
ನವದೆಹಲಿ(ಮಾ.29): ಅಂತರ್ ಧರ್ಮೀಯ ಮತ್ತು ಅಂತರ್ಜಾತೀಯ ದಂಪತಿಗಳನ್ನು ಬೆದರಿಕೆ, ದೌರ್ಜನ್ಯಗಳಿಂದ ರಕ್ಷಿಸುವ ಉದ್ದೇಶಿದಿಂದ ದೆಹಲಿ ಸರ್ಕಾರ ಸುರಕ್ಷಿತ ವಸತಿ ಸೌಲಭ್ಯ ಮತ್ತು ಸಹಾಯವಾಣಿಯನ್ನು ಆರಂಭಿಸಿದೆ. ಹಾಗೂ ಇಂಥ ಪ್ರಕರಣಗಳ ವಿಚಾರಣೆಗೆಂದೇ ಉಪ ಪೊಲೀಸ್ ಆಯುಕ್ತರ ಮೇಲ್ವೀಚಾರಣೆಯಡಿಯಲ್ಲಿ ಕಾರ‍್ಯನಿರ್ವಹಿಸರುವ ವಿಶೇಷ ಕಾರಾಗೃಹಗಳ ಸ್ಥಾಪನೆಗೆ ನಿರ್ದೇಶನ ನೀಡಿದೆ.
ಇಂಥ ಪ್ರಕರಣಗಳಿಗೆಂದೇ ಕೇಜ್ರಿವಾಲ್ ನೇತೃತ್ವ ಎಎಪಿ ಸರ್ಕಾರ ನೂತನ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಡರ್ (ಎಸ್‌ಒಪಿ) ಜಾರಿ ಮಾಡಿದ್ದು, ಆ ಪ್ರಕಾರ ಕುಟುಂಬಸ್ಥರು ಮತ್ತು ಸ್ಥಳೀಯ ಸಮುದಾಯಗಳ ವಿರೋಧ ಇರುವ ದಂಪತಿಗಳಿಗೆ ಸುರಕ್ಷಿತ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಹಾಗೆಯೇ ದೆಹಲಿಯಲ್ಲಿ ಈಗಾಗಲೇ ಲಭ್ಯವಿರುವ 181 ಟೋಲ್ ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ 24 ಗಂಟೆಯೂ ಅಂತರ್ ಧರ್ಮಿಯ ಮತ್ತು ಅಂತರ್ಜಾತೀಯ ದಂಪತಿಗಳ ರಕ್ಷಣೆಗೆ ಸಿದ್ಧವಾಗಿರುತ್ತದೆ ಮತ್ತು ಅಗತ್ಯ ನೆರವನ್ನು ನೀಡುತ್ತದೆ ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ