ದೆಹಲಿ ದಂಗೆಯಲ್ಲಿ ಪೊಲೀಸ್‌ನತ್ತ ಪಿಸ್ತೂಲ್ ಹಿಡಿದ ಶಾರೂಖ್ ಪಠಾನ್‌ಗೆ ಮಧ್ಯಂತರ ಜಾಮೀನು ಇಲ್ಲ

By Suvarna NewsFirst Published Nov 10, 2020, 10:55 PM IST
Highlights

ದಂಗೆ ಎಬ್ಬಿಸಿ ಪೊಲೀಸರತ್ತ ಪಿಸ್ತೂಲ್ ಪಾಯಿಂಟ್ ಮಾಡಿದ್ದ ಶಾರೂಖ್ ಪಠಾನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಲಾಗಿದೆ.

ನವದೆಹಲಿ(ನ.10): ಪೊಲೀಸ್ ಹೆಡ್‌ಕಾನ್ಸ್ಟೆಬಲ್‌ಗೆ ಪಿಸ್ತೂಲ್ ತೋರಿಸಿದ್ದ ಶಾರೂಖ್ ಪಠಾನ್ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ದೆಹಲಿ ದಂಗೆಯ ಸಂದರ್ಭ ಕಲ್ಲು ತೂರಾಟ ತಡೆಯಲು, ಪರಿಸ್ಥಿತಿ ಹತೋಟಿಗೆ ನಿಯೋಜಿಸಲಾಗಿದ್ದ ಪೊಲೀಸ್ ಹೆಡ್‌ ಕಾನ್ಸ್ಟೆಬಲ್ ವಿರುದ್ಧ ಯುವಕ ಪಿಸ್ತೂಲ್ ಹಿಡಿದ ಫೋಟೋ ಅಂದು ವೈರಲ್ ಆಗಿತ್ತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪಠಾನ್ ಅವರ ನಡವಳಿಕೆ ಮತ್ತು ಘಟನೆಯ ನಂತರ ನಾಪತ್ತೆಯಾಗಿದ್ದ ರೀತಿ ಮತ್ತು ನಂತರ ಬಂಧಿಸಲ್ಪಟ್ಟ ರೀತಿ ನೋಡಿದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

ಎಲ್ಲ ಮರೆತು ದಂಗೆಯೆಬ್ಬಿಸಿ ಇದೀಗ ತಂದೆಯ ಆರೋಗ್ಯ ನೆನಪಾಯಿತೇ? ಆರೋಪಿಗೆ ಕೋರ್ಟ್ ಪ್ರಶ್ನೆ!

2020 ಫೆಬ್ರವರಿ 24ರಂದು ದೆಹಲಿಯ ಜಫ್ರಬಾದ್‌ ಮೆಟ್ರೋ ಸ್ಟೇಷನ್ ಬಳಿ ಕಲ್ಲು ತೂರಾಟ ತೀವ್ರ ಸ್ವರೂಪ ಪಡೆದಿತ್ತು. ಘಟನಾ ಸ್ಥಳದಲ್ಲಿ ನಿಯೋಜಿತರಾಗಿದ್ದ ದೀಪಕ್ ದಹಿಯಾ ವಿರುದ್ಧ ಶಾರೂಖ್ ಪಠಾನ್ ಪಿಸ್ತೂಲ್ ಎತ್ತಿದ್ದ.

ಆರೋಪಿಗಳು ಗಲಭೆಯಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಅದನ್ನು ಸರಿಯಾಗಿ ಗುರುತಿಸಲಾಗಿದೆ. ಹೀಗಾಗಿ ಪ್ರಸ್ತುತ ಪ್ರಕರಣದಲ್ಲಿಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡದಿರಲು ಈ ಕಾರಣ ಸಾಕು ಎಂದು ನ್ಯಾಯಾಲಯವು ನವೆಂಬರ್ 9 ರಂದು ಅಂಗೀಕರಿಸಿದ ಆದೇಶದಲ್ಲಿ ತಿಳಿಸಿದೆ.

ಡ್ರಗ್ಸ್ ಜಾಲ ಬಯಲು ಮಾಡಲು ಹೊರಟ ಪತ್ರಕರ್ತನ ಹತ್ಯೆ

ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ತಾಯಿಯನ್ನು ನೋಡಿಕೊಳ್ಳಲು ಪಠಾಣ್ ಮಧ್ಯಂತರ ಜಾಮೀನು ಕೋರಿದ್ದರು. ಬಲ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದ ತಂದೆಯನ್ನು ನೋಡಿಕೊಳ್ಳಬೇಕಿದೆ ಎಂದು ಕೇಳಿಕೊಂಡಿದ್ದರು

click me!