ್ದಾರೆ. ಇದೀಗ ಅಮಾನ್ಯೀಕರಣದ ವಿಚರ ಮತ್ತೆ ಎತ್ತಿದ್ದಾರೆ.