
ನವದೆಹಲಿ: ಪ್ರಯಾಣದ ಸಂದರ್ಭದಲ್ಲಿ ಬಸ್, ರೈಲು, ಮೆಟ್ರೋದಲ್ಲಿ ಸೀಟ್ ಹಿಡಿಯಲು ಪ್ರಯಾಣಿಕರು ಹರಸಾಹಸಪಡುತ್ತಾರೆ. ಕೆಲವೊಮ್ಮೆ ಕೆಲ ಗಂಟೆ ಕುಳಿತುಕೊಳ್ಳುವ ಆಸನಕ್ಕಾಗಿ ಶಕ್ತಿ ಪ್ರದರ್ಶಿಸಬೇಕಾಗುತ್ತದೆ. ಇಂತಹವುದೇ ಒಂದು ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿದ್ದು, ಮಹಿಳೆಯರಿಬ್ಬರು ಒಬ್ಬರ ಮೇಲೊಬ್ಬರು ಬಿದ್ದಂತೆ ಫೈಟ್ ಮಾಡಿದ್ದಾರೆ. ರಾಜಧಾನಿ ದೆಹಲಿ ಮೆಟ್ರೋದಲ್ಲಿ (Delhi Metro) ಇಂತಹ ಹೊಡೆದಾಟಗಳು ಸಾಮಾನ್ಯವಾಗಿರುತ್ತವೆ. ಪ್ರಯಾಣಿಕರಿಗೆ (Passengers) ತೊಂದರೆ ನೀಡುತ್ತಲೇ ಮೆಟ್ರೋ ರೈಲಿನಲ್ಲಿ ಕೆಲವರು ರೀಲ್ಸ್ (Delhi Metro Viral Reels) ಮಾಡುತ್ತಾರೆ. ಇನ್ನು ಕೆಲವರು ರೈಲಿನೊಳಗೆ ಸ್ಟಂಟ್ ಮಾಡುತ್ತಾರೆ. ಈ ಸಂಬಂಧ ಮೆಟ್ರೋ ರೈಲಿನಲ್ಲಿ ದೂರಗಳು ದಾಖಲಾಗುತ್ತಿರುತ್ತವೆ.
ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಜಗಳವಾಡಿದ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಂಗುಬಡಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿಯೂ ಮತ್ತು ಬೇಸರದಿಂದಲೂ ಕಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ತಾಳ್ಮೆ ಇಲ್ಲದಿರೋದೇ ಇವರ ಜಗಳಕ್ಕೆ ಪ್ರಮುಖ ಕಾರಣವಾಗಿರುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಘರ್ ಕೆ ಕಲೇಶ್ ಎಂಬ ಜನಪ್ರಿಯ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಮೆಟ್ರೋ ಒಂದು ನಿಲ್ದಾಣದಲ್ಲಿ ನಿಂತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಇಬ್ಬರು ಮಹಿಳೆಯರು ಪರಸ್ಪರ ಕೂದಲು ಹಿಡಿದು ಮೆಟ್ರೋ ಸೀಟಿನಲ್ಲಿ ಬಿದ್ದಿದ್ದಾರೆ. ಇಬ್ಬರೂ ಪರಸ್ಪರ ಕೂದಲು ಹಿಡಿದು ಎಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಮೇಲೆ ಬಿದ್ದಿದ್ದಾಳೆ. ಮೇಲಿರುವ ಮಹಿಳೆ ತನ್ನ ಕಾಲನ್ನು ಕೆಳಗಿರುವ ಮಹಿಳೆಯ ಮೇಲೆ ಇಡುತ್ತಿರುವುದನ್ನು ಕಾಣಬಹುದು.
ಈ ವೇಳೆ, ಇನ್ನೊಬ್ಬ ಮಹಿಳಾ ಪ್ರಯಾಣಿಕ ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸುತ್ತಾಳೆ, ಆದರೆ ಇಬ್ಬರೂ ಜಗಳವಾಡುತ್ತಲೇ ಇರುತ್ತಾರೆ. ಸೀಟಿಗಾಗಿ ಜಗಳ ನಡೆದಿದೆ ಎಂದು ವರದಿಯಾಗಿದೆ, ಆದರೆ ಮೆಟ್ರೋದಲ್ಲಿ ಸೀಟುಗಳು ಖಾಲಿ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಮಟ್ರೋದಲ್ಲಿ ಯುವತಿ ಕೂಗಾಟ, ಚೀರಾಟ ಕೇಳಿ ಹೌಹಾರಿದ ಪ್ರಯಾಣಿಕರು; ಏನ್ ಮಾಡಿದ್ರೂ ತಣ್ಣಗಾಗದ ಹುಡ್ಗಿ
ಕೇವಲ 23 ಸೆಕೆಂಡುಗಳ ಈ ವಿಡಿಯೋವನ್ನು ಒಂದೇ ದಿನದಲ್ಲಿ 12 ಲಕ್ಷ ಜನರು ವೀಕ್ಷಿಸಿದ್ದಾರೆ. ಅನೇಕ ಜನರು ವಿಡಿಯೋದ ಕೆಳಗೆ ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ದೆಹಲಿ ಮೆಟ್ರೋ ಯಾವಾಗಲೂ ಮನರಂಜನೆಯ ತಾಣ ಎಂದು ಒಬ್ಬ ವೀಕ್ಷಕ ಬರೆದಿದ್ದಾರೆ. ನಾಟಕ, ಹಾಸ್ಯ, ಮನರಂಜನೆ ಎಲ್ಲವೂ ದೆಹಲಿ ಮೆಟ್ರೋದಲ್ಲಿ ಸಿಗುತ್ತದೆ. ಪ್ರತಿದಿನ ಕಲೇಶ್ ಮೆಟ್ರೋದಲ್ಲಿ ಸಂಚರಿಸುವಾಗ ಯಾರಿಗೆ ಟಿವಿ ಬೇಕು ಎಂದು ಇನ್ನೊಬ್ಬ ವೀಕ್ಷಕ ಪ್ರಶ್ನಿಸಿದ್ದಾರೆ. ಪ್ರಿಯ ಸ್ನೇಹಿತರೇ, ಇಂತಹ ಘಟನೆಗಳಲ್ಲಿ ಎಂದಿಗೂ ಮಧ್ಯಪ್ರವೇಶಿಸಬೇಡಿ. ನೀವು ಸಿಕ್ಕಿಹಾಕಿಕೊಳ್ಳಬಹುದು ಮತ್ತು ಜಗಳವಾಡಿದವರು ಸ್ನೇಹಿತರಾಗಬಹುದು ಎಂದು ಒಬ್ಬ ವೀಕ್ಷಕ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಯ ಕೆನ್ನೆ ಗಿಲ್ಲಿದ ಯುವಕ: ವಿಡಿಯೋ ವೈರಲ್
ಕೆಲವರು ದೆಹಲಿ ಮೆಟ್ರೋದಲ್ಲಿ ನಿಮಗೆ ಮನರಂಜನೆ ಉಚಿತವಾಗಿ ಸಿಗುತ್ತದೆ. ಇಂತಹ ಗಲಾಟೆಗಳು ನಡೆದ್ರೆ ನಮ್ಮ ನಿಲ್ದಾಣ ಬಂದಿರುವ ವಿಷಯವೇ ನಮಗೆ ಗೊತ್ತಾಗಲ್ಲ ಎಂದು ತಮಾಷೆಯಾಗ ಕಮೆಂಟ್ ಮಾಡಿದ್ದಾರೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಯುವತಿಯರಿಬ್ಬರು, ಮೋಹೇಂ ರಂಗ್ ಹಾಡಿಗೆ ಮಾದಕವಾಗಿ ನೃತ್ಯ ಮಾಡಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೆಲ್ಲರನ್ನು ಚಕಿತಗೊಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ