ದೆಹಲಿ ಗಲಭೆ: ತುಕ್ಡೆ ತುಕ್ಡೇ ಗ್ಯಾಂಗ್‌ನ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಜಾಮೀನು ಅರ್ಜಿ ವಜಾ

Published : Jan 05, 2026, 11:31 AM ISTUpdated : Jan 05, 2026, 11:47 AM IST
Sharjeel Imam and Umar Khalid

ಸಾರಾಂಶ

ದೆಹಲಿ ಗಲಭೆ: ತುಕ್ಡೆ ತುಕ್ಡೇ ಗ್ಯಾಂಗ್‌ನ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಜಾಮೀನು ಅರ್ಜಿ ವಜಾ, ದೆಹಲಿ ಗಲಭೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಉಮರ್ ಹಾಗೂ ಶಾರ್ಜಿಲ್‌ಗೆ ಬೇಲ್ ನಿರಾಕರಿಸಿದೆ. 

ನವದೆಹಲಿ (ಜ.05) ದೆಹಲಿ ಗಲಭೆ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್‌‌ಗೆ ಮತ್ತೆ ಹಿನ್ನಡೆಯಾಗಿದೆ. ಈ ಇಬ್ಬರು ಆರೋಪಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಿಸ್ಕರಿಸಿದೆ. ಒಟ್ಟು 7 ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಐವರಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ಉಮರ್ ಖಾಲೀದ್ ಹಾಗೂ ಶಾರ್ಜಿಲ್ ಇಮಾಮ್‌ಗೆ ಜಾಮೀನು ನೀಡಲು ನಿರಾಕರಿಸಿದೆ. ಎನ್‌ಆರ್‌ಸಿ ಪ್ರತಿಭಟೆಯನ್ನು ದೆಹಲಿ ಗಲಭೆಯಾಗಿ ಪರಿವರ್ತಿಸುವಲ್ಲಿ ಉಮರ್ ಖಾಲೀದ್ ಹಾಗೂ ಶಾರ್ಜೀಲ್ ಯಶಸ್ವಿಯಾಗಿದ್ದರು. ಹೀಗಾಗಿ ಇಬ್ಬರು ಆರೋಪಿಗಳು ದೆಹಲಿ ಗಲಭೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕಾರಣ ಜಾಮೀನು ನೀಡಲು ನಿರಾಕರಿಸಿದೆ.

ನ್ಯೂಯಾರ್ಕ್ ಮೇಯರ್ ಮಮ್ದಾನಿ ಬೆಂಬಲದಿಂದ ಈ ಬಾರಿ ಜಾಮೀನು ಅರ್ಜಿ ಕುತೂಹಲ

ಉಮರ್ ಖಾಲೀದ್ ಹಾಗೂ ಶಾರ್ಜಿಲ್ ಇಮಾಮ್ ಕಳೆದ ಐದು ವರ್ಷದಿಂದ ಜೈಲಿನಲ್ಲಿದ್ದಾರೆ. ಹಲವು ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಆದರೆ ಈ ಬಾರಿ ಜಾಮೀನು ಅರ್ಜಿ ಭಾರಿ ಕುತೂಹಲ ಕೆರಳಿಸಿತ್ತು. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ನ್ಯೂಯಾರ್ಕ್ ಮೇಯರ್ ಆಗಿ ಅಧಿಕಾರವಹಿಸಿರುವ ಜೋಹರಾನ್ ಮಮ್ದಾನಿ, ಜೈಲಿನಲ್ಲಿರುವ ಉಮರ್ ಖಾಲಿದ್‌ಗೆ ಬೆಂಬಲ ಸೂಚಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿರೋಧಿ ನಿಲುವ ಬಲಪಡಿಸಲು ಮಮ್ದಾನಿ ಪ್ರಯತ್ನಿಸಿದ್ದರು. ಆದರೆ ಇದ್ಯಾವ ಬೆಂಬಲವನ್ನು ಸುಪ್ರೀಂ ಕೋರ್ಟ್ ಪರಿಣಾಮ ಬೀರಲಿಲ್ಲ.

ಮಮ್ದಾನಿ ಬೆನ್ನಲ್ಲೇ ಅಮೆರಿಕದ ಎಂಟು ಸಂಸದರು ಖಾಲಿದ್ ಬಿಡುಗಡೆ ಪತ್ರ ಬರೆದು ಒತ್ತಾಯಿಸಿದ್ದರು. ಅಮೆರಿಕದವರ ನಡೆ ಭಾರತದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಇದು ನಮ್ಮ ದೇಶದ ಆಂತರಿಕ ವಿಚಾರ ಎಂದು ಬಿಜೆಪಿ ಉತ್ತರ ನೀಡಿತ್ತು. ಇದೀಗ ಜಾಮೀನು ಅರ್ಜಿ ತಿರಸ್ಕರಗೊಂಡಿದ್ದು, ಭಾರತದ ಆಂತರಿಕ ವಿಚಾರದಲ್ಲಿ ಬಾಹ್ಯ ಶಕ್ತಿಗಳ ಒತ್ತಡ ಪರಿಣಾಮ ಬೀರುವುದಿಲ್ಲ ಅನ್ನೋ ಸ್ಪಷ್ಟ ಸಂದೇಶವೂ ರವಾನೆಯಾಗಿದೆ.

UAPA ಅಡಿಯಲ್ಲಿ ದೆಹಲಿ ಗಲಭೆ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ದೆಹಲಿ ಗಲಭೆಯಲ್ಲಿ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ದೆಹಲಿ ಗಲಭೆಯಲ್ಲಿ ಷಡ್ಯಂತ್ರ ರೂಪಿಸಿದ್ದಾರೆ. ಇವರ ಮೇಲಿರುವ ಆರೋಪಗಳು, ಲಭ್ಯವಿರು ಸಾಕ್ಷ್ಯಗಳು ಗಂಭೀರವಾಗಿದೆ. ದೆಹಲಿ ಗಲಭೆ ಆರೋಪಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಒಬ್ಬೊಬ್ಬ ಆರೋಪಿಗಳ ಪಾತ್ರ ಭಿನ್ನವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಐವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಪಡೆದ ಆರೋಪಿಗಳು

ಗುಲ್ಫಿಶಾ ಫಾತಿಮಾ

ಮೀರನ್ ಹೈದರ್

ಸೈಫಾ ಉರ್ ರೆಹಮಾನ್

ಮೊಹಮ್ಮದ್ ಸಲೀಂ ಖಾನ್

ಶದಬ್ ಅಹಮ್ಮದ್

ಸುಪ್ರೀಂ ಕೋರ್ಟ್‌ನ ಜಸ್ಟೀಸ್ ಅರವಿಂದ್ ಕುಮಾರ್ ಹಾಗೂ ಎನ್‌ ವಿ ಅಂಜರಿಯಾ ಪೀಠ ಈ ಮಹತ್ವದ ಆದೇಶ ನೀಡಿದೆ. ಆರೋಪಿಗಳ ಜಾಮೀನು ಅರ್ಜಿ ಕುರಿತು ವಿಚಾರಣೆ ನಡೆಸಿದ ಸುುಪ್ರೀಂ ಕೋರ್ಟ್ ಡಿಸೆಂಬರ್ 10 ರಂದು ತೀರ್ಪು ಕಾಯ್ದಿರಿಸಿತ್ತು. ದೆಹಲಿ ಪೊಲೀಸ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಆಡಿಷನ್ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ವಾದ ಮಂಡಿಸಿದ್ದರು. ಇತ್ತ ಆರೋಪಿಗಳ ಪರ ವಕೀಲರಾದ ಕಬಿಲ್ ಸಿಬಲ್, ಅಭಿಷೇಕ್ ಸಿಂಗ್ವಿ, ಸಿದ್ಧಾರ್ಥ ದಾವೆ, ಸಲ್ಮಾನ್ ಖುರ್ಷಿದ್ ಹಾಗೂ ಸಿದ್ಧಾರ್ಥ ಲುಥಾರ ವಾದ ಮಂಡಿಸಿದ್ದರು.

ಆರೋಪ ಏನು?

2020ರ ದೆಹಲಿ ದಂಗೆಗಳಿಗೆ ದೊಡ್ಡ ಮಟ್ಟದಲ್ಲಿ ಪಿತೂರಿ ನಡೆಸಿರುವದ ಹಿಂದೆ ಇದೇ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಪಾತ್ರ ದೊಡ್ಡದಿದೆ. ಪ್ರಚೋಧಿತ ಭಾಷಣ, ಗಲಭೆಗಳಿಗೆ ಸಿದ್ದತೆ ನಡೆಸಿ ಎಂದು ಉಮರ್ ಖಾಲಿದ್ ಕರೆ ನೀಡಿದ್ದ. ಸಿಎಎ ವಿರುದ್ದ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ನನ್ನು, 2020ರ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಸಹದೋರಿ ಮದುವೆ ಕಾರಣದಿಂದ ತಾತ್ಕಾಲಿಕ ಜಾಮೀನು ನೀಡಲಾಗಿತ್ತು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
Indian Latest News Live: ತುಕಡೆ ತುಕಡೆ ಗ್ಯಾಂಗ್‌ಗೆ ಜೈಲೇ ಗತಿ, ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ ಜಾಮೀನು ಅರ್ಜಿ ವಜಾ