ಭಾರತೀಯ ವಾಯುಪಡೆಗೆ ಶೀಘ್ರ ಇನ್ನೂ 10 ರಫೇಲ್‌!

By Kannadaprabha NewsFirst Published Mar 29, 2021, 8:29 AM IST
Highlights

ಭಾರತೀಯ ವಾಯುಪಡೆಗೆ ಶೀಘ್ರ ಇನ್ನೂ 10 ರಫೇಲ್‌| ಏಪ್ರಿಲ್‌ ಅಂತ್ಯಕ್ಕೆ ಭಾರತದ ಬಳಿ ಒಟ್ಟು 21 ರಫೇಲ್‌ ಯುದ್ಧ ವಿಮಾನ

ನವದೆಹಲಿ(ಮಾ.29): ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಅಭಿವೃದ್ಧಿಪಡಿಸಿರುವ ಇನ್ನೂ 10 ರಫೇಲ್‌ ಯುದ್ಧ ವಿಮಾನಗಳು ಶೀಘ್ರವೇ ಭಾರತೀಯ ವಾಯುಪಡೆಯನ್ನು ಸೇರಿಕೊಳ್ಳಲಿವೆ. ಇದರೊಂದಿಗೆ ಭಾರತೀಯ ವಾಯುಪಡೆಯ ಸಾಮರ್ಥ್ಯ ಇನ್ನಷ್ಟುಹೆಚ್ಚಲಿದೆ. ಈಗಾಗಲೇ ಭಾರತೀಯ ವಾಯುಪಡೆಯಲ್ಲಿ 11 ರಫೇಲ್‌ ಯುದ್ಧ ವಿಮಾನಗಳಿವೆ.

ವಾಯುಪಡೆಯ ಮೂಲಗಳ ಪ್ರಕಾರ ಮುಂದಿನ 2-3 ದಿನದಲ್ಲಿ 3 ರಫೇಲ್‌ ವಿಮಾನ ಫ್ರಾನ್ಸ್‌ನಿಂದ ನೇರವಾಗಿ ತಡೆರಹಿತ ಹಾರಾಟದ ಮೂಲದ ಭಾರತಕ್ಕೆ ಬರಲಿದೆ. ಈ ವಿಮಾನಗಳಿಗೆ ಮಿತ್ರ ರಾಷ್ಟ್ರವೊಂದು ಆಗಸದಲ್ಲೇ ಇಂಧನ ಭರ್ತಿ ಮಾಡಿಕೊಡಲಿದೆ. ಉಳಿದ 7 ವಿಮಾನಗಳು ಏಪ್ರಿಲ್‌ ತಿಂಗಳ ಕೊನೆಯ ಭಾಗಕ್ಕೆ ಭಾರತಕ್ಕೆ ಆಗಮಿಸಲಿವೆ. ಹೊಸ ವಿಮಾನಗಳ ಆಗಮನದೊಂದಿಗೆ ರಫೇಲ್‌ ಯುದ್ಧ ವಿಮಾನಗಳ ಇನ್ನೊಂದು ಸ್ವಾ$್ಕಡ್ರನ್‌ ರಚನೆ ಸಾಧ್ಯವಾಗಲಿದೆ. ಈಗಾಗಲೇ ರಫೇಲ್‌ ವಿಮಾನಗಳನ್ನು ಒಳಗೊಂಡ ಮೊದಲ ಸ್ವಾ$್ಕಡ್ರನ್‌ ಅಂಬಾಲದಲ್ಲಿ ಕಾರ್ಯಾರಂಭ ಮಾಡಿದೆ.

2016ರಲ್ಲಿ ಭಾರತ ಸರ್ಕಾರ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಡಬಲ್‌ ಎಂಜಿನ್‌ ಹೊಂದಿರುವ ರಫೇಲ ಯುದ್ಧ ವಿಮಾನಗಳು ಯಾವುದೇ ಸ್ಥಿತಿಯಲ್ಲೂ ಅತ್ಯಂತ ನಿಖರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ.

click me!