ದೇಶದಲ್ಲಿ ಎಲ್ಲ ಗರ್ಭಿಣಿಯರ ಭ್ರೂಣಗಳಿಗೂ ಡಿಜಿಟಲ್ ಕೋಡ್ ನೀಡಬೇಕು ಎಂದು ಆಗ್ರಹಿಸಿ ದಾವಣಗೆರೆ ಯುವಕನೊಬ್ಬ 3,650 ಕಿ.ಮೀ. ಪಾದಯಾತ್ರೆ ಆರಂಭಿಸಿದ್ದಾನೆ.
ಚಾಮರಾಜನಗರ (ಅ.08): ದೇಶದಲ್ಲಿ ಎಷ್ಟೇ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿದ್ದರೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ. ಆದ್ದರಿಂದ ಇನ್ನುಮುಂದೆ ದೇಶಾದ್ಯಂತ ಗರ್ಭಿಣಿಯಾದ ಎಲ್ಲ ಮಹಿಳೆಯರ ಹೊಟ್ಟೆಯಲ್ಲಿರುವ ಭ್ರೂಣಕ್ಕೂ ಡಿಜಿಟಲ್ ಕೋಡ್ ನೀಡಬೇಕು ಎಂದು ದಾವಣಗೆರೆ ಯುವಕ ಆಗ್ರಹಿಸಿದ್ದಾರೆ.
ದೇಶದಲ್ಲಿ ಲಿಂಗ ತಾರತಮಯ್ಯ ಈಗಲೂ ಹೆಚ್ಚಾಗಿ ನಡೆಯುತ್ತಿದೆ. ದೇಶವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಪುರುಷ ಪ್ರಧಾನ ಸಮಾಜ ಮಾತ್ರ ಲಿಂಗ ತಾರತಮ್ಯವನ್ನು ಮಾಡುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಆದ್ದರಿಂದ ದೇಶಾದ್ಯಂತ ಎಲ್ಲ ಗರ್ಭಿಣಿಯರಿಗೆ ಮೊದಲ ಆಸ್ಪತ್ರೆಯ ತಪಾಸಣೆಯ ಅವಧಿಯಲ್ಲಿಯೇ ಭ್ರೂಣಕ್ಕೂ ಡಿಜಿಟಲ್ ಕೋಡ್ ನೀಡಬೇಕು. ಈ ಮೂಲಕ ಪ್ರತಿ ಬಾರಿ ತಪಾಸಣೆ ಮಾಡಿಸಿಕೊಂಡಾ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ತಿಳಿಯಲಿದೆ. ಒಂದು ವೇಳೆ ಭ್ರೂಣ ಹತ್ಯೆ ಮಾಡಿದರೂ ಸುಲಭವಾಗಿ ಅದನ್ನು ಪತ್ತೆಹಚ್ಚಬಹುದು ಎಂದು ಯುವಕ ತಿಳಿಸಿದ್ದಾನೆ.
undefined
ಬೆಂಕಿ ಭಾನುವಾರ: ಮಂಡ್ಯದ ಮನ್‌ಮುಲ್, ಶಿವಮೊಗ್ಗ ಮನೆ, ಕೊಡಗು ಶಾಲಾ ಬಸ್‌ನಲ್ಲಿ ಬೆಂಕಿ- ನಾಲ್ವರ ಸಾವು
ಈತ ದಾವಣಗೆರೆ ಮೂಲದ ಸಿಎಂ ಜಕ್ಕಾಳಿ ಎಂಬ ಯುವಕನಾಗಿದ್ದಾನೆ. ಎಲ್ಲ ಭ್ರೂಣಗಳಿಗೂ ಡಿಜಿಡಲ್ ಕೋಡ್ ನೀಡಬೇಕು ಎಂದು ಆಗ್ರಹಿಸಿ ಕನ್ಯಾಕುಮಾರಿಯಿಂದ ದೆಹಲಿವರೆಗೆ ಒಟ್ಟು 3,650 ಕಿ.ಮೀ. ಪಾದಯಾತ್ರೆಯನ್ನು ಆರಂಭಿಸಿದ್ದಾನೆ. ಈ ಮೂಲಕ ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಕ್ಕು ಡಿಜಿಟಲ್ ಕೋಡ್ ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾನೆ. ಕನ್ಯಾಕುಮಾರಿಯಿಂದ ಚಾಮರಾಜನಗರ ತಲುಪಿದ ಪಾದಯಾತ್ರೆಯ ವೇಳೆ ಸುದ್ದಿಗೋಷ್ಠಿ ನಡೆಸಿ ತಮ್ಮ ಆಗ್ರಹವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾನೆ.
ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಭ್ರೂಣದ ಹಂತದಲ್ಲೇ ಡಿಜಿಟಲ್ ಕೋಡ್ ನೀಡಬೇಕು. ಡಿಜಿಟಲ್ ಕೋಡ್‌ನಿಂದ ಭ್ರೂಣ ಹತ್ಯೆ ನಿಯಂತ್ರಣವಾಗಲಿದ್ದು, ಲಿಂಗಾನುಪಾತದ ಅಸಮಾನತೆ ಕೂಡ ದೂರವಾಗಲಿದೆ. ಜೊತೆಗೆ, ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮಾರಾಟ ತಡೆಗೂ ಸಾಧ್ಯವಾಗಲಿದೆ ಎಂದು ತಿಳಿಸಿದರು. ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನ ಸೆಳೆಯಲು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ವಿಚಾರವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.