ದೆಹಲಿಯಲ್ಲಿ ಭಾರೀ ಮಳೆ, ಕ್ಯಾಮೆರಾದಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ!

By Suvarna News  |  First Published Jul 20, 2020, 11:46 AM IST

ಕೊರೋನಾತಂಕ ನಡುವೆ ಜನರ ನಿದ್ದೆಗೆಡಿಸಿದ ಪ್ರವಾಹ| ನೊಡ ನೋಡುತ್ತಿದ್ದಂತೆಯೇ ಕೊಚ್ಚಿ ಹೋಯ್ತು ಮನೆ| ಶಾಕಿಂಗ್ ದೃಶ್ಯ ಕ್ಯಾಮೆರಾದಲ್ಲಿ ಸೆರೆ


ನವದೆಹಲಿ(ಜು.20): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯಬ್ಬರ ಮುಂದುವರೆದಿದೆ. ಭಾನುವಾರ ಬೆಳಗ್ಗಿನಿಂದ ಎಗ್ಗಿಲ್ಲದೆ ಸುರಿಯುತ್ತಿರುವ ಮಳೆಗೆ ಭಾರೀ ಹಾನಿ ಸಂಭವಿಸಿದೆ. ಇಲ್ಲಿನ ಅನೇಕ ಕ್ಷೇತ್ರಗಳಿಗೆ ನೀರು ನುಗ್ಗಿದ್ದು, ಅನೇಕ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸದ್ಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರ್ ಆಗಿದ್ದು, ದೃಶ್ಯಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಿವೆ.

ಐಟಿಒ ಸಮೀಪ ಅಣ್ಣಾ ನಗರದಲ್ಲಿ ಸುರಿದ ಭಾರೀ ಮಳೆಗೆ ಮನೆಯೊಂದು ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಘಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

दिल्ली के आईटीओ के पास अन्ना नगर में पानी में कई मकान बह गए ,बारिश के पहले न नाले साफ हुए सीवर,इसलिए ये हाल है,राजधानी की इससे बदतर हालत क्या हो सकती है pic.twitter.com/Oq66qV7xD7

— Mukesh singh sengar मुकेश सिंह सेंगर (@mukeshmukeshs)

Latest Videos

undefined

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಗ್ಗಿನಿಂದ ಭಾರೀ ಮಳೆ ಸುರಿಯಲಾರಂಭಿಸಿದೆ. ಐಟಿಒ, ಮಂಟೋ ಬ್ರಿಜ್ ಸೇರಿ ಅನೇಕ ಪ್ರದೇಶಗಳು ನೀರಿನಿಂದಾವರಿಸಿಕೊಂಡಿವೆ. ಇನ್ನು ಹವಾಮಾನ ಇಲಾಖೆ ಕೂಡಾ ದೆಹಲಿಯಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯುವ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಜನರಿಗೆ ಎಚ್ಚರಿಕರೆಯಿಂದಿರುವಂತೆ ಸೂಚಿಸಿದೆ.

ಅತ್ತ ಅಸ್ಸಾಂ, ಬಿಹಾರದಲ್ಲೂ ಮಳೆಯಿಂದ ಪ್ರವಾಹ ಉಂಟಾಗಿದೆ. ಇದರಿಂದ ಅನೇಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಅತ್ತ ಅಸ್ಸಾಂನಲ್ಲಿ ಪ್ರವಾಹದಿಂದ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಒಂದೆಡೆ ಕೊರೋನಾತಂಕ ದೇಶದೆಲ್ಲೆಡೆ ಜನರನ್ನು ಭಯ ಭೀತರನ್ನಾಗಿಸಿದರೆ, ಇತ್ತ ಮಳೆ ಹಾಗೂ ಭೀಕರ ಪ್ರವಾಹ ಜನರ ಸಂಕಷ್ಟವನ್ನು ಮತ್ತಷ್ಟು ಹಚ್ಚಿಸಿದೆ.

click me!