ದೆಹಲಿ ಅಬಕಾರಿ ಹಗರಣ, ಸಿಎಂ ಕೇಜ್ರಿವಾಲ್ 10 ದಿನ ಕಸ್ಟಡಿಗೆ ಒಪ್ಪಿಸುವಂತೆ ಇಡಿ ಕೋರ್ಟ್‌ಗೆ ಮನವಿ!

By Suvarna NewsFirst Published Mar 22, 2024, 6:43 PM IST
Highlights

ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು 10 ದಿನಗಳ ಇಜಿ ವಶಕ್ಕೆ  ಒಪ್ಪಿಸಲಾಗಿದೆ. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
 

ನವದೆಹಲಿ(ಮಾ.22) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಾರ್ಟಿಗೆ ದೆಹಲಿ ಅಬಕಾರಿ ಅಕ್ರಮ ನೀತಿ ಮುಳುವಾಗಿದೆ. ಒಬ್ಬೊಬ್ಬ ಸಚಿವರು, ನಾಯಕರು ಜೈಲು ಸೇರುತ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್ ಬಳಿಕ ಅಬಕಾರಿ ನೀತಿಯಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದಾರೆ. ನಿನ್ನೆ ಇಡಿ ಅಧಿಕಾರಿಗಳು ಕೇಜ್ರಿವಾಲ್ ಮನೆ ಮೇಲೆ ದಾಳಿ ನಡೆಸಿದ್ದರು. ಬಳಿಕ ಕೇಜ್ರಿವಾಲ್ ಬಂಧಿಸಿದ ಇಡಿ ಅಧಿಕಾರಿಗಳು ಇಂದು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇತ್ತ ಕೇಜ್ರಿವಾಲ್ ರಿಮ್ಯಾಂಡ್ ಅರ್ಜಿ ಇದೇ ವೇಳೆ ವಿಚಾರಣೆ ನಡೆಸಲಾಗಿದೆ. ಸುದೀರ್ಘ ವಾದ ಪ್ರತಿವಾದ ಆಲಿಸಿದ ದೆಹಲಿಯ ರೋಸ್ ಅವೆನ್ಯೂ ನ್ಯಾಯಲಯ ಅರವಿಂದ್ ಕೇಜ್ರಿವಾಲ್ ಅವರನ್ನು 10 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ.

click me!