
ನವದೆಹಲಿ (ಸೆ.28) ನವೆಂಬರ್ 1 ರಿಂದ ಖಾಸಗಿ ಹಾಗೂ ಸರ್ಕಾರಿ ನೌಕರರು ಪ್ರತಿ ದಿನ ಕಚೇರಿಗೆ ತೆರಳಬೇಕಿಲ್ಲ. ಹೈಬ್ರಿಡ್ ಮಾಡೆಲ್ ವರ್ಕ್ ಜಾರಿಗೊಳಿಸಲಾಗುತ್ತಿದೆ. ಖಾಸಗಿ ಕಂಪನಿ, ಸರ್ಕಾರಿ ಕಚೇರಿಗಳಲ್ಲಿ ಶೇಕಡಾ 50ರಷ್ಟು ಮಂದಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಪಾರ್ಕಿಂಗ್, ನಿರ್ಮಾಣ ವಲಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ.
ನವೆಂಬರ್ 1, 2026ರಿಂದ ಫೆಬ್ರವರಿ 28, 2027ರ ವರೆಗೆ ಹೊ ನೀತಿ ಜಾರಿಯಲ್ಲಿರಲಿದೆ. ಕನಿಷ್ಟ ನಾಲ್ಕು ತಿಂಗಳ ಕಾಲ ವರ್ಕ್ ಫ್ರಮ್ ಹೋಮ್ ಸೇರಿದಂತೆ ಹಲವು ಕಟ್ಟಿ ನಿಟ್ಟಿನ ನಿಯಮಗಳು ಜಾರಿಯಲ್ಲಿರಲಿದೆ. ಪ್ರಮುಖವಾಗಿ ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುವ ಹಿನ್ನಲೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು, ಕಟ್ಟಡ ನಿರ್ಮಾಣಗಳ ಧೂಳು ತಡೆಯಲು ಹಾಗೂ ದೆಹಲಿ ವಾಯು ಮಾಲಿನ್ಯ ಗಂಭೀರ ಹಂತಕ್ಕೆ ತಲುಪದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಅಂಗವಾಗಿ ವರ್ಕ್ ಫ್ರಮ್ ಹೋಮ್ ಕಡ್ಡಾಯಗೊಳಿಸಲಾಗುತ್ತಿದೆ.
ಶೇಕಡಾ 50ರಷ್ಟು ವರ್ಕ್ ಫ್ರಮ್ ನಿಂದ ವಾಹನ ಸಂಚಾರ ಕಡಿಮೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಸಾರ್ವಜನಿಕ ಸಾರಿಗೆ ಬಳಕೆ ಉತ್ತೇಜಿಸಲು ಪಾರ್ಕಿಂಗ್ ದರ ದುಪ್ಪಟ್ಟು ಮಾಡಲಾಗುತ್ತಿದೆ. ದೆಹಲಿ ಮೆಟ್ರೋ ರೈಲಿನ ಪಾರ್ಕಿಂಗ್ ಸ್ಥಳ ಹೊರತುಪಡಿಸಿ ಇನ್ನೆಲ್ಲಾ ಪಾರ್ಕಿಂಗ್ ದರ ದುಪ್ಪಟ್ಟು ಮಾಡಲಾಗುತ್ತಿದೆ. ಜನರು ಸಾರ್ವಜಿಕ ಸಾರಿಗೆ ಬಳಸುವ ಮೂಲಕ ಮಾಲಿನ್ಯ ತಡೆಗಟ್ಟಲು ಕೊಡುಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಖಾಸಗಿ ಕಚೇರಿಗಳು ಎಂದಿನ ಸಮಯದಲ್ಲೇ ಕಾರ್ಯನಿರ್ವಹಿಸಲಿದೆ. ಆದರೆ ಕಡ್ಡಾಯ ಶೇಕಡಾ 50ರಷ್ಟು ವರ್ಕ್ ಫ್ರಮ್ ನೀಡಬೇಕಿದೆ. ಇನ್ನು ಸರ್ಕಾರಿ ಕಚೇರಿಗಳಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್(MCD) ಉದ್ಯೋಗಿಗಳ ಕಚೇರಿ ಸಮಯವನ್ನು ಬೆಳಗ್ಗೆ 8.30 ರಿಂದ ಸಂಜೆ 5 ಗಂಟೆ ವರೆಗೆ ಮಾಡಲಾಗಿದೆ. ಇನ್ನು ದೆಹಲಿ ಸರ್ಕಾರಿ ಉದ್ಯೋಗಿಗಳ ಸಮಯವನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾಡಲಾಗಿದೆ.
ನವೆಂಬರ್ 1 ರಿಂದ ಜನವರಿ 31, 2027ರ ವರೆಗೆ ಕಟ್ಟಡ ನಿರ್ಮಾಣ, ಕಟ್ಟಡ ನೆಲೆಸಮಗೊಳಿಸುವ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹಲವು ಕ್ರಮಗಳ ಮೂಲಕ ದೆಹಲಿ ಮಾಲಿನ್ಯ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ