
ಇವತ್ತು ಏನಿದ್ದರೂ ಡಿಜಿಟಲ್ ಯುಗ! ನಾವು ನೀವು ಬಳಸುವ ಸೋಶಿಯಲ್ ಮೀಡಿಯಾ ಕೇವಲ ಮನರಂಜನೆಯ ವೇದಿಕೆಯಾಗಿ ಉಳಿದಿಲ್ಲ. ಆದಾಯ ಗಳಿಕೆಗೂ ಇದೇ ಹೆದ್ದಾರಿ ಆಗಿದೆ.. ನಮ್ಮಲ್ಲಿರುವ ಟ್ಯಾಲೆಂಟ್ ಅನ್ನು ಸರಿಯಾಗಿ ಬಳಸಿಕೊಂಡರೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬಹುದು. ಹೇಗೆ ಹೇಳೋದಿಕ್ಕೆ ಈ ಸ್ಟೋರಿಯ ಯುವತಿಯೇ ಉದಾಹರಣೆ.
ಹೆಸರು ಉಪಾಸನಾ. ಮೂಲ ದೆಹಲಿ. 23 ವರ್ಷದ ಈ ಹೆಣ್ಣು ಮಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಆಗ್ತಿದ್ದಾಳೆ. ಕಾರಣ ಆಕೆ ಮಾಡಿದ ಒಂದು ಸಾಹಸ. 60 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಉಪಾಸನಾಗೆ ಇದ್ದಕ್ಕಿದ್ದಂತೆ ಕೆಲಸದ ಮೇಲೆ ಆಸಕ್ತಿ ಹೋಗಿ ಬಿಡುತ್ತದೆ. ಹೇಗಾದರೂ ಮಾಡಿ ಬೇರೆ ಏನಾದರೂ ಮಾಡಬೇಕು ಎಂಬ ತುಡಿತ ಅವರದ್ದಾಗಿರುತ್ತದೆ..
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದ ಇವರು, 14 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಹಾಗಾಗಿ ಅವರು ಮನಸ್ಸು ಹೊರಳಿರೋದು ಕಂಟೆಂಟ್ ಕ್ರಿಯೇಟಿಂಗ್. ತಮ್ಮ ಜಾಬ್‌ಗೆ ಗುಡ್ ಬೈ ಹೇಳಿದ ಉಪಾಸನಾ, ಇಂದು ಲಕ್ಷಕ್ಕೂ ಅಧಿಕ ಹಣವನ್ನು ಸಂಪಾದನೆ ಮಾಡಿದ್ದಾಳೆ. ಕಾರ್ಪೊರೆಟ್ ಜಗತ್ತಿನಲ್ಲಿ 60 ಸಾವಿರ ಸಂಬಳ ಪಡೆಯುತ್ತಿದ್ದ ಯುವತಿ ಇಂದು ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾರೆ.
ಉಪಾಸನಾ ದಿನೇ ದಿನೇ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆಯುತ್ತ ಹೋದರು. ಇದೀಗ ಕಳೆದ ಸೆಪ್ಟೆಂಬರ್‌ನಲ್ಲಿ ಅವರ ಗಳಿಕೆ ಭಾರೀ ಏರಿಕೆ ಕಂಡಿದೆ. ಕಳೆದ ಒಂದೂವರೆ ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ನೀಡುತ್ತಿರುವ ಇವರು, ಇಂದು ದೊಡ್ಡ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಕಳೆದ ಸೆಪ್ಟೆಂಬರ್‍ನಲ್ಲಿ ತಾನು ಎಷ್ಟು ಹಣ ಗಳಿಸಿದೆ ಅನ್ನೋದನ್ನು ಅವರು ವಿವರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿರುವ ಮಾಹಿತಿಯಂತೆ.. ಈ ಅವಧಿಯಲ್ಲಿ ಅವರ ಒಟ್ಟು ಆರು ಬ್ರಾಂಡ್ ಸಹಯೋಗಗಳು ದೊರೆತಿವೆ. ಐದು ಡೀಲ್‌ಗಳು ತಮ್ಮದೇ ಆದ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲು ಅವಕಾಶ ಪಡೆದುಕೊಂಡಿದ್ದಾರೆ. ಒಂದು ಡೀಲ್ ಬಳಕೆದಾರರು ರಚಿಸಿದ ವಿಷಯಕ್ಕಾಗಿ.. ಅಂದರೆ ಅವರು ಬ್ರ್ಯಾಂಡ್‌ಗಳಿಗಾಗಿ ವೀಡಿಯೊ ಅಥವಾ ಫೋಟೋವನ್ನು ರಚಿಸಿದ್ದಾರೆ. ಈ ಯುಜಿಸಿ ಡೀಲ್‌ನಿಂದ ಅವರು ರೂ. 15,000 ಗಳಿಸಿದರೆ, ಉಳಿದ ಐದು ಬ್ರಾಂಡ್ ಡೀಲ್‌ಗಳು ಅವರಿಗೆ ಒಟ್ಟು ರೂ. 97,000 ಸಾವಿರ ರೂಪಾಯಿ ಗಳಿಸಿದ್ದಾರೆ. ಆರು ಬ್ರಾಂಡ್‌ಗಳಿಂದ ಅವರು ಒಟ್ಟು 1.12 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾರೆ.
ಉಪಾಸನಾ ಅವರ ಯಶಸ್ಸು.. ಕಡಿಮೆ ಸಂಖ್ಯೆಯ ಅನುಯಾಯಿಗಳಿಂದ ನಿರುತ್ಸಾಹಗೊಳ್ಳುವ ಯುವಜನರಿಗೆ ಒಂದು ಉದಾಹರಣೆ ಅಷ್ಟೇ. ಬ್ರ್ಯಾಂಡ್‌ಗಳು ಯಾವಾಗಲೂ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹುಡುಕುವುದಿಲ್ಲ. ಕಂಟೆಂಟ್ ಕ್ರಿಯೇಟರ್ ತಮ್ಮ ವಸ್ತುವನ್ನು ಹೇಗೆ ಪ್ರಮೋಟ್ ಮಾಡ್ತಾರೆ ಅನ್ನೋದ್ರ ಮೇಲೆ ಹೆಚ್ಚು ಗಮನ ನೀಡ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ