ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ 10ರ ದೆಹಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸ್

Published : Oct 09, 2026, 12:31 PM IST
cjp peoples court

ಸಾರಾಂಶ

ಬೆಂಗಳೂರು ಪ್ರತಿಭಟನೆ ಬಳಿಕ ಇದೀಗ ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ 10ಕ್ಕೆ ದೆಹಲಿಯಲ್ಲಿ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ದ ಪ್ರತಿಭಟನೆಗೆ ಮುಂದಾಗಿದೆ. ಕಾಕ್ರೋಚ್ ದೆಹಲಿ ತಲುಪಿದ್ದಾರೆ. ಆದರೆ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ.

ನವದೆಹಲಿ (ಅ.09) ಮತದಾರರ ಪಟ್ಟಿ ಅಕ್ರಮ ಆರೋಪ ಮುಂದಿಟ್ಟುಕೊಂಡು ಕಾಕ್ರೋಚ್ ಜನತಾ ಪಾರ್ಟಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತಿದೆ. ಬೆಂಗಳೂರಿನ ಫ್ರೀಡಂ ಫಾರ್ಕ್‌ನಲ್ಲಿ ಭಾರಿ ಹೋರಾಟದ ಬಳಿಕ ಇದೀಗ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಅಕ್ಟೋಬರ್ 10 ರಂದು ದೆಹಲಿಯಲ್ಲಿ ಭಾರಿ ಪ್ರತಿಭಟನೆಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಅಭಿಜಿತ್ ದೀಪ್ಕೆ ಸೇರಿದಂತೆ ಕಾಕ್ರೋಚ್ ಪ್ರಮುಖರು ದೆಹಲಿ ತಲುಪಿದ್ದಾರೆ. ಆದರೆ ಅಕ್ಟೋಬರ್ 10ರ ದೆಹಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ದೆಹಲಿ ಪ್ರತಿಭಟನೆಗಿಲ್ಲ ಪರ್ಮಿಶನ್, ಕೆರಳಿದ ಕಾಕ್ರೋಚ್

ದೆಹಲಿಯಲ್ಲಿ ಆಯೋಜಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಅನುಮತಿ ಕೋರಿ ಕಾಕ್ರೋಚ್ ಜನತಾ ಪಾರ್ಟಿ ನಾಯಕ ಸೌರವ್ ದಾಸ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಕ್ರೋಚ್ ಜನತಾ ಪಾರ್ಟಿ ಅರ್ಜಿ ಅತ್ಯಂತ ತಡವಾಗಿ ಬಂದಿದೆ. ಉದ್ದೇಶಿತ ಪ್ರತಿಭಟನೆ ನಡೆಸುವ 10 ದಿನ ಮೊದಲು ಅನುಮತಿಗೆ ಅರ್ಜಿ ಸಲ್ಲಿಸಬೇಕು ಅನ್ನೋದು ನಿಯಮ. ಆದರೆ ಒಂದೇ ದಿನ ಬಾಕಿ ಇರುವಂತೆ ಅನುಮತಿ ಕೇಳಲಾಗಿದೆ. ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಪಾಲನೆ, ಸುರಕ್ಷತಾ ಕ್ರಮಗಳಿಗೆ ಕನಿಷ್ಟ ಸಮಯದ ಅವಶ್ಯಕತೆ ಇದೆ. ಇಷ್ಟೇ ಅಲ್ಲ ಕಳೆದ ಬಾರಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ ಹಲವು ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಅಕ್ಟೋಬರ್ 10ರ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ದೆಹಲಿ ಜಂಟಿ ಪೊಲೀಸ್ ಆಯುಕ್ತ ನೂಪುರ್ ಪ್ರಸಾದ್ ಹೇಳಿದ್ದಾರೆ.

ದೆಹಲಿಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಕಳೆದ ಕೆಲ ದಿನಗಳಿಂದ ನಿರಂತ ಪ್ರತಿಭಟನೆಗಳು ದೆಹಲಿಯಲ್ಲಿ ನಡೆಯುತ್ತಿದೆ. ಹೀಗಾಗಿ ಅತ್ಯಂ ತಡವಾಗಿ ಅನುಮತಿಗಾಗಿ ಮನವಿ ಮಾಡಲಾಗಿದೆ. ಜೊತೆಗೆ ಕಾಕ್ರೋಚ್ ಜನತಾ ಪಾರ್ಟಿ ಕಳೆದ ಪ್ರತಿಭಟನೆಯಲ್ಲಿನ ನಿಯಮ ಉಲ್ಲಂಘನೆಗಳ ಪರಾಮರ್ಶಿಸಿ ಅನುಮತಿ ನಿರಾಕರಿಸಲಾಗಿದೆ ಎಂದು ನೂಪುರ್ ಪ್ರಸಾದ್ ಹೇಳಿದ್ದಾರೆ.

ದೆಹಲಿಯ ಹಲೆವೆಡೆ ಸೆಕ್ಷನ್ 163 ಜಾರಿ

ದೆಹಲಿ ಪೊಲೀಸರು ಹಲವು ಭಾಗದಲ್ಲಿ ಸೆಕ್ಷನ್ 163 ಜಾರಿ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ದೆಹಲಿ ಪೊಲೀಸರು 163 ಜಾರಿ ಮಾಡಲಾಗಿದೆ. ಯಾರೇ ಆದರೆ 163 ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೂಪುರ್ ಪ್ರಸಾದ್ ಎಚ್ಚರಿಸಿದ್ದಾರೆ.

ಗ್ಯಾನೇಶ್ ಕುಮಾರ್ ನಡೆಸಿದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್)ಆಕ್ರಮ ನಡೆದಿದೆ ಎಂದು ಆರೋಪಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ ದೆಹಲಿಯ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಕೆರಳಿದೆ. ಅನುಮತಿ ನಿರಾಕರಿಸಿದರೂ ಇದೀಗ ಹೋರಾಟ ತೀವ್ರಗೊಳಿಸಲು ಮುಂದಾಗಿದೆ. ಇಷ್ಟೇ ಅಲ್ಲ ಕೇಂದ್ರ ಸರ್ಕಾರ ಕಾಕ್ರೋಚ್ ಜನತಾ ಪಾರ್ಟಿ ಹೋರಾಟಕ್ಕೆ ಬೆಚ್ಚಿ ಬಿದ್ದಿದೆ.ಹೀಗಾಗಿ ಅನುಮತಿ ನಿರಾಕರಿಸಿದೆ ಅನ್ನೋ ಮಾತುಗಳು ಕೇಳಿಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾಳೆಯ ಸಿಜಿಪಿ ಪ್ರತಿಭಟನೆಗೆ ರೈಲ್ವೆ ಇಲಾಖೆಯಿಂದ ಬಿಗ್ ಶಾಕ್! ದೆಹಲಿಗೆ ಹೊರಡುವ ಎಲ್ಲ ಎಕ್ಸ್‌ಪ್ರೆಸ್ ರೈಲುಗಳು ರದ್ದು!
ಅಂತ್ಯಗೊಳ್ಳುತ್ತಿದೆ ಮುಂಗಾರು, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ