ಬೈಕ್‌ನಲ್ಲಿ ಮುತ್ತಿಕ್ಕಿ, ಬಿಗಿದಪ್ಪಿ ಸಾಗಿದ ಜೋಡಿಗೆ 11 ಸಾವಿರ ರೂ ದಂಡ, ಜೊತೆಗೊಂದು ವಾರ್ನಿಂಗ್!

Published : Jul 20, 2023, 09:32 PM IST
ಬೈಕ್‌ನಲ್ಲಿ ಮುತ್ತಿಕ್ಕಿ, ಬಿಗಿದಪ್ಪಿ ಸಾಗಿದ ಜೋಡಿಗೆ 11 ಸಾವಿರ ರೂ ದಂಡ, ಜೊತೆಗೊಂದು ವಾರ್ನಿಂಗ್!

ಸಾರಾಂಶ

ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಾ ಸಾಗಿದ ಜೋಡಿಯ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಪೊಲೀಸರು ಈ ಸಾಹಸಕ್ಕೆ 11,000 ರೂಪಾಯಿ ದಂಡ ವಿಧಿಸಿದ್ದಾರೆ.

ದೆಹಲಿ(ಜು.20) ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಾ ಸಾಗುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಬೈಕ್ ಟ್ಯಾಂಕ್ ಮೇಲೆ ಕುಳಿತು ಸವಾರನಿಗೆ ಮುತ್ತಿಕ್ಕುತ್ತಾ,ಬಿಗಿದಪ್ಪಿಕೊಂಡು ಸಾಗುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪೊಲೀಸರು ಈ ಕುರಿತು ಎಚ್ಚರಿಕೆ, ದಂಡ ವಿಧಿಸಿದರೂ ಪ್ರಕರಣಗಳೇನು ಕಡಿಮೆಯಾಗಿಲ್ಲ. ಇತ್ತೀಚೆಗೆ ದೆಹಲಿಯಲ್ಲಿ ಇದೇ ರೀತಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಾ ಸಾಗಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಪೊಲೀಸರು ಈ ಜೋಡಿಯನ್ನು ಪತ್ತೆ ಹಚ್ಚಿದೆ. ಇಷ್ಟೇ ಅಲ್ಲ ಪ್ರಕರಣ ದಾಖಲಿಸಿಕೊಂಡ ಪೊಲೀಸರು 11,000 ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಫಿಲ್ಮ್ ಸ್ಟೈಲ್‌ಗಳನ್ನು ನಕಲು ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

ಬೈಕ್ ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಸವಾರನಿಗೆ ಮುಖಮಖಮಾಡಿ ಕಿಸ್ ಮಾಡುತ್ತಾ, ರೋಮ್ಯಾನ್ಸ್ ಮಾಡಿದ್ದಾಳೆ. ಈ ಜೋಡಿಯ ರೋಮ್ಯಾನ್ಸ್ ಪ್ರಮುಖ ರಸ್ತೆಯಲ್ಲೇ ನಡದಿದೆ. ಹಿಂಬದಿಯಲ್ಲಿನ ವಾಹನ ಸವಾರರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿದೆ.

ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂತ ಯುವತಿಯಿಂದ ಬೈಕ್‌ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್‌

ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಈ ವಿಡಿಯೋ ಕುರಿತು ತನಿಖೆ ಆರಂಭಿಸಿದ್ದಾರೆ. ವಿಡಿಯೋದ ಮಾಹಿತಿ ಪಡೆದು ಇತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬೈಕ್ ನಂಬರ್ ಸೇರಿದಂತೆ ಇತರ ಮಾಹಿತಿಗಳು ಪತ್ತೆಯಾಗಿದೆ. ಈ ಮಾಹಿತಿ ಪಡೆದ ಪೊಲೀಸರು ಜೋಡಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. 

 

 

ಈ ಜೋಡಿ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದು ಮಾತ್ರವಲ್ಲ, ಮುಂಭಾಗದಲ್ಲಿ ಹಿಮ್ಮುಖವಾಗಿ ಕುಳಿತಿದ್ದ ಯುವತಿ ಹೆಲ್ಮೆಟ್ ಹಾಕಿಲ್ಲ. ಇಷ್ಟೇ ಅಲ್ಲ ಸವಾರನ ಬಳಿ ಡ್ರೈವಿಂಗ್ ಲೈಸೆನ್ಸ್ ಕೂಡ ಇಲ್ಲ. ಹೀಗಾಗಿ ಪೊಲೀಸರು ಹಲವು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಒಟ್ಟು 11,000 ರೂಪಾಯಿ ದಂಡ ವಿಧಿಸಿದ್ದಾರೆ. ಇದೇ ವೇಳೆ ಈ ರೀತಿ ಚಲನಚಿತ್ರದ ಸೀನ್‌ಗಳನ್ನು ಕಾಪಿ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

7ನೇ ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ, ಪ್ರತಿ ಬಾರಿ ಜಾಮೀನು ಕೊಡಿಸಿ ಮತ್ತೆ ಒಂದಾಗುವ ದಂಪತಿ!

ದೆಹಲಿಯ ಮಂಗೋಲ್‌ಪುರಿ ಹೊರವರ್ತುಲ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಗೆಳತಿಯನ್ನು ಬೈಕ್ ಟ್ಯಾಂಕ್ ಮೇಲೆ ಕೂರಿಸಿ ರೈಡ್ ಮಾಡಲಾಗಿತ್ತು. ಯುವತಿ ರೈಡರ್‌ಗೆ ಮುಖಮಾಡಿ ಕುಳಿತು ರೋಮಾನ್ಸ್ ಮಾಡಿದ್ದಳು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಪೊಲೀಸರು ಅಲರ್ಟ್ ಆಗಿದ್ದರು. ಇದೇ ವೇಳೆ ಈ ರೀತಿಯ ಯಾವುದೇ ಸ್ಟಂಟ್ ಮಾಡದಂತೆ ಮನವಿ ಮಾಡಿದ್ದರು. ಇದೀಗ ರೋಮ್ಯಾನ್ಸ್ ಜೋಡಿಗೆ ದಂಡ ಬರೆ ಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

I-PAC ಮೇಲೆ ಇಡಿ ದಾಳಿ: ಹಗರಣದ ತನಿಖೆಯೋ ರಾಜಕೀಯ ಸೇಡೋ? ಮಮತಾ ಕೈಯಲ್ಲಿದ್ದ 'ಹಸಿರು ಫೈಲ್'ನಲ್ಲಿ ಏನಿದೆ?
10 ತಿಂಗಳ ಮಗನಿಗೆ ವಿಷವುಣಿಸಿ ಅಮ್ಮ ಆ*ತ್ಮಹ*ತ್ಯೆ, ಮೊಮ್ಮಗನ ಸಾವು ಕಂಡು ತಾನೂ ಸಾಯಲು ಯತ್ನಿಸಿದ ಅಜ್ಜಿ!