ಹುತಾತ್ಮ ಸೈನಿಕರ ಕುಟುಂಬಕ್ಕೆ 20  ಲಕ್ಷದ ಒಡವೆ ದಾನ ಮಾಡಿದ ಮಾಜಿ MLC!

Published : Nov 10, 2020, 09:22 PM IST
ಹುತಾತ್ಮ ಸೈನಿಕರ ಕುಟುಂಬಕ್ಕೆ 20  ಲಕ್ಷದ ಒಡವೆ ದಾನ ಮಾಡಿದ ಮಾಜಿ MLC!

ಸಾರಾಂಶ

ಹುತಾತ್ಮ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ಆಭರಣ ದಾನ ಮಾಡಿದ ಮಾಜಿ ಎಂಎಲ್‌ಸಿ/  ನಿವೃತ್ತ ಸೈನಿಕರ ಕಲ್ಯಾಣಕ್ಕೆ ಏನಾದರೂ ಮಾಡಬೇಕು ಎಂದಿದ್ದೆ/ ಪ್ರಧಾನಿ ಮೋದಿಯಿಂದ ಅಭಿನಂದನೆ ಪತ್ರ

ನಾಸಿಕ್( ನ. 10)  ಭಾರತೀಯ ಯಾವ ಮಹಿಳೆಯರಿಗೆ ಚಿನ್ನ ಇಷ್ಟವಿಲ್ಲ ಹೇಳಿ. ಬಂಗಾರ ಅಂದರೆ ಅವರಿಗೆ ಪಂಚ ಪ್ರಾಣ. ಆದರೆ ಇಲ್ಲೊಬ್ಬ ಮಾಜಿ ಎಂಎಲ್‌ ಸಿ ದೇಶಭಕ್ತಿಗಾಗಿ ಬಂಗಾರವನ್ನೆಲ್ಲ ದಾನ ಮಾಡಿದ್ದಾರೆ.

ಸುಮಾರು  20 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹುತಾತ್ಮ ಸೈನಿಕರ ಪತ್ನಿಯರು ಮತ್ತು ನಿವೃತ್ತ ಸೈನಿಕರ ಕಲ್ಯಾಣಕ್ಕೆ ನೀಡಿದ್ದಾರೆ.  ಪ್ರಧಾನಿ ನರೇಂದ್ರ  ಮೋದಿ ಅವರೇ ಖುದ್ದಾಗಿ ಈ ನಾಯಕಿಯ ಕಾರ್ಯಕ್ಕೆ ಮೆಚ್ಚುಗೆ ಪತ್ರ ಕಳಿಸಿದ್ದಾರೆ.

ತಮ್ಮ  75  ನೇ ಜನ್ಮದಿನ ಆಚರಿಸಿಕೊಂಡ ನಿಶಿಗಂಧಾ ಮೊಗಲ್ ಸೇನೆಯಲ್ಲಿ ಸೇವೆ ಮಾಡಿದವರ ಒಳಿತಿಗೆ ಈ ದಾನ ಮಾಡಿದ್ದಾರೆ.

ನಾನು ಒಬ್ಬ ರಾಜಕಾರಣಿಯಾಗಿ ಸೇವೆ  ಮಾಡಿದ್ದೆ. ಸೈನಿಕರಿಗೆ, ಹುತಾತ್ಮರ ಕುಟುಂಬಕ್ಕೆ ಏನಾದರೂ ನೆರವು ನೀಡಬೇಕು ಎಂದು ಭಯಸಿದ್ದೆ. ಈ ಮೂಲಕ ಅದು ಸಾಧ್ಯವಾಗುತ್ತಿದೆ ಎಂದು ನಾಯಕಿ  ಹೇಳಿದ್ದಾರೆ. ನನ್ನ ತಾಯಿ ತುರ್ತುಪರಿಸ್ಥಿತಿ  ಸಮಯದಲ್ಲಿ ಹೋರಾಟ ಮಾಡಿದ್ದರು. ಅವರೆ ಇಂಥ ಕೆಲಸಗಳಿಗೆ ಪ್ರೇರಣೆ ಎಂದು  ಹೇಳಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !