ರಾಷ್ಟ್ರಧ್ವಜದಲ್ಲಿ ಸ್ಕೂಟಿ ಸ್ವಚ್ಛಗೊಳಿಸಿದವ ಅಂದರ್: ವಿಡಿಯೋ ವೈರಲ್‌

Published : Sep 09, 2022, 01:02 PM IST
ರಾಷ್ಟ್ರಧ್ವಜದಲ್ಲಿ ಸ್ಕೂಟಿ ಸ್ವಚ್ಛಗೊಳಿಸಿದವ ಅಂದರ್: ವಿಡಿಯೋ ವೈರಲ್‌

ಸಾರಾಂಶ

ಸ್ಕೂಟರ್‌ ಧೂಳು ಹೊಡೆಯಲು ರಾಷ್ಟ್ರಧ್ವಜ ಬಳಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಮ್ಮ ರಾಷ್ಟ್ರಧ್ವಜವನ್ನು ಜನಪ್ರಿಯಗೊಳಿಸುವ ಸಲುವಾಗಿ ಹಾಗೂ ಪ್ರತಿ ಭಾರತೀಯರಲ್ಲಿ ದೇಶಭಕ್ತಿಯನ್ನು ಚಿಗುರಿಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಸಲುವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಂಡಿತ್ತು. ದೇಶದ ನೂರಾರು ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಭಕ್ತಿ ಮೆರೆದಿದ್ದರು. ಭಾರತದ ರಾಷ್ಟ್ರಧ್ವಜವನ್ನು ನಿರ್ವಹಿಸಲು ಸಂವಿಧಾನದಲ್ಲಿಯೇ ಹಲವಾರು ನೀತಿ ಸಂಹಿತೆಗಳಿವೆ. ಈ ನಡುವೆ ಕೋಟ್ಯಾಂತರ ಭಾರತೀಯರು ಹೆಮ್ಮೆ ಪಡುವ ದೇಶದ ಹೆಮ್ಮೆಯ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್ ಸ್ವಚ್ಛಗೊಳಿಸಲು ಬಳಸಿದ್ದಾರೆ. ಈ ಘಟನೆಯ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. 

ಇದೀಗ ಹೀಗೆ ರಾಷ್ಟ್ರಧ್ವಜದಲ್ಲಿ ಸ್ಕೂಟರ್ ಒರೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ 52 ವರ್ಷದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಶಾನ್ಯ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಈ ದೃಶ್ಯವನ್ನು ಅಲ್ಲೇ ಇದ್ದ ಸ್ಥಳೀಯರು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. 

ಕಿರಿದಾದ  ಸಂಧಿಯಲ್ಲಿ ನಿಲ್ಲಿಸಲಾಗಿದ್ದ ರಾಷ್ಟ್ರಧ್ವಜವಿದ್ದ ತನ್ನ ಸ್ಕೂಟರ್‌ ಅನ್ನು ವ್ಯಕ್ತಿ ರಾಷ್ಟ್ರಧ್ವಜದಿಂದಲೇ ಒರೆಸುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಈ ವಿಷಯದಲ್ಲಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಬಜಾನ್‌ಪುರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆ, 1971 ರ ಸೆಕ್ಷನ್ 2 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ತನಿಖೆಗೆ ಹಾಜರಾಗುವಂತೆ ಕೋರಲಾಗಿದೆ. ಇದು ಉದ್ದೇಶಪೂರ್ವಕವಾಗಿಲ್ಲ ಮತ್ತು ಅವರು ತಪ್ಪಾಗಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ನಾವು  ಅವರನ್ನು ತನಿಖೆಗೆ ಸಹಕರಿಸಲು ಮತ್ತು ಕರೆ ಮಾಡಿದಾಗ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಹೇಳಿದ್ದೇವೆ ಎಂದರು. ಘಟನೆಗೆ ಸಂಬಂಧಿಸಿದ ಸ್ಕೂಟರ್ ಹಾಗೂ ರಾಷ್ಟ್ರಧ್ವಜವನ್ನು ಪೊಲೀಸರು ಬಂಧಿಸಿದ್ದಾರೆ. ಸ್ಕೂಟರ್ (Scooter) ಸ್ವಚ್ಛಗೊಳಿಸಲು ಬಳಸಿದ್ದ ಸ್ಕೂಟರ್ ಹಾಗೂ ಧ್ವಜವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನೀತಿ ಸಂಹಿತೆಯ ಪ್ರಕಾರ, ತಮ್ಮ ವಾಹನಗಳಲ್ಲಿ ಭಾರತೀಯ ಧ್ವಜವನ್ನು (National Flag) ಪ್ರದರ್ಶಿಸುವಾಗ ಅನುಸರಿಸಬೇಕಾದ ಹಲವಾರು ನಿಯಮಗಳಿವೆ. ಮೊದಲನೆಯದಾಗಿ, ಮೋಟಾರು ಕಾರುಗಳಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಶಾಶ್ವತವಾಗಿ ಪ್ರದರ್ಶಿಸಲು ಎಲ್ಲರಿಗೂ ಅನುಮತಿ ಇಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಗವರ್ನರ್‌ಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು (Lieutenant Governors) ಮತ್ತು ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು, ಭಾರತೀಯ ಪೋಸ್ಟ್‌ಗಳ ಮುಖ್ಯಸ್ಥರು, ಪ್ರಧಾನಿ(PM), ಸಂಸತ್ ಸಚಿವರು (Cabinet ministers), ಲೋಕಸಭೆಯ ಸ್ಪೀಕರ್‌, ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ (CJI) ಮಾತ್ರ ಈ ಅವಕಾಶವಿದೆ. 

ಸೆಕ್ಷನ್ 3.12 ರ ಅಡಿಯಲ್ಲಿ, ಖಾಸಗಿ ವಾಹನ ಮಾಲೀಕರಿಗೂ (private vehicle owner) ಸಹ ಧ್ವಜವನ್ನು ಪ್ರದರ್ಶಿಸಲು ಅವಕಾಶವಿದೆ. ಕಾನೂನಿನ ಪ್ರಕಾರ, ಕಾರಿನ ಮೇಲೆ ಧ್ವಜವನ್ನು ಏಕಾಂಗಿಯಾಗಿ ಪ್ರದರ್ಶಿಸಿಸುವಾಗ, ಅದನ್ನು ಬಾನೆಟ್‌ನ ಮಧ್ಯದ ಮುಂಭಾಗದಲ್ಲಿ ಅಥವಾ ಕಾರಿನ ಮುಂಭಾಗದ ಬಲಭಾಗದಲ್ಲಿ ದೃಢವಾಗಿ ಅಂಟಿಸಬೇಕು ಎಂಬ ನಿಯಮವಿದೆ. ರಾಷ್ಟ್ರಧ್ವಜದ (National Flag) ದುರುಪಯೋಗಗೊಳಿಸುವ ಅಥವಾ ನಾಶಗೊಳಿಸುವ ಹರಿದು ಹಾಕುವ ಅಥವಾ ಇನ್ನಾವುದೇ ರೀತಿಯಲ್ಲಿ ಅವಮಾನಿಸಿದರೆ ಮೂರು ವರ್ಷಗಳವರೆಗಿನ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನಿದೆ. ಆದಾಗ್ಯೂ ಇದುವರೆಗೆ ಭಾರತೀಯ ರಾಷ್ಟ್ರಧ್ವಜವನ್ನು ದುರುಪಯೋಗಪಡಿಸಿಕೊಂಡ ಅಥವಾ ತಪ್ಪಾಗಿ ಪ್ರದರ್ಶಿಸಿದ ವಾಹನ ಚಾಲಕರ ವಿರುದ್ಧ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ