ದಿಲ್ಲಿ ಅಬಕಾರಿ ಹಗರಣ: ವೈಎಸ್ಸಾರ್‌ ಸಂಸದನ ಪುತ್ರನ ಬಂಧನ

By Kannadaprabha News  |  First Published Feb 12, 2023, 7:19 AM IST

ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ವೈಎಸ್ಸಾರ್‌ ಕಾಂಗ್ರೆಸ್‌ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ಮಾಗುಂಟ ಅವರನ್ನು ಬಂಧಿಸಲಾಗಿದೆ.


ನವದೆಹಲಿ: ದಿಲ್ಲಿ ಅಬಕಾರಿ ಹಗರಣವು ತೆಲಂಗಾಣದ ಭಾರತ್‌ ರಾಷ್ಟ್ರಸಮಿತಿ (ಬಿಆರ್‌ಎಸ್‌) ಮುಖಂಡರಿಗೆ ಮಾತ್ರವಲ್ಲ ವೈಎಸ್ಸಾರ್‌ ಕಾಂಗ್ರೆಸ್‌ ನಾಯಕರಿಗೂ ಸುತ್ತಿಕೊಂಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ವೈಎಸ್ಸಾರ್‌ ಕಾಂಗ್ರೆಸ್‌ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ಮಾಗುಂಟ ಅವರನ್ನು ಬಂಧಿಸಲಾಗಿದೆ. ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇ.ಡಿ.), ರಾಘವ ಅವರನ್ನು ಶುಕ್ರವಾರ ತಡರಾತ್ರಿ ಬಂಧಿಸಿದೆ. ಇದರೊಂದಿಗೆಎ ಬಂಧಿತರ ಸಂಖ್ಯೆ 9ಕ್ಕೇರಿದೆ.

ದಿಲ್ಲಿ ಅಬಕಾರಿ ಲೈಸೆನ್ಸ್‌ ಗಿಟ್ಟಿಸಲು ಭಾರಿ ಲಂಚಾವತಾರ ನಡೆದಿತ್ತು. ದಕ್ಷಿಣ ಭಾರತದ ಮದ್ಯ ಉದ್ಯಮಿಗಳು 'ಸೌತ್‌ ಗ್ರೂಪ್‌' ಎಂಬ ಸಮೂಹ ಸೃಷ್ಟಿಸಿಕೊಂಡು ದಿಲ್ಲಿಯಲ್ಲಿ ಬಾರ್‌ ತೆರೆಯಲು ಅಕ್ರಮ ಲೈಸೆನ್ಸ್‌ ಗಿಟ್ಟಿಸಿದ್ದರು ಎಂಬ ಆರೋಪವಿದೆ. ಇದರಲ್ಲಿ ರಾಘವ ಕೂಡ ಶಾಮೀಲಾಗಿದ್ದಾರೆ ಎಂಬ ಶಂಕೆ ಇದೆ. ಇದೇ ಹಗರಣದಲ್ಲಿ ದಿಲ್ಲಿ ಅಬಕಾರಿ ಸಚಿವ ಮನೀಶ್‌ ಸಿಸೋಡಿಯಾ ಕೂಡ ಆರೋಪಿ.

Tap to resize

Latest Videos

Delhi Liquor Policy Case: ED ರಿಮಾಂಡ್‌ ನೋಟ್‌ನಲ್ಲಿ ಕೆಸಿಆರ್ ಪುತ್ರಿ ಕವಿತಾ ಹೆಸರು!

ಅಬಕಾರಿ ಹಗರಣ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಿಎ ಅರೆಸ್ಟ್!

click me!