* ಆಪತ್ಕಾಲದ ಬಂಧುವಂತೆ ಭಾರತದ ನೆರವಿಗೆ ಧಾವಿಸುವ ರತನ್ ಟಾಟಾ
* ರಾಷ್ಟ್ರದ ಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಟ್ಟ ಟಾಟಾಗೆ ಭಾರತ ರತ್ನ ನೀಡುವಂತೆ ಕೋರಿ ಅರ್ಜಿ
* ಆ ಒಂದು ಮಾತು ಹೇಳಿ ಅರ್ಜಿ ತಿರಸ್ಕರಿಸಿದ ಕೋರ್ಟ್
ನವದೆಹಲಿ(ಮಾ.31): ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪರಿಗಣಿಸಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ವಿಭಾಗೀಯ ಪೀಠವು ಅರ್ಜಿದಾರರಿಗೆ ಇದು ವೆಚ್ಚವನ್ನು ವಿಧಿಸಲು ಸೂಕ್ತವಾದ ಪ್ರಕರಣವಾಗಿದೆ ಎಂದು ಎಚ್ಚರಿಸಿದೆ. "ಭಾರತ ರತ್ನ ಯಾರಿಗೆ ನೀಡಬೇಕೆಂದು ನಾವು ನಿರ್ಧರಿಸುವುದಾ? ಒಂದೋ ಈ ಅರ್ಜಿಯನ್ನು ಹಿಂಪಡೆಯಿರಿ ಅಥವಾ ನಾವು ದಂಡ ವಿಧಿಸುತ್ತೇವೆ" ಎಂದು ಪೀಠ ಹೇಳಿದೆ. ನಂತರ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಕೆ ದುಬೆ ಮನವಿಯನ್ನು ಹಿಂಪಡೆಯಲು ಮುಂದಾಗಿದ್ದಾರೆ.
Air India Chairman ಏರ್ ಇಂಡಿಯಾ ಮುಖ್ಯಸ್ಥನಾಗಿ ಟಾಟಾ ಸನ್ಸ್ ಚೀಫ್ ಎನ್ ಚಂದ್ರಶೇಖರನ್ ನೇಮಕ!
ರತನ್ ಟಾಟಾ ಅವರು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಲ್ಲದೆ ತಮ್ಮ ಇಡೀ ಜೀವನವನ್ನು ರಾಷ್ಟ್ರದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ ಮತ್ತು ರಾಷ್ಟ್ರಕ್ಕೆ ಅವರ ಕೊಡುಗೆಯನ್ನು ಕಡೆಗಣಿಸಲಾಗುವುದಿಲ್ಲ ಎಂದು ಉಲ್ಲೇಖಿಸಿ ರಾಕೇಶ್ ಎಂಬವರು ಅರ್ಜಿ ಸಲ್ಲಿಸಿದ್ದರು. ಚಿನ್ನದ ಚಮಚದೊಂದಿಗೆ ಜನಿಸಿದರೂ, ಟಾಟಾ ಅವರು ಆದರ್ಶಪ್ರಾಯ ಜೀವನವನ್ನು ನಡೆಸಿದರು ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ. ಅವರು ಅತ್ಯುತ್ತಮ ನಾಯಕತ್ವದ ಕೌಶಲ್ಯ ಮತ್ತು ವ್ಯವಹಾರದ ಕುಶಾಗ್ರಮತಿಯನ್ನು ಹೊಂದಿದ್ದಾರೆ, ಇದು ಭಾರತ ಮತ್ತುಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೋವಿಡ್ ಪರಿಹಾರಕ್ಕಾಗಿ ಟಾಟಾ ಗ್ರೂಪ್ ಕಂಪನಿಗಳು ಸುಮಾರು ₹ 3,000 ಕೋಟಿ ದೇಣಿಗೆ ನೀಡಿವೆ ಎಂದು ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದೆ.
2000 ರಲ್ಲಿ ಟಾಟಾ ಅವರಿಗೆ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಮತ್ತು 2009 ರಲ್ಲಿ ಯುಕೆ ಗೌರವ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಸೇರಿದಂತೆ ಇತರ ಗಮನಾರ್ಹ ಮನ್ನಣೆಯನ್ನು ನೀಡಲಾಯಿತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
Air India ಪ್ರಯಾಣಿಕರೊಂದಿಗೆ ರತನ್ ಟಾಟಾ ಮಾತು, 18 ಸೆಕೆಂಡ್ ಆಡಿಯೋದಲ್ಲಿ ಹೇಳಿದ್ದಿಷ್ಟು
FY20 ರಲ್ಲಿ ಟಾಟಾ ಗ್ರೂಪ್‌ನ 30 ಕಂಪನಿಗಳ ಆದಾಯ $106 ಶತಕೋಟಿ ಆಗಿತ್ತು. 10 ಕ್ಲಸ್ಟರ್‌ಗಳಲ್ಲಿ ಹರಡಿರುವ 30 ಕಂಪನಿಗಳು 100 ಕ್ಕೂ ಹೆಚ್ಚು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಒಟ್ಟಾರೆಯಾಗಿ 7.5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ರತನ್ ಟಾಟಾ ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ ನ್ಯಾಯಾಲಯವು ಭಾರತ ರತ್ನ ಯಾರಿಗೆ ನೀಡಬೇಕೆಂದು ನಿರ್ಧರಿಸುವುದು ತನ್ನ ವ್ಯಾಪ್ತಿಗೊಳಪಡುಸವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತಾ ಈ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ.