ಬೆಂಗಳೂರಲ್ಲಿ ಮೊದಲ ಕೇಸ್‌, HMPV ವಿರುದ್ಧ ಸಮರಕ್ಕೆ ಸಜ್ಜಾದ ದೆಹಲಿ!

By Santosh Naik  |  First Published Jan 6, 2025, 8:16 PM IST

ಸಂಶಯಾಸ್ಪದ ಪ್ರಕರಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಐಸೋಲೇಷನ್ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. 


ನವದೆಹಲಿ (ಜ.6): ಬೆಂಗಳೂರಿನಲ್ಲಿ ದೇಶದ ಮೊದಲ ಎಚ್‌ಎಂಪಿವಿ (ಹ್ಯೂಮನ್ ಮೆಟಾನ್ಯೂಮೋವೈರಸ್) ಪ್ರಕರಣ ದೃಢಪಟ್ಟ ನಂತರ, ದೆಹಲಿ ಸರ್ಕಾರವು ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಎಚ್‌ಎಂಪಿವಿ ಮತ್ತು ಇತರ ಉಸಿರಾಟದ ವೈರಸ್‌ಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಎದುರಿಸಲು ಸಿದ್ಧರಾಗಿರಬೇಕೆಂದು ದೆಹಲಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. 

ತೀವ್ರವಾದ ಉಸಿರಾಟದ ಸೋಂಕು (SARI) ಮತ್ತು ಪ್ರಯೋಗಾಲಯ ದೃಢಪಡಿಸಿದ ಇನ್ಫ್ಲುಯೆನ್ಸ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರಾದರೂ ಚಿಕಿತ್ಸೆ ಪಡೆಯಲು ಬಂದರೆ, ಅದನ್ನು ಇಂಟಿಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲಾಟ್‌ಫಾರ್ಮ್ (ಐಎಚ್ಐಪಿ) ಪೋರ್ಟಲ್‌ನಲ್ಲಿ ವರದಿ ಮಾಡಬೇಕು. ಇದಲ್ಲದೆ, ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹ ಸೂಚಿಸಲಾಗಿದೆ. ಪ್ಯಾರಸಿಟಮಾಲ್, ಆಂಟಿಹಿಸ್ಟಮೈನ್‌ಗಳು, ಬ್ರಾಂಕೋಡೈಲೇಟರ್‌ಗಳು, ಕೆಮ್ಮಿನ ಸಿರಪ್‌ಗಳು ಮುಂತಾದ ಔಷಧಿಗಳು ಮತ್ತು ಆಮ್ಲಜನಕ ಮತ್ತು ಸೌಮ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇಕಾದ ಔಷಧಿಗಳನ್ನು ಸಂಗ್ರಹಿಸಿಡಬೇಕೆಂದು ತಿಳಿಸಲಾಗಿದೆ. ಸಂಶಯಾಸ್ಪದ ಪ್ರಕರಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಐಸೋಲೇಷನ್ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

Tap to resize

Latest Videos

ಚೀನಾದಲ್ಲಿ HMPV ವೈರಸ್ ಹೆಚ್ಚಳ ಬೆನ್ನಲ್ಲೇ ಅಮೆರಿಕಕ್ಕೆ ತಲೆನೋವಾದ ವಿಚಿತ್ರ ಕಾಯಿಲೆ!

ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಒದಗಿಸಿದ ಮಾಹಿತಿಯ ಪ್ರಕಾರ, 2025 ರ ಜನವರಿ 2 ರವರೆಗೆ ಭಾರತದಲ್ಲಿ ಉಸಿರಾಟದ ಕಾಯಿಲೆಗಳಲ್ಲಿ ಗಮನಾರ್ಹ ಏರಿಕೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಉಸಿರಾಟದ ಕಾಯಿಲೆಗಳನ್ನು ನಿರ್ವಹಿಸುವ ಕುರಿತು ದೆಹಲಿಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ. ವಂದನಾ ಬಗ್ಗ್ ಜಿಲ್ಲಾ ವೈದ್ಯಕೀಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

HMPV-ಕೋವಿಡ್-19 ವೈರಸ್‌ ನಡುವಿನ ವ್ಯತ್ಯಾಸವೇನು? ಯಾವುದು ಡೇಂಜರ್? 

 

click me!