ರೈತ ಪ್ರತಿಭಟನೆಗೆ ವಿದೇಶೀ ಗಣ್ಯರಾದ ರಿಹಾನಾ, ಗ್ರೆಟ್ಟಾ ಥನ್‌ಬರ್ಗ್ ಸೇರಿ ಅನೇಕ ಗಣ್ಯರು ಬೆಂಬಲ ಸೂಚಿಸಿ ಟ್ವಿಟ್ ಮಾಡಿದ ಬೆನ್ನಲ್ಲೇ ಮೋದಿ ಸರ್ಕಾರ ಈ ಸಂಬಂಧ ಮಹತ್ವದ ಪ್ರಕಟಣೆ ಹೊರಡಿಸಿದೆ. ತನ್ನ ಈ ಪ್ರಕಟಣೆಯಲ್ಲಿ ಸರ್ಕಾರ 'ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್ ಮತ್ತು ಕಾಮೆಂಟ್‌ಗಳ ದುರಾಸೆ' ವಿರುದ್ಧ ಎಚ್ಚರಿಕೆ ರವಾನಿಸಿದೆ. ಅಲ್ಲದೇ ಈ ಪ್ರತಿಭಟನೆ ಭಾರತದ 'ಅತೀ ಚಿಕ್ಕ ಭಾಗದ ರೈತರು' ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ತನ್ನ ಈ ಪ್ರಕಟಣೆಯಲ್ಲಿ ಸರ್ಕಾರ #IndiaTogether ಹಾಗೂ #IndiaAgainstPropaganda ಹ್ಯಾಷ್‌ಟ್ಯಾಗ್‌ಗಳನ್ನು ಬಳಸುತ್ತಾ 'ಈ ಪ್ರತಿಭಟನೆ ಭಾರತದ ಪ್ರಜಾಪ್ರಭುತ್ವ ತತ್ವ, ಸರ್ಕಾರ ಹಾಗೂ ಇದರಲ್ಲಿ ಪಾಲ್ಗೊಂಡಿರುವ ರೈತ ಸಂಘಟನೆಯ ಸಮಸ್ಯೆ ಬಗೆಹರಿಸಲು ನಡೆಸುತ್ತಿರುವ ಯತ್ನವನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಬೇಕು' ಎಂದು ತಿಳಿಸಿದೆ.
ಇಂತಹ ವಿಚಾರಗಳ ಕುರಿತು ಹೇಳಿಕೆ ನೀಡುವ ಮೊದಲು ವಾಸ್ತವತೆ, ಸತ್ಯ ಅರಿತು ಹಾಗೂ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬೇಕಾಗಿ ಆಗ್ರಹಿಸುತ್ತೇವೆ. ಸೋಶಿಯಲ್ ಮಿಡಿಯಾ ಹ್ಯಾಷ್‌ಟ್ಯಾಗ್ ಹಾಗೂ ಕಮೆಂಟ್‌ಗಳು ಸಿಗುತ್ತವೆಂಬ ದುರಾಸೆಯಿಂದ ಇಂತಹ ನಡೆ ಸರಿಯಲ್ಲ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ಇದನ್ನು ಗಮನದಲ್ಲಿರಿಸಕೊಳ್ಳಬೇಕು. ಈ ನಡೆ ಕೇವಲ ತಪ್ಪಲ್ಲ, ಬದಲಾಗಿ ಬೇಜವಾಬ್ದಾರಿತನವಾಗುತ್ತದೆ ಎಂದೂ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ