ದಿಲ್ಲಿ ಮದ್ಯ ಹಗರಣದ ಹಣ ಗೋವಾ ಚುನಾವಣೆಗೆ ಬಳಕೆ: ಆಪ್‌ ವಿರುದ್ಧದ ಇಡಿ ಚಾರ್ಜ್‌ಶೀಟ್

By Kannadaprabha NewsFirst Published Feb 3, 2023, 9:24 AM IST
Highlights

ದೆಹಲಿಯ ಮದ್ಯ ಹಗರಣದಲ್ಲಿ ಗಳಿಸಿದ ಹಣವನ್ನು ಆಮ್‌ ಆದ್ಮಿ ಪಕ್ಷ (ಆಪ್‌) ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಳಕೆ ಮಾಡಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆ.

ನವದೆಹಲಿ: ದೆಹಲಿಯ ಮದ್ಯ ಹಗರಣದಲ್ಲಿ ಗಳಿಸಿದ ಹಣವನ್ನು ಆಮ್‌ ಆದ್ಮಿ ಪಕ್ಷ (ಆಪ್‌) ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಳಕೆ ಮಾಡಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆ. ಮದ್ಯದ ಹಗರಣದಲ್ಲಿ ಆಪ್‌ಗೆ ಸಿಕ್ಕ ಲಂಚದ ಹಣದ ಬಗ್ಗೆ ತನಿಖೆ ನಡೆಸಿದಾಗ ಸುಮಾರು 70 ಲಕ್ಷ ರು.ನಷ್ಟು ಹಣ ಗೋವಾ ಚುನಾವಣೆಗೂ ಮುನ್ನ ಆಪ್‌ನ ಪರವಾಗಿ ಸಮೀಕ್ಷೆ ನಡೆಸಿದ ಸ್ವಯಂಸೇವಕರ ತಂಡಗಳಿಗೆ ಸಂದಾಯವಾಗಿರುವುದು ಪತ್ತೆಯಾಗಿದೆ. 

ಆಪ್‌ನ ಸಂವಹನ ವಿಭಾಗದ ಮುಖ್ಯಸ್ಥ ವಿಜಯ್‌ ನಾಯರ್‌ ಪ್ರಚಾರದಲ್ಲಿ ತೊಡಗಿಕೊಂಡ ಕೆಲವರಿಗೆ ನಗದು ನೀಡಲಾಗಿದೆ ಎಂದು ತನಿಖೆಯ ವೇಳೆ ತಿಳಿಸಿದ್ದಾರೆ. ವಿಜಯ್‌ ನಾಯರ್‌ ಅವರೇ ಪಕ್ಷದ ಪರವಾಗಿ ದೆಹಲಿಯ ಮದ್ಯದ ಲೈಸನ್ಸ್‌ ಅವ್ಯವಹಾರದಲ್ಲಿ(Delhi liquor license scam) 100 ಕೋಟಿ ರು. ಪಡೆದಿದ್ದರು. ಹಣ ನೀಡಿದ ಗುಂಪಿನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಮುಗುಂಟ ಶ್ರೀನಿವಾಸುಲು ರೆಡ್ಡಿ, ಅವರ ಮಗ ರಾಘವ್‌ ಮುಗುಂಟ, ಅರಬಿಂದೋ ಫಾರ್ಮಾ ನಿರ್ದೇಶಕ ಪಿ.ಶರತ್‌ ಚಂದ್ರ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ (Chandrasekhara Rao) ಪುತ್ರಿ ಕವಿತಾ ಕವಲಕುಂಟ (Kavitha Kavalakunta) ಸೇರಿದ್ದಾರೆ. ಹೈದರಾಬಾದ್‌ನ ಉದ್ಯಮಿ ಅಭಿಷೇಕ್‌ ಬೋಯಿನಪಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇ.ಡಿ. ಹೇಳಿದೆ.

Delhi Liquor Policy Case: ED ರಿಮಾಂಡ್‌ ನೋಟ್‌ನಲ್ಲಿ ಕೆಸಿಆರ್ ಪುತ್ರಿ ಕವಿತಾ ಹೆಸರು!

ಈ ಆರೋಪವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ 'ಶುದ್ಧ ಕಟ್ಟುಕತೆ' ಎಂದು ತಳ್ಳಿಹಾಕಿದ್ದಾರೆ.

ಕೇಜ್ರಿವಾಲ್ ಪಾತ್ರವೂ ಇದೆ
ದೆಹಲಿ ಅಬಕಾರಿ ಹಗರಣದಲ್ಲಿ (Delhi liquor scam) ಆಪ್‌ ನೇತಾರ ಅರವಿಂದ ಕೇಜ್ರಿವಾಲ್‌ ಅವರ ಪಾತ್ರವೂ ಇದೆ ಎಂಬುದನ್ನು ತೋರಿಸುವ ವಿಷಯವನ್ನು ಜಾರಿ ನಿರ್ದೇಶನಾಲಯ (ಇ.ಡಿ.). ತನ್ನ ಚಾರ್ಜ್‌ಶೀಟಲ್ಲಿ ಬಹಿರಂಗಪಡಿಸಿದೆ. ಹಗರಣದ ಆರೋಪಿ ವಿಜಯ್‌ ನಾಯರ್‌ (Vijay Nair) ಪರವಾಗಿ ಕೇಜ್ರಿವಾಲ್‌ ಅವರು ವಿಡಿಯೋಕಾಲ್‌ ಒಂದರಲ್ಲಿ 'ಶಿಫಾರಸು' ಮಾಡಿದ್ದರು ಎಂದು ಇ.ಡಿ. ಹೇಳಿದೆ. ಕೇಜ್ರಿವಾಲ್‌ ಮತ್ತು ಇಂಡೋಸ್ಪಿರಿಟ್‌ನ ಮುಖ್ಯಸ್ಥರಾದ ಸಮೀರ್‌ ಮಹೇಂದ್ರು ನಡುವೆ ವಿಡಿಯೋ ಕಾಲ್‌ ಸಂಭಾಷಣೆ ನಡೆದಿತ್ತು. ಅದರಲ್ಲಿ, 'ವಿಜಯ್‌ ನಮ್ಮ ಹುಡುಗ, ನೀವು ಇವನನ್ನು ನಂಬಬಹುದು. ಇವನೊಂದಿಗೆ ವ್ಯವಹಾರ ಮುಂದುವರೆಸಿ ಎಂದು ಕೇಜ್ರಿವಾಲ್‌ ಹೇಳಿದ್ದರು ಎಂದು ಇ.ಡಿ. ಹೇಳಿದೆ.

ಆದರೆ ಇದನ್ನು ಕೇಜ್ರಿವಾಲ್‌ ತಿರಸ್ಕರಿಸಿದ್ದು, ಇ.ಡಿ. 5 ಸಾವಿರ ಪ್ರಕರಣ ದಾಖಲಿಸಿಕೊಳ್ಳಲಿ. ಇ.ಡಿ. ಇರುವುದೇ ಸರ್ಕಾರವನ್ನು ಬೀಳಿಸಲು ಮತ್ತು ಶಾಸಕರನ್ನು ಖರೀದಿಸಲು ಎಂದು ಆರೋಪಿಸಿದ್ದಾರೆ.

ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ

click me!