200 ರೂ.ನಿಂದ 10 ರೂಪಾಯಿಗಿಳಿದ ಈರುಳ್ಳಿ ಬೆಲೆ, ರಫ್ತಿಗೆ ಅವಕಾಶ

By Kannadaprabha NewsFirst Published Mar 3, 2020, 8:57 AM IST
Highlights

ಕೆಜಿಗೆ 200 ರೂಪಾಯಿ ತನಕ ಏರಿದ್ದ ಈರುಳ್ಳಿ ಬೆಲೆ ಇದೀಗ 10 ರೂಪಾಯಿಗಿಳಿದಿದೆ. ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿರುವುದರಿಂದ ರಫ್ತಿಗೆ ಅವಕಾಶ ನೀಡಲಾಗಿದೆ.

ನವದೆಹಲಿ(ಮಾ.03): ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿ ಕೆಜಿಗೆ 200 ರು.ವರೆಗೆ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಕೇಜಿಗೆ 10 ರು.ವರೆಗೂ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಮತ್ತು ಮಾರುಕಟ್ಟೆಗೆ ಹೊಸ ಬೆಳೆ ಆಗಮನವಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ರಫ್ತಿಗೆ ಹೇರಿದ್ದ ನಿಷೇಧ ಹಿಂಪಡೆದು, ಮಾ.15 ರಿಂದ ಈರುಳ್ಳಿ ರಫ್ತಿಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಆ ಮೂಲಕ ಸುಮಾರು ಆರು ತಿಂಗಳ ಕಾಲ ಈರುಳ್ಳಿ ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದಂತಾಗಿದೆ. ಮಾಚ್‌ರ್‍ 15ರಿಂದ ರೈತರ ಹಿತಕ್ಕಾಗಿ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ಮಾಡಿಕೊಡಲಿದೆ.

ಈ ನಿರ್ಧಾರ ರೈತರ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪಿಯೂಷ್‌ ಗೋಯಲ್‌ ಟ್ವೀಟ್‌ ಮಾಡಿದ್ದಾರೆ. ಸದ್ಯ ಹೊಸ ಬೆಳೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಬಂಪರ್‌ ಬೆಳೆಯಿಂದಾಗಿ ಬೆಲೆ ಇಳಿಕೆಯಾಗಿದೆ. ಹಾಗಾಗಿ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ಮಾಡಿಕೊಟ್ಟಿದೆ.

click me!