Twitter ಖಾತೆ ಅಮಾನತಿಗೆ ಎಲಾನ್‌ ಮಸ್ಕ್‌ರನ್ನು ವಿಚಾರಣೆಗೆ ಕರೆಸಿ ಎಂದು ಅರ್ಜಿ: ಕೋರ್ಟ್‌ನಿಂದ 25 ಸಾವಿರ ರೂ. ದಂಡ

By BK AshwinFirst Published Nov 5, 2022, 12:42 PM IST
Highlights

ತನ್ನ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ಹಿನ್ನೆಲೆ ಟ್ವಿಟ್ಟರ್‌ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಕಕ್ಷಿದಾರರನ್ನಾಗಿ ಮಾಡಲು ಯತ್ನಿಸಿದ ಮಹಿಳೆಗೆ ದೆಹಲಿ ಹೈಕೋರ್ಟ್ ಶುಕ್ರವಾರ 25,000 ರೂಪಾಯಿ ದಂಡ ವಿಧಿಸಿದೆ.  ಅಲ್ಲದೆ, ಈ ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದೂ ಕೋರ್ಟ್‌ ಹೇಳಿದೆ. 

ಟ್ವಿಟ್ಟರ್‌ (Twitter) ಖರೀದಿ ಮಾಡುವ ಬಗ್ಗೆ ಎಲಾನ್‌ ಮಸ್ಕ್‌ (Elon Musk) ಘೋಷಿಸಿದಾಗಿನಿಂದ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದು ಕಡೆ ಟ್ವಿಟ್ಟರ್‌ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ (Lay off) ನಡುವೆ, ಮತ್ತೊಂದೆಡೆ ಟ್ವಿಟ್ಟರ್‌ ಬ್ಲೂಟಿಕ್‌ ಖಾತೆಗೆ (Blue Tick Accounts) ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ಮಧ್ಯೆ, ತನ್ನ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ಕುರಿತು ಸಂಸ್ಥೆಯ ಅಧಿಪತಿಯಾಗಿರುವ ಎಲಾನ್‌ ಮಸ್ಕ್‌ ಅವರನ್ನು ವಿಚಾರಣೆಗೆ ಕರೆಸಬೇಕು ಎಂದು ಕೋರಿದ ಮಹಿಳೆಗೆ ದೆಹಲಿ ಹೈಕೋರ್ಟ್ (Delhi High Court) ದಂಡ (Fine) ವಿಧಿಸಿದೆ.

ತನ್ನ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ಹಿನ್ನೆಲೆ ಟ್ವಿಟ್ಟರ್‌ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಕಕ್ಷಿದಾರರನ್ನಾಗಿ ಮಾಡಲು ಯತ್ನಿಸಿದ ಮಹಿಳೆಗೆ ದೆಹಲಿ ಹೈಕೋರ್ಟ್ ಶುಕ್ರವಾರ 25,000 ರೂಪಾಯಿ ದಂಡ ವಿಧಿಸಿದೆ.  ಅಲ್ಲದೆ, ಈ ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ. ಪ್ರಾಧಿಕಾರವು ಪ್ರತಿನಿಧಿಸುತ್ತದೆ ಮತ್ತು ಆದ್ದರಿಂದ, ಈ ಅರ್ಜಿಯನ್ನು ಮುಂದುವರಿಸುವ ಅಗತ್ಯವಿಲ್ಲ’’ ಎಂದೂ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಅರ್ಜಿದಾರರಾದ ಡಿಂಪಲ್ ಕೌಲ್ ಸಲ್ಲಿಸಿದ ಮನವಿಯನ್ನು ವಜಾಗೊಳಿಸುವ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಅರ್ಜಿ ವಜಾಗೊಳಿಸುವ ಜತೆಗೆ ಕೋರ್ಟ್‌ ಮಹಿಳೆಗೆ ದಂಡವನ್ನೂ ವಿಧಿಸಿದೆ. 

ಇದನ್ನು ಓದಿ: Twitterನಿಂದ 8 ತಿಂಗಳ ಗರ್ಭಿಣಿ ವಜಾ: ಮಹಿಳೆಯ ಟ್ವೀಟ್‌ ವೈರಲ್‌

ಟ್ವಿಟ್ಟರ್ ಅನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಜನ್ ಪೂವಯ್ಯ ಅವರು ಇತ್ತೀಚೆಗೆ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮಾಲೀಕರಾಗಿ ಅಧಿಕಾರ ವಹಸಿಕೊಂಡ ಎಲಾನ್‌ ಮಸ್ಕ್‌ ವಿರುದ್ಧ ಆರೋಪಿಸುವುದನ್ನು ವಿರೋಧಿಸಿದರು. ಆದರೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಾಘವ್ ಅವಸ್ಥಿ, ಟ್ವಿಟ್ಟರ್‌ನ  ಏಕೈಕ ನಿರ್ದೇಶಕರಾದ ಎಲಾನ್‌ ಮಸ್ಕ್, ಆ ಕಂಪನಿಯ ಷೇರುಗಳನ್ನು ಸಹ ಹೊಂದಿದ್ದಾರೆ ಎಂದು ವಾದ ಮಾಡಿದ್ದರು. 

ಆರಂಭದಲ್ಲಿ, ನ್ಯಾಯಾಲಯವು "ನಮಗೂ ಮನರಂಜನೆ ಬೇಕು" ಎಂದು ಹೇಳಿತು ಮತ್ತು ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ವಿಚಾರಣೆಗೆ ಗಂಭೀರವಾಗಿ ಪರಿಗಣಿಸಿದ್ದೀರಾ ಎಂದು ಕೇಳಿದರು. ಇದಕ್ಕೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಾಘವ್ ಅವಸ್ಥಿ ಅವರು, ಅರ್ಜಿಯನ್ನು ಹಾಕುವಂತೆ ತನಗೆ ಸೂಚನೆ ನೀಡಲಾಗಿದೆ ಎಂದರು.

ಇನ್ನು, ಎಲಾನ್‌ ಮಸ್ಕ್ ಅವರು ನಿರ್ದೇಶಕರು ಮಾತ್ರವಲ್ಲದೆ ಟ್ವಿಟ್ಟರ್‌ನಲ್ಲಿ ಗಣನೀಯ ಷೇರುಗಳನ್ನು ಹೊಂದಿದ್ದಾರೆ ಮತ್ತು ಈ ವಿಷಯದಲ್ಲಿ ಅಗತ್ಯವಾದ ಸಾಕ್ಷಿಯಾಗಿದ್ದಾರೆ (ಅಥವಾ ಪಾರ್ಟಿ ಆಗಿದ್ದಾರೆ) ಎಂದು ಅವರು ಹೇಳಿದರು. ಹಾಗೂ, ವಾಕ್ ಸ್ವಾತಂತ್ರ್ಯಕ್ಕೆ ವಿಭಿನ್ನವಾದ ವಿಧಾನವನ್ನು ಹೊಂದಿದ್ದಾರೆ ಮತ್ತು ಆದ್ದರಿಂದ ಅವರ ಅಭಿಪ್ರಾಯಗಳನ್ನು ಕೇಳಲು ಮುಖ್ಯವಾಗಿದೆ ಎಂದೂ ಮಹಿಳೆ ಸಲ್ಲಿಸಿದ್ದ ಅರ್ಜಿಯಲ್ಲಿ ವಾದ ಮಾಡಲಾಗಿತ್ತು. 

ಇದನ್ನೂ ಓದಿ: Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು ಅಧಿಕಾರ ವಹಿಸಿಕೊಂಡ ನಂತರವೂ ಟ್ವಿಟ್ಟರ್‌ ಷೇರುಗಳನ್ನು ಟ್ರೇಡ್‌ ಮಾಡಡಿಲ್ಲ ಮತ್ತು ಅವರ ವಾಕ್‌ ಸ್ವಾತಂತ್ರ್ಯ ತುಂಬಾ ಭಿನ್ನವಾಗಿದೆ ಎಂದೂ ಮನವಿಯಲ್ಲಿ ತಿಳಿಸಲಾಗಿತ್ತು..“...27.10.2022 ರಂದು, Twitter Inc. ಅನ್ನು ಶ್ರೀ ಎಲಾನ್ ಮಸ್ಕ್ ಅವರಿಗೆ ವರ್ಗಾಯಿಸಲಾಗಿದೆ. ಈಗಿನಂತೆ, ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಅದೇ ಷೇರುಗಳನ್ನು ಸಹ ಟ್ರೇಡಿಂಗ್‌ ಮಾಡಲಾಗುತ್ತಿಲ್ಲ’’ ಎಂದು ಮಹಿಳೆ ಸಲ್ಲಿಸಿದ್ದ ಅರ್ಜಿ ಹೇಳುತ್ತದೆ.

ಯಾವುದೇ ಸೂಚನೆ ನೀಡದೆ ತನ್ನ ಖಾತೆಯನ್ನು ಅಮಾನತುಗೊಳಿಸಲಾಗಿದೆ ಮತ್ತು ತನ್ನ ವಾಕ್ ಸ್ವಾತಂತ್ರ್ಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಆರೋಪಿಸಿ ಮಹಿಳೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್‌ ಮಸ್ಕ್‌ ಘೋಷಣೆ

 

click me!