
ನವದೆಹಲಿ(ಮೇ.21) ಹವಾಮಾನ ವೈಪರಿತ್ಯದಿಂದ ದೆಹಲಿ-ಶ್ರೀಗನರ ಇಂಡಿಗೋ ವಿಮಾನದ ಪ್ರಯಾಣಿಕರು ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ದೆಹಲಿಯಿಂದ ಹೊರಟ ಇಂಡಿಗೋ ವಿಮಾನ ಟರ್ಬುಲೆನ್ಸ್ ಕಾರಣದಿಂದ ತೀವ್ರ ಆತಂಕದ ಸೃಷ್ಟಿಸಿತ್ತು. ಆಲಿಕಲ್ಲು ಮಳೆ, ಬಿರುಗಾಳಿಯಿಂದ ಆಗಸದಲ್ಲಿ ವಿಮಾನದ ಮೂತಿಗೆ ಹಾನಿಯಾಗಿದೆ. ಹೀಗಾಗಿ ವಿಮಾನ ಆಗಸದಲ್ಲೇ ಗಿರಗಿರನೆ ತಿರುಗಲು ಆರಂಭಿಸಿದೆ. ಇತ್ತ ಪ್ರಯಾಣಿಕರು ಆತಂಕದಲ್ಲಿ ಚೀರಾಡಿದ್ದಾರೆ. ಕಾಪಾಡುವಂತೆ ಕೂಗಿದ್ದಾರೆ. ಆದರೆ ಶ್ರೀಗನರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೂಲಕ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
227 ಪ್ರಯಾಣಿಕರನ್ನು ಹೊತ್ತು ಹೊರಟ ವಿಮಾನ
ದೆಹಲಿಯಿಂದ 227 ಪ್ರಯಾಣಿಕರನ್ನು ಹೊತ್ತು ಹೊರಟ ಇಂಡಿಗೋ 6E-2142 ವಿಮಾನ ಶ್ರೀನಗರದತ್ತ ಪ್ರಯಾಣ ಬೆಳೆಸಿತ್ತು. ಆದರೆ ಬಾರಿ ಗಾಳಿ, ಆಲಿಕಲ್ಲು ಮಳೆಯಿಂದ ವಿಮಾನದ ಮೂತಿಗೆ ಹಾನಿಯಾಗಿದೆ. ಇತ್ತ ಟರ್ಬುಲೆನ್ಸ್ ಕಾರಣದಿಂದ ವಿಮಾನ ಆಗಸದಲ್ಲೇ ನಿಯಂತ್ರಣ ಕಳೆದುಕೊಳ್ಳುವ ಆತಂಕ ಎದುರಾಗಿದೆ. ನೇರವಾಗಿ ಸಾಗುತ್ತಿದ್ದ ವಿಮಾನ ಸಂಪೂರ್ಣ ಅಲುಗಾಡಲು ಆರಂಭಿಸಿದೆ. ಹೀಗಾಗಿ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿತ್ತು. ಪ್ರತಿಕೂಲ ಹವಾಮಾನ ಪ್ರಯಾಣಿಕರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು.
ಚೀರಾಡಿದ ಪ್ರಯಾಣಿಕರು
ವಿಮಾನದಲ್ಲಿದ್ದ ಪ್ರಯಾಣಿಕರು ವಿಮಾನ ತೀವ್ರ ಟರ್ಬುಲೆನ್ಸ್ ಸಮಸ್ಯೆಗೆ ಗುರಿಯಾಗುತ್ತಿದ್ದಂತೆ ಚೀರಾಡಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಗಾಟ, ಚೀರಾಟ ಜೋರಾಗಿದೆ. ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗಿತ್ತು. ಪರಿಸ್ಥಿತಿ ಕೈಮೀರುತ್ತಿರುವ ಆತಂಕ ಎದುರಾಗಿತ್ತು. ವಿಮಾನ ಲ್ಯಾಂಡ್ ಆಗಿ ನಿಲ್ಲುವವರೆಗೂ ಪ್ರಯಾಣಿಕರು ಆತಂಕದಲ್ಲೇ ಕ್ಷಣ ದೂಡಿದ್ದರೆ.
ಪರಿಸ್ಥಿತಿ ನಿಭಾಯಿಸಿದ ಕ್ಯಾಪ್ಟನ್
ವಿಮಾನದ ಮೂತಿಗೆ ಹಾನಿಯಾಗಿದ್ದ ಕಾರಣ ವಿಮಾನ ಹಾರಾಟವೂ ಸವಾಲಾಗಿತ್ತು. ಇತ್ತ ಆಲಿ ಕಲ್ಲು ಮಳೆ, ಗಾಳಿಯಿಂದ ವಿಮಾನ ನಿಯಂತ್ರಿಸುವುದು ಹರಸಾಹಸ ಮಾಡಬೇಕಾಯಿತು. ಪರಿಸ್ಥಿತಿ ನಿಬಾಯಿಸಿದ ಇಂಡಿಗೋ ಕ್ಯಾಪ್ಟನ್, ಶ್ರೀನಗರ ವಿಮಾನ ನಿಲ್ದಾಣಕ್ಕೆ ಸೂಚನೆ ನೀಡಿದ್ದರು. ಹೀಗಾಗಿ ತುರ್ತು ಭೂಸ್ಪರ್ಶಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.ಅಗ್ನಿಶಾಮಕ ದಳ, ಆ್ಯಂಬುಲೆನ್ಸ್, ರಕ್ಷಣಾ ತಂಡ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.
ಅದೃಷ್ಟವಶಾತ್ ಹೆಚ್ಚಿನ ಸಮಸ್ಯೆಗಳಿಲ್ಲದ ಇಂಡಿಗೋ ಕ್ಯಾಪ್ಟನ್ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ್ದಾರೆ. ಈ ಮೂಲಕ 227 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಕ್ಯಾಪ್ಟನ್‌ಗೆ ಸಲಾಂ ಹೇಳಿದ ಪ್ರಯಾಣಿಕರು
ಟರ್ಬುಲೆನ್ಸ್‌ನಿಂದ ವಿಮಾನದ ಒಳಗಿನ ಪರಿಸ್ಥಿತಿ ಹೇಗಿತ್ತು ಅನ್ನೋದು ಹಲವರು ವಿಡಿಯೋ ರೆಕಾರ್ಡ್ ಮಾಡಿದ್ದರೆ. ಚೀರಾಟ, ಕೂಗಾಟಗಳು ಈ ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಪೈಲೆಟ್ ತಾಳ್ಮೆಯಿಂದ ವಿಮಾನ ನಿಭಾಯಿಸಿದ್ದಾರೆ. ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ 227 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಇದೀಗ ಪ್ರಯಾಣಿಕರು ಕ್ಯಾಪ್ಟನ್‌ಗೆ ಧನ್ಯವಾದ ಹೇಳಿದ್ದಾರೆ. ಕ್ಯಾಪ್ಟನ್ ಪರಿಸ್ಥಿತಿ ನಿಭಾಯಿಸಿ ಸುರಕ್ಷಿತವಾಗಿ ಪ್ರಯಾಣಿಕರನ್ನು ಇಳಿಸಿದ್ದಾರೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ