ದಿಲ್ಲಿ ವಿಧಾನಸಭೆ ಚುನಾವಣೆ : ಆಪ್‌-ಬಿಜೆಪಿ ನೇರ ಸ್ಪರ್ಧೆ

By Kannadaprabha News  |  First Published Feb 8, 2020, 9:17 AM IST

ದಿಲ್ಲಿಯ 70 ಸದಸ್ಯಬಲದ ವಿಧಾನಸಭೆಗೆ ಒಂದು ಹಂತದ ಚುನಾವಣೆ ನಡೆಯುತ್ತಿದ್ದು ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. 


 ನವದೆಹಲಿ [ಫೆ.08]: ದೇಶವೇ ಕಾತರದಿಂದ ಎದುರು ನೋಡುತ್ತಿರುವ ದಿಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ.  ಏಕಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ದಿಲ್ಲಿಯ 70 ಸದಸ್ಯಬಲದ ವಿಧಾನಸಭೆಯಲ್ಲಿ ಈಗ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ (ಆಪ್‌) ಅಧಿಕಾರದಲ್ಲಿದೆ. ಆಪ್‌ ಮಣಿಸಲು ಬಿಜೆಪಿ ಹರಸಾಹಸ ನಡೆಸುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷ ಇಲ್ಲಿ ಮಂಕಾದಂತೆ ಕಂಡುಬರುತ್ತಿದೆ. ಅನೇಕ ಚುನಾವಣಾಪೂರ್ವ ಸಮೀಕ್ಷೆಗಳು ಆಪ್‌ ಪುನಃ ಗೆಲ್ಲಲಿದೆ ಎಂದು ಹೇಳುತ್ತಿವೆ. ಇದೇ ವೇಳೆ,  ಇಂದು ಸಂಜೆ 6 ಗಂಟೆಗೆ ಚುನಾವಣೆ ಮುಗಿದ ನಂತರ ಎಕ್ಸಿಟ್‌ ಪೋಲ್‌ಗಳು ಏನು ಹೇಳುತ್ತವೆ ಎಂಬುದು ಕುತೂಹಲಕಾರಿಯಾಗಿದೆ.

Latest Videos

undefined

70 ಸ್ಥಾನಗಳಿಗೆ ಒಟ್ಟು 672 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. 1.47 ಕೋಟಿ ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ಚುನಾವಣಾ ಭದ್ರತೆಗಾಗಿ 40 ಸಾವಿರ ಪೊಲೀಸ್‌ ಸಿಬ್ಬಂದಿ, 190 ಸಿಎಪಿಎಫ್‌ ಸಿಬ್ಬಂದಿ ಹಾಗೂ 19 ಸಾವಿರ ಹೋಮ್‌ಗಾರ್ಡ್‌ಗಳು ನಿಯೋಜನೆಯಾಗಿದ್ದಾರೆ.

ಮನೆಯಿಂದ ಸಂಸತ್ತಿಗೆ ಸುರಂಗ: ಮೋದಿಗಾಗಿ ಮಾಡಿದ ಪ್ಲ್ಯಾನ್ ಬಹಿರಂಗ!...

ಜೊತೆಗೆ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯೊಂದರಲ್ಲಿ ಮತದಾರರನ್ನು ಗುರುತಿಸಲು ಫೇಸ್‌ ರೆಕಗ್ನೀಷನ್‌ ತಂತ್ರಜ್ಞಾನ ಬಳಸಲಾಗುತ್ತಿದೆ. ದೆಹಲಿಯ ಕೆಲ ಸೂಕ್ಷ್ಮ ಮತಗಟ್ಟೆಗಳ ಪೈಕಿ ಕೆಲವೊಂದರಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ಇತ್ತೀಚೆಗೆ ಆಂಧ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕೆಲ ಮತಗಟ್ಟೆಗಳಲ್ಲಿ ಈ ತಂತ್ರಜ್ಞಾನ ಬಳಸಲಾಗಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಬಳಕೆ ಮಾಡುತ್ತಿರುವುದು ಇದೇ ಮೊದಲು.

ಚುನಾವಣಾ ಪ್ರಚಾರದ ವೇಳೆ ಶಾಹೀನ್‌ಬಾಗ್‌ನಲ್ಲಿ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ, ದಿಲ್ಲಿ ಮಾಲಿನ್ಯ, ಆಪ್‌ ಕೈಗೊಂಡ ದಿಲ್ಲಿ ಅಭಿವೃದ್ಧಿ ಕಾಮಗಾರಿ, ದಿಲ್ಲಿ ಅಭಿವೃದ್ಧಿಗೆ ಮೋದಿ ಸರ್ಕಾರ ನೀಡಿದ ಕೊಡುಗೆ- ಇತ್ಯಾದಿಗಳು ಪ್ರಮುಖವಾಗಿ ಚರ್ಚೆಗೆ ಒಳಗಾದವು. ಅನೇಕ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆಗಳೂ ಹೊರಬಿದ್ದವು.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!