
ನವದೆಹಲಿ: ಕೆನಡಾ ಸರ್ಕಾರದ ಬ್ಯಾಂಕ್ ಖಾತೆಗೆ 65.9 ಕೋಟಿ ರೂ. ವರ್ಗಾಯಿಸುವಂತೆ ಭಾರತದ ಎರಡು ಖಾಸಗಿ ಬ್ಯಾಂಕ್‌ಗಳಿಗೆ ದೈಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ದೈಹಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆರ್‌ಬಿಎಲ್ ಬ್ಯಾಂಕ್‌ಗಳು 65.9 ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಬೇಕಿದೆ. ಸಂಜಯ್ ಮದನ್ ವಂಚನೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಂಜಯ್ ಮದನ್ ವಿರುದ್ಧ ಕೆನಡಾದಲ್ಲಿ 47.4 ಮಿಲಿಯನ್ ಕೆನಡಿಯನ್ ಡಾಲರ್ (ಸುಮಾರು 290 ಕೋಟಿ ರೂ.) ವಂಚನೆ ಮತ್ತು ಹಣ ವರ್ಗಾವಣೆಯ ಆರೋಪವಿದೆ. ಈ ಆರೋಪದ ವಿಚಾರಣೆ ನಡೆಸಿದ ಕೆನಡಾ ನ್ಯಾಯಾಲಯ, ಸಂಜಯ್ ಮದನ್ ತಪ್ಪಿತಸ್ಥ ಎಂದು ಏಪ್ರಿಲ್-2023ರಲ್ಲಿ ತೀರ್ಪು ನೀಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಸಂಜಯ್ ಮದನ್ ದುರುಪಯೋಗಿಪಡಿಸಿಕೊಂಡ ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡಿದ್ದು, ಮುಂಗಡವಾಗಿ 30 ಮಿಲಿಯನ್ ಡಾಲರ್ ಮತ್ತು ಇನ್ನುಳಿದ ಮೊತ್ತವನ್ನು ಮುಂದಿನ 15 ವರ್ಷಗಳಲ್ಲಿ ಪಾವತಿಸುವ ಭರವಸೆ ನೀಡಲಾಗಿದೆ ಎಂದು ವರದಿಯಾಗಿದೆ.
ವಿಡಿಯೋ ಕಾನ್ಫೆರೆನ್ಸ್ ಮೂಲಕ ದೆಹಲಿ ಹೈಕೋರ್ಟ್ ಮುಂದೆ ಹಾಜರಾದ ಸಂಜಯ್ ಮದನ್, ಕಾನೂನು ಕ್ರಮಗಳನ್ನು ಅನುಸರಿಸಿ ಎರಡು ಬ್ಯಾಂಕ್‌ಗಳಲ್ಲಿರುವ ತಮ್ಮ ಹಣವನ್ನು ಕೆನಡಾ ಸರ್ಕಾರಕ್ಕೆ ಕಳುಹಿಸಿದ್ರೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಆಲಿಸಿದ ನ್ಯಾಯಾಧೀಶ ಮನ್ಮೀತ್ ಪಿ.ಎಸ್.ಅರೋರಾ ಅವರ ಪೀಠ, ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿರುವ 38.3 ಕೋಟಿ ರೂ ಮತ್ತು ಆರ್‌ಬಿಎಲ್ ಬ್ಯಾಂಕ್‌ನಲ್ಲಿರುವ 29 ಕೋಟಿ ರೂ. ವರ್ಗಾಯಸುವಂತೆ ನಿರ್ದೇಶನ ನೀಡಿದೆ.
ಸಂಜಯ್ ಮದನ್‌ಗೆ ಸಂಬಂಧಪಟ್ಟ ಎರಡು ಬ್ಯಾಂಕ್ ಖಾತೆಗಳು ಸದ್ಯ ನಿಷ್ಕ್ರಿಯವಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಕೆವೈಸಿ ಪೂರ್ಣಗೊಳಿಸವಂತೆ ಕೆನಡಾ ಸರ್ಕಾರಕ್ಕೆ ಹಣ ವರ್ಗಾಯಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ