ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ : ಭಾರತದ ಬೆಂಬಲಕ್ಕೆ ನಿಂತ ಫ್ರಾನ್ಸ್!

By Suvarna NewsFirst Published Sep 3, 2020, 3:44 PM IST
Highlights

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತ ಕಳೆದ ಹಲವು ದಶಕಗಳಿಂದ ಹೋರಾಡುತ್ತಿದೆ. ಇದೀಗ ಭಾರತಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದೀಗ ಫ್ರಾನ್ಸ್ ಕೂಡ ಭಾರತಕ್ಕೆ ಶಾಶ್ವತ ಸ್ಥಾನಕ್ಕಾಗಿ ಬೆಂಬಲ ಸೂಚಿಸಿದೆ.

ನವದೆಹಲಿ(ಸೆ.03): ಕಳೆದ ಹಲವು ದಶಕಗಳಿಂದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(UNSC)ಖಾಯಂ ಸ್ಥಾನಕ್ಕಾಗಿ ಹೋರಾಡ ಮಾಡಿದೆ. ಪ್ರತಿ ಭಾರಿ ಒಂದಲ್ಲ ಒಂದು ಅಡೆ ತಡೆಗಳು ಎದುರಾಗಿದೆ. ಭಾರತದೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಫ್ರಾನ್ಸ್, ಭಾರತಕ್ಕೆ UNSC ಶಾಶ್ವತ ಸ್ಥಾನ ನೀಡಲು ಬೆಂಬಲ ಸೂಚಿಸಿದೆ. ಈ ಮೂಲಕ ಭಾರತಕ್ಕೆ ಇದೀಗ ಬಹುತೇಕ ರಾಷ್ಟ್ರಗಳು ಬೆಂಬಲ ಸೂಚಿಸಿದಂತೆ ಆಗಿದೆ.

ವಿಶ್ವಸಂಸ್ಥೆಯಲ್ಲಿ ಚೀನಾ ಮೇಲೆ ಮುಗಿಬಿದ್ದ ಅಮೆರಿಕ!.

ರಾಫೆಲ್ ಯುದ್ಧ ವಿಮಾನ ಖರೀದಿ ಬಳಿಕ ಭಾರತ ಹಾಗೂ ಫ್ರಾನ್ಸ್ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಚೀನಾ ಗಡಿ ಸಮಸ್ಯೆ ಬೆನ್ನಲ್ಲೇ ರಾಫೆಲ್ ಯುದ್ದ ವಿಮಾನಗಳನ್ನು ಶೀಘ್ರದಲ್ಲೇ ಪೂರೈಸಲು ಭಾರತ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಫ್ರಾನ್ಸ್ ರಾಫೆಲ್ ವಿಮಾನಗಳನ್ನು ಭಾರತಕ್ಕೆ ನೀಡಿತ್ತು. ಈ ಮೂಲಕ ಭಾರತದ ಹಾಗೂ ಫ್ರಾನ್ಸ್ ಸಂಬಂಧ ಹಿಂದೆಂದಿಗಿಂತಲೂ ಸುಬಧ್ರವಾಗಿದೆ. ಹೀಗಾಗಿ ಇದೀಗ ಭಾರತ ಹಾಗೂ ಜಿ4 ರಾಷ್ಟ್ರಗಳಿಗೆ ವಿಶ್ವ ಸಂಸ್ಥೆ ಭದ್ರತಾ ಸಮಿತಿಯಲ್ಲಿ ಶಾಶ್ವತ ಸ್ಥಾನಕ್ಕೆ ಫ್ರಾನ್ಸ್ ಬೆಂಬಲ ನೀಡಿದೆ.

ಕರ್ನಾಟಕಕ್ಕೆ ‘ಹಿಂದ್‌ ವಿಲಾಯಾ’ 200 ಉಗ್ರರ ಬೆದರಿಕೆ; ವಿಶ್ವಸಂಸ್ಥೆಯಿಂದ ಎಚ್ಚರಿಕೆ.

ಭಾರತ, ಬ್ರೆಜಿಲ್, ಜಪಾನ್ ಹಾಗೂ ಜರ್ಮನಿ ಸೇರಿದ ಜಿ4 ರಾಷ್ಟ್ರಗಳಿಗೆ  UNSC ಶಾಶ್ವತ ಸ್ಥಾನ ಮಾನ ಕುರಿತು ಬ್ಯಾಟ್ ಬೀಸಿದ್ದಾರೆ.  UNSC ಬದಲಾವಣೆ ಅಗತ್ಯವಿದೆ. ಈ ಬದಲಾವಣೆಯಲ್ಲಿ ಪ್ರಮುಖವಾಗಿ ಜಿ4 ರಾಷ್ಟ್ರಗಳಿಗೆ ಸ್ಥಾನ ಮಾನ ಎಂದು ಫ್ರಾನ್ಸ್ ಹೇಳಿದೆ. 

ವಿಶ್ವ ಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಸಮಾನ ಪ್ರಾತಿನಿಧ್ಯದ ಪ್ರಶ್ನೆಯ ಕುರಿತು ಅಂತರ್ ಸರ್ಕಾರ ಮಾತುಕತೆಗಳ ಜವಾಬ್ದಾರಿಗಳ  ಬಗ್ಗೆ ಕರಡು ನಿರ್ಧಾರದ ಕುರಿತು ವಿಶ್ವ ಸಂಸ್ಥೆಯ ಉಪ ಖಾಯಂ ಪ್ರತಿನಿಧಿ ಕೆ.ನಾಗರಾಜ್ ನಾಯ್ಡು   ಪತ್ರವೊಂದನ್ನು ಬರೆದಿದ್ದರು. ಇದೀಗ ಫ್ರಾನ್ಸ್ ಕೂಡ ಇದನ್ನೇ ಒತ್ತಿ ಹೇಳಿದೆ.

click me!