
ನವದೆಹಲಿ ( ಮಾ. 03): ಪ್ರಚೋದಕ ಭಾಷಣ ಮಾಡಿ ದಿಲ್ಲಿ ಗಲಭೆಗೆ ಕಾರಣರಾದ ರಾಜಕಾರಣಿಗಳ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಲಾದ ಅರ್ಜಿಯನ್ನು ಮಾರ್ಚ್ 04 ರಂದು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿದೆ.
200 ರೂ.ನಿಂದ 10 ರೂಪಾಯಿಗಿಳಿದ ಈರುಳ್ಳಿ ಬೆಲೆ, ರಫ್ತಿಗೆ ಅವಕಾಶ
ಗಲಭೆಯ ಸಂತ್ರಸ್ತರು ಈ ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆಗೆ ಕೋರಿದ್ದರು. ಇದನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಾಧೀಶ ನ್ಯಾ ಎಸ್.ಎ. ಬೋಬ್ಡೆ ಅವರ ಪೀಠ ಬುಧವಾರ ವಿಚಾರಣೆ ನಡೆಸುವುದಾಗಿ ಹೇಳಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲಿಸ್, ‘ಜನರು ಸಾಯುತ್ತಿದ್ದಾರೆ.
ಆದರೂ ಹಿಂಸೆಗೆ ಸಂಬಂಧಿಸಿದ ಅರ್ಜಿಗಳನ್ನು ದಿಲ್ಲಿ ಹೈಕೋರ್ಟ್ 4 ವಾರ ಮುಂದೂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹಿಂಸೆ ತಡೆಯುವುದು ಸರ್ಕಾರದ ಕೆಲಸ. ಕೋರ್ಟ್‌ಗಳು ಹಿಂಸೆ ತಡೆಗೆ ಸನ್ನದ್ಧವಾಗಿಲ್ಲ. ನಾವು ಶಾಂತಿ ಬಯಸುತ್ತೇವೆ. ಆದರೆ ನಮಗೂ ಇತಿಮಿತಿ ಇದೆ’ ಎಂದಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ