Delhi Rain ದೆಹಲಿಯಲ್ಲಿ ಭಾರಿ ಮಳೆ, 60 ವಿಮಾನ ವಿಳಂಬ, 19 ವಿಮಾನಗಳ ಮಾರ್ಗ ಬದಲು!

Published : May 24, 2022, 12:09 AM ISTUpdated : May 24, 2022, 12:25 AM IST
Delhi Rain ದೆಹಲಿಯಲ್ಲಿ ಭಾರಿ ಮಳೆ, 60 ವಿಮಾನ ವಿಳಂಬ, 19 ವಿಮಾನಗಳ ಮಾರ್ಗ ಬದಲು!

ಸಾರಾಂಶ

ದೆಹಲಿಯಲ್ಲಿ ಭಾರಿ ಮಳೆ, ಪ್ರತಿಕೂಲ ವಾತಾವರಣ ವಿಮಾನಗಳ ಪ್ರಯಾಣ ಮಾರ್ಗ ಬದಲು ಹಲವು ವಿಮಾನಗಳು ವಿಳಂಬ

ನವದೆಹಲಿ(ಮೇ.23): ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣದ ಸಮಯ ಅದಲು ಬದಲಾಗಿದೆ. ಪ್ರತಿಕೂಲ ಹವಾಮಾನದಿಂದ 19 ವಿಮಾನಗಳ ಮಾರ್ಗ ಬದಲು ಮಾಡಲಾಗಿದೆ. ಇನ್ನು 60ಕ್ಕೂ ಹೆಚ್ಚು ವಿಮಾನಗಳು ವಿಳಂಭವಾಗಿದೆ.

ದೆಹಲಿಯಿಂದ ನಿರ್ಗಮಿಸುವ ಹಾಗೂ ಆಗಮಿಸುವ 60ಕ್ಕೂ ಹೆಚ್ಚು ವಿಮಾನಗಳು ವಿಳಂವಾಗಿದೆ. ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದ ದೆಹಲಿಗೆ ಆಗಮಿಸಬೇಕಿದ್ದ ವಿಮಾನಗಳನ್ನು ಜೈಪುರ, ಲಖನೌ, ಇಂದೋರ್, ಅಹಮದಾಬಾದ್ ಹಾಗೂ ಅಮೃತಸರಕ್ಕೆ ಮಾರ್ಗ ಬದಲಿಸಲಾಗಿದೆ.

ಹಲವು ದಶಕದ ಬಳಿಕ ಮೇನಲ್ಲಿ‌ ಜಲಾಶಯ ಭರ್ತಿ: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಅವಳಿ ಜಲಾಶಯ

ದೆಹಲಿ ವಿಮಾನ ನಿಲ್ದಾಣ ಪ್ರಯಾಣಿಕರಲ್ಲಿ ವಿಶೇಷ ಮನವಿ ಮಾಡಿಕೊಂಡಿದೆ. ಮಳೆಯಿಂದಾಗಿ ವಿಮಾನ ಪ್ರಯಾಣದಲ್ಲಿ ಅಡಚಣೆಯಾಗಿದೆ. ದಯವಿಟ್ಟು ತಮ್ಮ ತಮ್ಮ ಏರ್‌ಲೈನ್ಸ್ ಜೊತೆ ಸಂಪರ್ಕದಲ್ಲಿರಲು ಸೂಚನೆ ನೀಡಿದೆ.ಮಳೆಯಿಂದಾಗಿ ದೆಹಲಿಯಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ ಹಲವು ಭಾಗಗಳು ಕತ್ತಲಲ್ಲಿ ಮುಳುಗಿದೆ. ರಸ್ತೆಗಳು ನದಿಯಂತಾಗಿದೆ.

ಮಳೆಯಿಂದಾಗಿ ದೆಹಲಿಯಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ ಹಲವು ಭಾಗಗಳು ಕತ್ತಲಲ್ಲಿ ಮುಳುಗಿದೆ. ರಸ್ತೆಗಳು ನದಿಯಂತಾಗಿದೆ. ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಇದೀಗ ದೆಹಲಿ ಮಹಾ ಮಳೆ ಪರಿಸ್ಥಿತಿ ಎದುರಿಸುತ್ತಿದೆ. ಭಾರಿ ಮಳೆಯಾಗುತ್ತಿರುವ ಕಾರಣ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸೋಮವಾರ ಬೆಳಗ್ಗೆಯಿಂದಲೇ ದೆಹಲಿಯಲ್ಲಿ ಮಳೆ ಅಬ್ಬರಿಸತೊಡಗಿದೆ. ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ವಿದ್ಯುತ್ ಟ್ರಾನ್ಸ್‌ಪಾರ್ಮ್ ಬಾಕ್ಸ್‌ಗಳು ಹಾನಿಯಾಗಿದೆ. ವಿದ್ಯುತ್ ಕಡಿತಗೊಂಡಿದೆ. ಸತತ ಮಳೆ ಸುರಿಯುತ್ತಿರುವ ಕಾರಣ  ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ.

ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ: ಮಳೆ ಹಾನಿ ತಡೆಗೆ 15 ದಿನ ರಜೆ ಕಟ್‌

ಅಕಾಲಿಕ ಮಳೆ: 2.83 ಕೋಟಿ ರು.ನಷ್ಟ
ಹರಿಹರ ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ರೈತರ ಬೆಳೆಗಳು ನೀರು ಪಾಲಾಗಿ ಕಂಗಾಲಾಗಿದ್ದಾರೆ. ಸ್ವಲ್ಪ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಈ ವರೆಗೂ ನಾಲ್ಕು ಸಾವಿರ ಎಕರೆ ಭತ್ತದ ಬೆಳೆಗೆ ಹಾಗೂ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು ಸುಮಾರು 2.83 ಕೋಟಿ ರು. ನಷ್ಟಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ನಿರಂತರ ಸುರಿದ ಮಳೆಯ ಪರಿಣಾಮ ಕಟಾವಿಗೆ ಬಂದಿದ್ದ ಭತ್ತ ನೆಲಕ್ಕುರುಳಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲದಂತ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಕೆಲವು ಗ್ರಾಮದ ಜಮೀನುಗಳಲ್ಲಿ ನೀರು ಹಳ್ಳದಂತೆ ಹರಿಯುತ್ತಿದೆ, ಇನ್ನೂ ಕೆಲವು ಗ್ರಾಮಗಳಲ್ಲಿ ಸೇತುವೆ ಮತ್ತು ರಸ್ತೆಗಳು ಮುಳುಗಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.

ಮನೆಗಳಿಗೆ ಹಾನಿ:

ಭಾನುವಳ್ಳಿ-6, ಹೊಟ್ಟೆಗನಹಳ್ಳಿ-2, ದೇವರಬೆಳಕೆರೆ-3, ಬನ್ನಿಕೋಡು-2, ಮತ್ತು ಕೊಂಡಜ್ಜಿ, ಸಾಲಕಟ್ಟಿ, ಗಂಗನರಸಿ, ಹನಗವಾಡಿ, ಎಳೆಹೊಳೆ, ವಾಸನ, ಸಿರಿಗೆರೆ, ಕಮಲಾಪುರ, ಸಂಕ್ಲೀಪುರ, ನಂದಿಗಾವಿ, ಕೊಕ್ಕನೂರು, ಕೆ.ಬೇವಿನಹಳ್ಳಿ ಹಾಗೂ ಹರಿಹರದ ತಲಾ ಒಂದು ಮನೆಗಳಿಗೆ ಭಾಗಶ: ಹಾನಿಯಾಗಿದ್ದು 30 ಲಕ್ಷ ರು. ನಷ್ಟಅಂದಾಜಿಸಲಾಗಿದೆ.

ಬೆಳ್ಳೂಡಿಯಲ್ಲಿ 35 ಎಕರೆ ಮತ್ತು ನಾಗೇನಹಳ್ಳಿ-40 ಹನಗವಾಡಿ 10 ಎಕರೆ ಎಲೆಬಳ್ಳಿ ಬೆಳೆ ಹಾನಿಗೀಡಾಗಿದೆ. ಅಡಿಕೆ, ತೆಂಗು: ಬೆಳ್ಳೂಡಿ-35 ಎಕರೆ, ನಂದಿತಾವರೆ-300 ಮರ, ನಂದಿತಾವರೆ-20 ತೆಂಗಿನ ಮರಗಳಿಗೆ ಹಾನಿಯಾಗಿದ್ದು, ಚಿಕ್ಕಬಿದರಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳೊಂದು ಮೃತಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಲಕ್ನೋ: ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೂಕುಂಡಗಳ ಲೂಟಿ; ವಿಡಿಯೋ ವೈರಲ್