Kartarpur Sahib Corridor ತೆರೆಯಲು ಮೋದಿ ಭೇಟಿಯಾದ ಬಿಜೆಪಿ ನಿಯೋಗ!

By Suvarna NewsFirst Published Nov 14, 2021, 2:03 PM IST
Highlights

* ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಂಜಾಬ್‌ನ ನಿಯೋಗ

* Kartarpur Sahib Corridor ತೆರೆಯಲು ಪ್ರಧಾನಿಗೆ ಮನವಿ

* ಕರ್ತಾರ್‌ಪುರ್ ಕಾರಿಡಾರ್‌ ತೆರೆಯುವಂತೆ  ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಮನವಿ

ನವದೆಹಲಿ(ನ.14): ಭಾರತೀಯ ಜನತಾ ಪಾರ್ಟಿ (BJP) ಪಂಜಾಬ್‌ನ ನಿಯೋಗವು ಭಾನುವಾರ ಪ್ರಧಾನಿ ಮೋದಿಯನ್ನು (Prime Minister Narendra Modi) ಭೇಟಿ ಮಾಡಿದೆ. ಪ್ರಧಾನಿ ಭೇಟಿಗೆ ಬಂದಿದ್ದ ನಿಯೋಗವು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ (Kartarpur Sahib Corridor) ಅನ್ನು ಪುನರಾರಂಭಿಸುವಂತೆ ಒತ್ತಾಯಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಈ ಕಾರಿಡಾರ್ ಅನ್ನು ಮುಚ್ಚಲಾಗಿತ್ತು. ಬಿಜೆಪಿ ನಿಯೋಗದ ಸಭೆಗೂ ಒಂದು ದಿನ ಮೊದಲು, ಎಸ್‌ಜಿಪಿಸಿ ಅಧ್ಯಕ್ಷೆ ಬೀಬಿ ಜಾಗೀರ್ ಕೌರ್, ಶಿರೋಮಣಿ ಅಕಾಲಿದಳದ ನಾಯಕಿ ಮತ್ತು ಮಾಜಿ ಸಚಿವ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಈ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಇದನ್ನು ತೆರೆಯುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ಬಿಜೆಪಿ ನಿಯೋಗದಲ್ಲಿ ಇದ್ದಾರೆ ಈ ನಾಯಕರು

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಸೌದನ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಸಿಂಗ್, ತರುಣ್ ಚುಗ್, ರಾಷ್ಟ್ರೀಯ ಸಚಿವ ಡಾ. ನರೇಂದ್ರ ಸಿಂಗ್, ರಾಷ್ಟ್ರೀಯ ವಕ್ತಾರ ಸರ್ದಾರ್ ಆರ್.ಪಿ.ಸಿಂಗ್, ಬಿಜೆವೈಎಂನ ರಾಷ್ಟ್ರೀಯ ಸಚಿವ ತಜೀಂದರ್ ಸಿಂಗ್ ಬಗ್ಗಾ, ಹರ್ಜಿತ್ ಸಿಂಗ್ ಗ್ರೇವಾಲ್, ರಾಜಿಂದರ್ ಮೋಹನ್ ಸಿಂಗ್ ಚೀನಾ ನಿಯೋಗದಲ್ಲಿದ್ದರು. ಪ್ರಧಾನಿ ಭೇಟಿಗೆ ಆಗಮಿಸಿದ್ದರು. ಸರ್ದಾರ್ ದಯಾಳ್ ಸೋಧಿ, ವಿಕ್ರಮ್‌ಜಿತ್ ಸಿಂಗ್ ಚೀಮಾ, ಸಂತೋಖ್ ಸಿಂಗ್ ಗುಮ್ಟಾಲಾ ಪಾಲ್ಗೊಂಡಿದ್ದರು.

ಎಲ್ಲಾ ಪಕ್ಷಗಳು ಏಕೆ ಸಕ್ರಿಯವಾಗಿವೆ?

ವಾಸ್ತವವಾಗಿ, ಕಾರಿಡಾರ್ ಅನ್ನು ಮತ್ತೆ ತೆರೆಯುವ ಭಾರತದ ಬೇಡಿಕೆಯನ್ನು ಇನ್ನೂ ಕೇಳಲಾಗಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿ ಹೇಳಿದೆ. ಈ ಕಾರಿಡಾರ್ ಸಿಖ್ ಅನುಯಾಯಿಗಳ ನಂಬಿಕೆಯ ದೊಡ್ಡ ಕೇಂದ್ರವಾಗಿದೆ. ಇದೀಗ ಕೋವಿಡ್-19 ಪ್ರಕರಣಗಳು ಕೂಡ ಕಡಿಮೆಯಾಗುತ್ತಿದ್ದು, ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಧಾರ್ಮಿಕ ನಂಬಿಕೆಯ ಕೇಂದ್ರವನ್ನು ಮತ್ತೆ ತೆರೆಯಲು ರಾಜಕೀಯ ಪಕ್ಷಗಳಿಗೆ ಪೈಪೋಟಿ ಏರ್ಪಟ್ಟಿದೆ.

19ರಂದು ಗುರುನಾನಕ್ ಜಯಂತಿ

ನವೆಂಬರ್ 19 ಸಿಖ್ ಗುರು ಗುರುನಾನಕ್ ಅವರ ಜನ್ಮದಿನವಾಗಿದೆ. ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು 2019 ರಲ್ಲಿ ಇದೇ ದಿನಾಂಕದಂದು ಉದ್ಘಾಟಿಸಲಾಯಿತು. ಅಂದರೆ, ಈ ಬಾರಿ ಅದರ ಎರಡನೇ ವಾರ್ಷಿಕೋತ್ಸವವೂ ಆಗಿದೆ. ಗುರುನಾನಕ್ ದೇವ್ ಅವರ 550 ನೇ ಜನ್ಮದಿನದ ಮುನ್ನಾದಿನದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾರಿಡಾರ್ ಅನ್ನು ಉದ್ಘಾಟಿಸಿದರು.

3 ಸಾವಿರ ಸಿಖ್ಖರಿಗೆ ತೀರ್ಥಯಾತ್ರೆಗೆ ಅನುಮತಿ ನೀಡಬಹುದು

ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, 3,000 ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಗುರುಪುರಬ್ ಆಚರಣೆಗಾಗಿ ಪಾಕಿಸ್ತಾನಕ್ಕೆ ಪ್ರವೇಶಿಸಲು ಅನುಮತಿಸಬಹುದು. ಅಟ್ಟಾರಿ-ವಾಘಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ನವೆಂಬರ್ 17 ರಿಂದ 26 ರವರೆಗೆ ಪಾಕಿಸ್ತಾನದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಭಾರತ ಸರ್ಕಾರ 1,500 ಯಾತ್ರಿಗಳಿಗೆ ಅವಕಾಶ ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಈ ಬಾರಿ, ಪ್ರಯಾಣಿಸುವವರಿಗೆ ಲಾಹೋರ್, ಹಸನ್ ಅಬ್ದಲ್, ಕರ್ತಾರ್‌ಪುರ ಮತ್ತು ಫಾರೂಕಾಬಾದ್‌ನ ನಂಕಾನಾ ಸಾಹಿಬ್ ಮತ್ತು ಗುರುದ್ವಾರಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.

ಸಿಖ್ ಅನುಯಾಯಿಗಳು ಈ ತೀರ್ಥಯಾತ್ರೆಗೆ ಏಕೆ ಭೇಟಿ ನೀಡುತ್ತಾರೆ?

ಕರ್ತಾರ್‌ಪುರ ಗ್ರಾಮವು ರಾವಿ ನದಿಯ ಪಶ್ಚಿಮ ದಂಡೆಯಲ್ಲಿದೆ. ಇಲ್ಲಿ ಶ್ರೀ ಗುರುನಾನಕ್ ದೇವ್ (Guru Nanak) ಅವರು ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದರು. ಗುರುದ್ವಾರ ಶ್ರೀ ಕರ್ತಾರ್ಪುರ್ ಸಾಹಿಬ್ ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿ ಸುಮಾರು 4.5 ಕಿಮೀ ದೂರದಲ್ಲಿದೆ.

click me!