ಈಶಾನ್ಯ ರಾಜ್ಯದಲ್ಲಿ ಶಾಂತಿ ಕಾಪಾಡಲು ಕೇಂದ್ರದ ಮಹತ್ವದ ಹೆಜ್ಜೆ: 3 ರಾಜ್ಯಗಳಲ್ಲಿ AFSPA ವ್ಯಾಪ್ತಿ ಕಡಿತ!

Published : Mar 31, 2022, 02:57 PM ISTUpdated : Mar 31, 2022, 03:03 PM IST
ಈಶಾನ್ಯ ರಾಜ್ಯದಲ್ಲಿ ಶಾಂತಿ ಕಾಪಾಡಲು ಕೇಂದ್ರದ ಮಹತ್ವದ ಹೆಜ್ಜೆ: 3 ರಾಜ್ಯಗಳಲ್ಲಿ AFSPA ವ್ಯಾಪ್ತಿ ಕಡಿತ!

ಸಾರಾಂಶ

* ದಶಕಗಳ ನಂತರ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳ ವಿಚಾರದಲ್ಲಿ ಮಹತ್ವದ ಹೆಜ್ಜೆ * ಮೂರು ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮೋದಿ ಸರ್ಕಾರದ ನಿರ್ಧಾರ * ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ AFSPA ಅಡಿಯಲ್ಲಿ ಪ್ರದೇಶಗಳನ್ನು ಕಡಿಮೆ ಮಾಡಲು ಕೇಂದ್ರದ ನಿರ್ಧಾರ

ನವದೆಹಲಿ(ಮಾ.31): ಗುರುವಾರದ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ದಶಕಗಳ ನಂತರ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ AFSPA ಅಡಿಯಲ್ಲಿ ಪ್ರದೇಶಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಟ್ವಿಟರ್‌ನಲ್ಲಿ ಈ ಘೋಷಣೆಯನ್ನು ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ಈ ರಾಜ್ಯಗಳಲ್ಲಿ ಸುಧಾರಿತ ಭದ್ರತಾ ಪರಿಸ್ಥಿತಿ ಮತ್ತು ತ್ವರಿತ ಅಭಿವೃದ್ಧಿಯ ಫಲಿತಾಂಶವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ದಂಗೆಯನ್ನು ಕೊನೆಗೊಳಿಸಲು ಮತ್ತು ಈಶಾನ್ಯದಲ್ಲಿ ಶಾಶ್ವತ ಶಾಂತಿಯನ್ನು ತರಲು ಪ್ರಧಾನಿ ಮೋದಿ ಹಲವಾರು ಒಪ್ಪಂದಗಳನ್ನು ಜಾರಿಗೊಳಿಸಿದ್ದು, ಇದು ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೈಗೊಂಡ ಮತ್ತೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ, 

ದಶಕಗಳ ಗೊಂದಲದ ನಂತರ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅಡಿಯಲ್ಲಿ ಪ್ರದೇಶಗಳನ್ನು ಕಡಿಮೆ ಮಾಡಲು ಕೇಂದ್ರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಕಾಯ್ದೆಯು ಭದ್ರತಾ ಪಡೆಗಳಿಗೆ ಎಲ್ಲಿ ಬೇಕಾದರೂ ಕಾರ್ಯಾಚರಣೆ ನಡೆಸಲು ಮತ್ತು ಯಾವುದೇ ಪೂರ್ವಾನುಮತಿ ಇಲ್ಲದೆ ಯಾರನ್ನಾದರೂ ಬಂಧಿಸಲು ಅಧಿಕಾರ ನೀಡುತ್ತದೆ. ಕಾರ್ಯಾಚರಣೆಯು ತಪ್ಪಾದ ಸಂದರ್ಭದಲ್ಲಿ ಭದ್ರತಾ ಪಡೆಗಳಿಗೆ ಇದು ಒಂದು ನಿರ್ದಿಷ್ಟ ಮಟ್ಟದ ವಿನಾಯಿತಿ ನೀಡುತ್ತದೆ.

ಮಾರ್ಚ್ 1 ರಂದು ಅಸ್ಸಾಂ ಸರ್ಕಾರವು ಫೆಬ್ರವರಿ 28 ರಿಂದ ಜಾರಿಗೆ ಬರುವಂತೆ ಇಡೀ ರಾಜ್ಯದಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆ, 1958 (AFSPA) ಅನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿತು. AFSPA ಅನ್ನು ನವೆಂಬರ್ 1990 ರಲ್ಲಿ ಅಸ್ಸಾಂನಲ್ಲಿ ವಿಧಿಸಲಾಯಿತು ಮತ್ತು ರಾಜ್ಯ ಸರ್ಕಾರದ ಪರಿಶೀಲನೆಯ ಬಳಿಕ ಪ್ರತಿ ಆರು ತಿಂಗಳಿಗೊಮ್ಮೆ ವಿಸ್ತರಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ