ಹಿಂಸಾಚಾರದ ಬಳಿಕ ನಾಪತ್ತೆ, ದೀಪ್ ಸಿದು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ!

By Suvarna NewsFirst Published Feb 3, 2021, 2:56 PM IST
Highlights

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಹಿಂಸಾಚಾರ| ಕೆಂಪುಕೋಟೆ ಮೇಲೆ ಸಿಖ್ ಧ್ವಜ| ಸಿಖ್ ಧ್ವಜ ಹಾರಿಸಿರುವ ಆರೋಪಿ ನಟ ಸಿಧು ಪರಾರಿ| ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಘೋಷಿಸಿದ ದೆಹಲಿ ಪೊಲೀಸ್

ನವದೆಹಲಿ(ಫೆ.02): ದೆಹಲಿಯಲ್ಲಿ ರೈತರ ಟ್ರಾಕ್ಟರ್ ಪರೇಡ್ ನಡುವೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿರುವ ಆರೋಪಕ್ಕೆ ಸಿಲುಕಿರುವ ನಟ ದೀಪ್ ನಾಪತ್ತೆಯಾಗಿದ್ದಾರೆ. ಹೀಗಿರುವಾಗ ದೆಹಲಿ ಪೊಲೀಸರು ದೀಪ್ ಸಿಧು ಹುಡುಕಿಕೊಟ್ಟವರಿಗೆ ಒಂದು lkfx ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 

ಹೌದು, ವಿವಾದದ ನಡುವೆಯೇ ಜನವರಿ 26ರ ಗಣರಾಜ್ಯೋತ್ಸವದಂದು ನಡೆದಿದ್ದ ರೈತ ಟ್ರಾಕ್ಟರ್ ಪೆರೇಡ್ ನಡುವೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ನಿಶಾನ್‌ ಸಾಹೇಬ್ ಹಾರಿಸಲಾಗಿತ್ತು. ಇದರ ಹಿಂದೆ ಪಂಜಾಬಿ ನಟ ದೀಪ್ ಸಿಧು ಇದ್ದಾರೆಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಈ ಹಿಂಸಾಚಾರದ ಮರುದಿನವೇ ಪ್ರಚೋದನಕಾರಿ ಭಾಷಣ ನೀಡಿ ಮತ್ತಷ್ಟು ಸಮಸ್ಯೆಯುಂಟು ಮಾಡಿದ ಆರೋಪದಡಿ ಸಿಧು ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಕೆಂಪು ಕೋಟೆ ಮೇಲೆ ದ್ವಜಾರೋಹಣ: ದೀಪ್ ಸಿದು ಹೇಳಿದ್ದಿಷ್ಟು

ಇಂಗ್ಲೀಷ್‌ನಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಮಾತು

ದೀಪ್‌ ಸಿಧು ಬಗ್ಗೆ ಪಂಜಾಬ್‌ ಹೊರಗಿನ ಜನರಿಗೆ ಹೆಚ್ಚು ತಿಳಿದಿರಲಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಇವರ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಸಿಧು ಸಿಂಘು ಗಡಿಯಲ್ಲಿ ನಿಂತು ಪೊಲಿಸರೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದ ದೃಶ್ಯವಿತ್ತು. ಆರಂಭದಲ್ಲಿ ಈ ವಿಡಿಯೋ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿರುವ ರೈತ ಎಂದು ಹರಿದಾಡಿತ್ತಾದರೂ, ಬಳಿಕ ಅವರು ಪಂಜಾಬಿನ ಖ್ಯಾತ ನಟ ಎಂಬ ವಿಚಾರ ಬಯಲಾಗಿತ್ತು.

ಬಿಜೆಪಿ ಜೊತೆಗಿನ ನಂಟಿನ ಮಾತು
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಿಎಂ ಮೋದಿ ಜೊತೆಗಿದ್ದ ಸಿಧು ಫೋಟೋ ಕೆಲ ಸಮಯದ ಹಿಂದೆ ಭಾರೀ ವೈರಲ್ ಆಗಿತ್ತು. ಇದಾದ ಬಳಿಕ ಅವರಿಗೆ ಹಾಗೂ ಬಿಜೆಪಿಗೆ ಆಫ್ತ ನಂಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ 2019ರ ಲೋಕಸಭಾ ಚುನಾವಣೆಯಲ್ಲಿ ಸಿಧು, ನಟ ಸನ್ನಿ ಡಿಯೋಲ್ ಪರ ಪ್ರಚಾರವನ್ನೂ ಮಾಡಿದ್ದರು.. ಹೀಗಿದ್ದರೂ ನಟ ಸನ್ನಿ ಸೇರಿ ಬಿಜೆಪಿ ಇವರೊಂದಿಗೆ ತಮಗೆ ಯಾವ ಸಂಬಂಭವೂ ಇಲ್ಲ ಎಂದಿದ್ದರು. 

"

click me!