ಕೊರೋನಾ ನಡುವೆ ಕಡಕ್‌ನಾತ್ ಕೋಳಿಗೆ ಭಾರೀ ಬೇಡಿಕೆ!| ಮದ್ಯಪ್ರದೇಶದ ಬುಡಕಟ್ಟು ಜಿಲ್ಲೆ ಜಬುವಾದಿಂದ ಈ ಕೋಳಿಯ ತಳಿ| ಕೊರೋನಾದಿಂದಾಗಿ ಬೇಡಿಕೆಯಲ್ಲಿ ಭಾರೀ ಏರಿಕೆ
ಭೋಪಾಲ್(ಜು. 20): ಕೊರೋನಾದಿಂದಾಗಿ ಪ್ರೊಟೀನ್ ಭರಿತ ‘ಕಡಕ್‌ನಾತ್’ ಕೋಳಿ ತಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆಯಂತೆ.
ಮದ್ಯಪ್ರದೇಶದ ಬುಡಕಟ್ಟು ಜಿಲ್ಲೆ ಜಬುವಾದಿಂದ ಈ ಕೋಳಿಯ ತಳಿ ದೇಶಾದ್ಯಂತ ಮಾರಾಟವಾಗುತ್ತಿದ್ದು, ಕೊರೋನಾದಿಂದಾಗಿ ಬೇಡಿಕೆಯಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಜಬುವಾದ ಕೃಷಿ ವಿಜ್ಞಾ ನ ಕೇಂದ್ರ ಹೇಳಿದೆ. ಲಾಕ್‌ಡೌನ್ ವೇಳೆ ಸಂಚಾರಕ್ಕೆ ನಿಯಂತ್ರಣ ಇದ್ದಿದ್ದರಿಂದ ಬೇಡಿಕೆಯಲ್ಲಿ ಕುಸಿಯ ಉಂಟಾಗಿತ್ತು.
ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು 75 ಜನರ ಪ್ರಾಣ!
ಲಾಕ್‌ಡೌನ್ ಸಡಿಲಿಕೆಗೊಂಡ ಬಳಿಕ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು, ಆರ್ಡರ್ ಮಾಡಿದ ಎರಡು ತಿಂಗಳ ಬಳಿಕ ಪೂರೈಕೆ ಮಾಡಲಾಗುತ್ತಿದೆ. ಕೆಲವರು ಸ್ವಂತ ವಾಹನಗಳಲ್ಲಿ ಬಂದು ಖರೀದಿ ಮಾಡುತ್ತಿದ್ದಾರೆ.
ಕಪ್ಪು ಬಣ್ಣದ ಕೋಳಿ ಇದಾಗಿದ್ದು, ಇತರೆ ಫಾರಂ ಕೋಳಿಗಿಂತ ಇದು ಹೆಚ್ಚು ಪ್ರೋಟಿನ್‌ಯುಕ್ತ ಹಾಗೂ ಸ್ವಾದ ಭರಿತ. ಔಷಧೀಯ ಗುಣಗಳಿರುವ ಈ ಕೋಳಿಗಳಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು.