ಮಾಸ್ಕ್ ಧರಿಸದೇ ಇದ್ದರೆ ವಿಮಾನದಿಂದ ಕೆಳಗಿಳಿಸಿ!

By Suvarna NewsFirst Published Jun 4, 2022, 7:35 AM IST
Highlights

* ಕೋವಿಡ್‌ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

* ವಿಮಾನ, ಏರ್‌ಪೋರ್ಚ್‌ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದರೆ ದಂಡ

* ಮಾಸ್ಕ್ , ಸ್ಯಾನಿಟೈಸರ್‌ ಬಳಸದಿದ್ದರೆ ನೋ-ಫ್ಲೈ ಲಿಸ್ಟ್‌ಗೆ ಸೇರ್ಪಡೆ

* ಕೋವಿಡ್‌ ತಡೆಗೆ ದೆಹಲಿ ಹೈಕೋರ್ಚ್‌ ಮಹತ್ವ ಕ್ರಮ

ನವದೆಹಲಿ(ಜೂ.04) ದೇಶದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೇ ಅಥವಾ ಕೈಯನ್ನು ಸ್ಯಾನಿಟೈಸ್‌ ಮಾಡಿಕೊಳ್ಳದೇ ಕೋವಿಡ್‌ ಮಾರ್ಗದರ್ಶಿಗಳ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಕೋವಿಡ್‌ ಮಾರ್ಗದರ್ಶಿಗಳನ್ನು ಉಲ್ಲಂಘಿಸುವವರ ಮೇಲೆ ದಂಡವನ್ನು ವಿಧಿಸಬೇಕು. ಅವರನ್ನು ನೋ-ಫ್ಲೈ ಲಿಸ್ಟ್‌ನಲ್ಲಿ (ಹಾರಾಟ ನಿರ್ಬಂಧ ಪಟ್ಟಿ) ಸೇರಿಸಬೇಕು. ವಿಮಾನ ನಿಲ್ದಾಣ ಅಥವಾ ವಿಮಾನದೊಳಗೆ ಪ್ರಯಾಣಿಕರು ಮಾಸ್‌್ಕ ಧರಿಸದೇ ಇದ್ದಲ್ಲಿ ಅವರನ್ನು ದೈಹಿಕವಾಗಿ ಹೊರಹಾಕಿ. ಕೋವಿಡ್‌ ಹರಡುವಿಕೆ ತಡೆಗಟ್ಟಲು ನಿಯಮಗಳ ಪಾಲನೆ ಅತ್ಯಂತ ಅಗತ್ಯವಾದದ್ದು ಎಂಬುದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲು ವಿಮಾನಯಾನ ನಿಯಂತ್ರಕ ಡಿಜಿಸಿಎಗೆ ನಿರ್ದೇಶಿಸಿದೆ.

ನ್ಯಾಯಾಧೀಶರು ಸ್ಥಳೀಯ ವಿಮಾನದಲ್ಲಿ ಪ್ರಯಾಣ ನಡೆಸುತ್ತಿದ್ದಾಗ, ಇನ್ನಿತರ ಪ್ರಯಾಣಿಕರು ವಿಮಾನ ಹಾಗೂ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದನ್ನು ಗಮನಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸೋನಿಯಾ, ವೇಣು ಬಳಿಕ ಪ್ರಿಯಾಂಕಾಗೂ ಕೋವಿಡ್‌ ಸೋಂಕು

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕೋವಿಡ್‌ ದೃಢಪಟ್ಟಬೆನ್ನಲ್ಲೇ, ಸೋನಿಯಾರ ಪುತ್ರಿ ಪ್ರಿಯಾಂಕಾ ವಾದ್ರಾಗೂ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಪ್ರಿಯಾಂಕಾ ‘ಕೊರೋನಾದ ಸಾಮಾನ್ಯ ಲಕ್ಷಣಗಳು ಕಂಡು ಬಂದಿದ್ದರಿಂದ ಕ್ವಾರಂಟಿನನಲ್ಲಿದ್ದೇನೆ, ನನ್ನ ಸಂಪರ್ಕಕ್ಕೊಳಗಾದವರು ಮುಂಜಾಗ್ರತಾ ಕ್ರಮ ಕೈಗೊಳ್ಳಿ’ ಎಂದು ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ರಾಜಸ್ಥಾನದಲ್ಲಿ ಆಯೋಜನೆಗೊಂಡಿದ್ದ ಪಕ್ಷದ ಚಿಂತನಾ ಶಿಬಿರದಲ್ಲಿ ಭಾಗಿಯಾಗಿದ್ದರು.

click me!