ಮೊಟ್ಟೆ, ಮಾಂಸವಿಲ್ಲದ ಆಹಾರ, ಇದು ದೇಶದ ಮೊದಲ ಸಸ್ಯಾಹಾರಿ ರೈಲು!

By Suvarna News  |  First Published Aug 15, 2022, 8:04 PM IST

ಸಂಪೂರ್ಣ ಸಸ್ಯಾಹಾರಿಗಳಿಗಾಗಿ ಭಾರತದಲ್ಲಿ ವಿಶೇಷ ರೈಲು ಸೇವೆ ಲಭ್ಯವಿದೆ. ಈ ರೈಲಿನಲ್ಲಿ ತಿನಿಸು, ಆಹಾರ ತಯಾರಿಕೆ, ವೈಟರ್ ಸೇರಿದಂತೆ ಎಲ್ಲವೂ ಸಸ್ಯಾಹಾರಿ.  ಈ ವಿಶೇಷ ರೈಲಿನ ಕುರಿತ ಮಾಹಿತಿ ಇಲ್ಲಿದೆ.
 


ನವದೆಹಲಿ(ಆ.15):  ರೈಲು ಪ್ರಯಾಣದ ಅನುಭವ ಹಿತಕರ. ರೈಲು ಪ್ರಯಾಣದ ವೇಳೆ ಸ್ಥಳೀಯ ಆಹಾರಗಳು ಸವಿ ಪ್ರಯಾಣವನ್ನು ಮತ್ತಷ್ಟು ರೋಮಾಂಚನಗೊಳಿಸುತ್ತದೆ. ರೈಲಿನಲ್ಲಿ ಸಿಗುವ ಚಾಯ್, ಸಮೋಸಾ, ರಾಜ್ಮಾ ಚಾವಲ್ ಸೇರಿದಂತೆ ಬಗೆ ಬಗೆಯ ತಿನಿಸುಗಳು ಸಿಗುತ್ತದೆ. ಇನ್ನು ಮಾಂಸಾಹಾರ ಪ್ರಿಯರಾಗಿದ್ದರೆ ಬಗೆ ಬಗೆಯ ಆಹಾರಗಳು ರೈಲಿನಲ್ಲಿ ಲಭ್ಯವಿದೆ. ನಿಮಗೆ ಯಾವ ಆಹಾರ ಬೇಕು ಆ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇಡೀ ರೈನಲ್ಲಿ ಕೇವಲ ಸಸ್ಯಾಹಾರ ಆಹಾರ ಮಾತ್ರ ಸಿಗಲು ಸಾಧ್ಯವಿದೆಯಾ? ಇದೆ. ಈ ಆಹಾರ ಪದ್ಧತಿಯ ರೈಲು ಭಾರತದಲ್ಲಿದೆ. ಈ ರೈಲಿನಲ್ಲಿ ಹಲವು ಬಗೆಯ ತಿನಿಸುಗಳು ಲಭ್ಯವಿದೆ. ಆದರೆ ಎಲ್ಲವೂ ಸಸ್ಯಾಹಾರ ಆಹಾರವಾಗಿದೆ. ಮಾಂಸ, ಮೊಟ್ಟೆ ಈ ರೈಲಿನಲ್ಲಿ ಲಭ್ಯವಿಲ್ಲ. ಸಂಪೂರ್ಣ ಸಸ್ಯಾಹಾರಿಗಳು ರೈಲಿನ ಪ್ರಯಾಣವನ್ನು ಆನಂದಿಸಬಹುದು.

ವರದಿಗಳ ಪ್ರಕಾರ ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಸೇವೆ ನೀಡುತ್ತಿದೆ. ಸಂಪೂರ್ಣ ಸಸ್ಯಾಹಾರ ಆಹಾರ ನೀಡುವ ಈ ರೈಲು ದೆಹಲಿಯಿಂದ ಜಮ್ಮು ಕಾಶ್ಮೀರದ ಕತ್ರಾಗೆ ತೆರಳುವ ರೈಲಾಗಿದೆ. ಈ ರೈಲಿನಲ್ಲಿ ಸುದೀರ್ಘ ಪ್ರಯಾಣ ಸಂಪೂರ್ಣ ಸಸ್ಯಾಹಾರ ಆಹಾರದಿಂದ ಕೂಡಿದೆ. ಈ ರೈಲಿನ ವಿಶೇಷತೆ ಇಷ್ಟೇ ಅಲ್ಲ ಈ ರೈಲಿನಲ್ಲಿ ನೀಡುವ ಆಹಾರ ತಯಾರಿಕೆಯಲ್ಲೂ ಅಷ್ಟೇ ಮುತುವರ್ಜಿ ವಹಿಸಲಾಗುತ್ತದೆ. ಸಂಪೂರ್ಣವಾಗಿ ಸಸ್ಯಾಹಾರ ಮಸಾಲೆ ಪದಾರ್ಥಗಳಿಂದ ಆಹಾರ ತಯಾರಿಸಲಾಗುತ್ತದೆ. ಇಷ್ಟೇ ಅಲ್ಲ ವೈಟರ್‌ಗಳು, ಆಹಾರ ನೀಡುವವರು, ತಯಾರಿಸುವವರು ಮಾಂಸಾಹಾರದಿಂದ ದೂರ ದೂರ.  

Tap to resize

Latest Videos

ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

ಹಲವರು ಮಾಂಸಾಹಾರ ತಯಾರಿಸಿದ ಪಾತ್ರೆಯಲ್ಲಿ ತಯಾರಿಸಿದ ಅಡುಗೆಯನ್ನು ಸೇವಿಸುವುದಿಲ್ಲ. ಸಂಪೂರ್ಣ ಸಸ್ಯಾಹಾರ ಸೇವನೆಯಲ್ಲಿರುವವರಿಗೆ ಈ ರೈಲು ಹೆಚ್ಚು ಸೂಕ್ತ. ಈ ರೈಲಿಗೆ ಕೇಂದ್ರ ರೈಲ್ವೇ ಸಚಿವಾಲಯ ಸಾತ್ವಿಕ ರೈಲು ಎಂಬ ಪ್ರಮಾಣ ಪತ್ರ ನೀಡಿದೆ. ಸಂಪೂರ್ಣ ಸಸ್ಯಾಹಾರ ಆಹಾರ ನೀಡಲು ರೈಲ್ವೇ ಇಲಾಖೆ ಹಾಗೂ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ದೇಶದ ವಿವಿಧ ಭಾಗಗಳಿಗೆ   ಈ ರೀತಿಯ ಸಂಪೂರ್ಣ ಸಸ್ಯಹಾರದ ರೈಲು ಸೇವೆ ಒದಗಿಸಲು ಸಾತ್ವಿಕ್ ಕೌನ್ಸಿಲ್ ಮುಂದಾಗಿದೆ. ಶೀಘ್ರದಲ್ಲೇ 18 ಸಸ್ಯಾಹಾರ ರೈಲು ಸೇವೆ ನೀಡಲು ಯೋಜನೆ ಹಾಕಿಕೊಂಡಿದೆ.

ಹುಬ್ಬಳ್ಳಿ-ವಾರಣಾಸಿ ನೇರ ರೈಲ್ವೆ ಸೇವೆ ಇಂದಿನಿಂದ
ಪ್ರಯಾಣಿಕರ ಬೇಡಿಕೆ ಮೇರೆಗೆ ನೈಋುತ್ಯ ರೈಲ್ವೆ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಬನಾರಸ್‌ (ಒಂದು ಮಾರ್ಗದ ಸೇವೆ) ಒನ್‌-ವೇ ಎಕ್ಸ್‌ಪ್ರೆಸ್‌ ವಿಶೇಷ ರೈಲು (07305) ಚಾಲನೆಗೆ ನಿರ್ಧರಿಸಿದ್ದು, ವಾರಣಾಸಿಗೆ ಈ ರೈಲು ತಲುಪಲಿದೆ. ಎP್ಸ…ಪ್ರೆಸ್‌ ರೈಲು ಆ. 10ರಂದು ಸಂಜೆ 6.15ಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಆ. 12ರಂದು ಬೆಳಗ್ಗೆ 8.40ಕ್ಕೆ ಬನಾರಸ್‌ ನಿಲ್ದಾಣ ತಲುಪಲಿದೆ. ಈ ರೈಲು ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸೋಲಾಪುರ, ದೌಂಡ, ಅಹ್ಮದನಗರ, ಕೋಪರಗಾವ್‌, ಮನ್ಮಾಡ್‌, ಭೂಸಾವಲ್‌, ಖಂಡ್ವಾ, ಇಟಾರ್ಸಿ, ಪಿಪಾರಿಯಾ, ನರಸಿಂಗಪುರ, ಜಬಲ್ಪುರ್‌, ಕಟನಿ ಜುಂಕ್ಷನ್‌, ಮೈಹಾರ, ಸತನಾ, ಮಾಣಿಕಪುರ, ಪ್ರಯಾಗರಾಜ್‌ ಛೆಯೋಕಿ, ಮಿರ್ಜಾಪುರ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಈ ರೈಲಿನ ಸಂಯೋಜನೆಯು ಹವಾನಿಯಂತ್ರಿತ 3 ಬೋಗಿ, 11 ಸ್ಲೀಪರ್‌ ಬೋಗಿ, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿ ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಚ್‌ಮೆಂಟ್‌ಗಳಿಂದ ಕೂಡಿದ ಲಗೇಜ…-ಕಮ…-ಬ್ರೇಕ್‌ ವ್ಯಾನ್‌ಗಳನ್ನು ಹೊಂದಿರಲಿದೆ.

ಚಲಿಸುತ್ತಿರುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಶಕೀಲಾ!
 

click me!