
ನವದೆಹಲಿ (ಅ.12) ದೀಪಾವಳಿ ಹಬ್ಬದ ತಯಾರಿಗಳು ಆರಂಭಗೊಳ್ಳುತ್ತಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಇತ್ತ ನಗರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿರುವವರ ಕುಟುಂಬದ ಜೊತೆ ಹಬ್ಬ ಆಚರಿಸಲು ಊರಿಗೆ ಮರಳುತ್ತಿದ್ದಾರೆ. ಹಬ್ಬದ ಸರ್ಕಾರಿ ರಜೆ ಹೊರತುಪಡಿಸಿ ಸಿಕ್ ಲೀವ್, ಕ್ಯಾಶ್ಯುವಲ್ ಲೀವ್ ಸೇರಿದಂತೆ ಎಲ್ಲಾ ರಜೆಗಳನ್ನು ಲೆಕ್ಕ ಹಾಕಿ ಅರ್ಜಿ ಹಾಕುತ್ತಿದ್ದಾರೆ. ಮತ್ತೆ ಕೆಲವರು ರಜೆ ಸಿಗದೆ ಪರದಾಡುತ್ತಿದ್ದಾರೆ. ಇನ್ನು ಕೆಲ ಕಂಪನಿಗಳು ದೀಪಾವಳಿ ಹಬ್ಬಕ್ಕೆ ಉದ್ಯೋಗಿಗಳಿಗೆ ಸ್ವೀಟ್ ಬಾಕ್ಸ್ ಉಡುಗೊರೆ ನೀಡುತ್ತದೆ. ಆದರೆ ದೆಹಲಿಯ ಕಂಪನಿಯೊಂದು ತನ್ನ ಉದ್ಯೋಗಿಳಿಗೆ ದೀಪಾವಳಿ ಹಬ್ಬಕ್ಕೆ 9 ದಿನ ರಜೆ ಘೋಷಿಸಿದೆ.
ಎಲೈಟ್ ಮಾರ್ಕ್ಯೂ ಅನ್ನೋ ಕಂಪನಿ ಇದೀಗ ತನ್ನ ಉದ್ಯೋಗಿಗಳಿಗೆ ದೀಪಾವಳಿ ಹಬ್ಬಕ್ಕೆ ಬರೋಬ್ಬರಿ 9 ದಿನ ರಜೆ ನೀಡಿ ಎಲ್ಲರ ಹೃದಯ ಗೆದ್ದಿದೆ. ಎಂದಿನಂತೆ ಕಚೇರಿಗೆ ಬಂದ ಉದ್ಯೋಗಿಗಳಿಗೆ ಸಿಇಒ ರಜತ್ ಗ್ರೋವರ್ ಇಮೇಲ್ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದರು. ಇಮೇಲ್ ಓದಿದ ಉದ್ಯೋಗಿಗಳ ಸಂಭ್ರಮ ಇಮ್ಮಡಿಯಾಗಿದೆ. ಇಮೇಲ್ ಮೂಲಕ ರಜತ್ ಗ್ರೋವರ್, ದೀಪಾವಳಿಗೆ 9 ದಿನ ರಜೆ ಘೋಷಿಸಿದ್ದಾರೆ. ಕುಟುಂಬದ ಜೊತೆ ಹಬ್ಬ ಆಚರಿಸಿ ಎಂದು ಸೂಚಿಸಿದ್ದಾರೆ.
ಸಿಇಒ ದೀಪಾವಳಿ ಹಬ್ಬಕ್ಕೆ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ 9 ದಿನ ರಜೆ ನೀಡುವುದಾಗಿ ಇಮೇಲ್ ಮೂಲಕ ಘೋಷಿಸಿದ್ದಾರೆ. ಇದೇ ಇಮೇಲ್‌ನಲ್ಲಿ ಕೆಲ ಅಂಶಗಳನ್ನು ರಜತ್ ಗ್ರೋವರ್ ಉಲ್ಲೇಖಿಸಿದ್ದಾರೆ. 9 ದಿನದ ದೀಪಾವಳಿ ರಜೆಯಲ್ಲಿ ಕುಟುಂಬದ ಜೊತೆ ಸಂತೋಷವಾಗಿ ಕಳೆಯಿರಿ, ಹಾಸ್ಯ, ನಗು, ಮಾತುಕತೆ, ಹರಟೆ ಮೂಲಕ ನಿಮ್ಮ ದಿನವನ್ನು ಸಂತೋಷವಾಗಿಸಿ, ಸಂಭ್ರಮದಿಂದ ಹಬ್ಬ ಆಚರಿಸಿ. ನಿಮಗೆ ಬೇಕಾದಷ್ಟು ಸಿಹಿ ತಿನ್ನಿ, ಹಬ್ಬದ ಊಟ ಮಾಡಿ, ಅಪ್ಪಿ ತಪ್ಪಿಯೂ ಕಚೇರಿಯ ಇಮೇಲ್ ಓಪನ್ ಮಾಡಬೇಡಿ,ಜೋಮ್ಯಾಟೋ, ಅಮೇಜಾನ್ ಸೇರಿದಂತೆ ಇತರ ಇಮೇಲ್ ಹೊರತುಪಡಿಸಿ ಇತರ ಇಮೇಲ್ ನೋಡಬೇಡಿ. ಕಚೇರಿ ಕಡೆ ತಲೆ ಹಾಕಬೇಡಿ ಎಂದು ರಜತ್ ಗ್ರೋವರ್ ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.
ಎಲೈಟ್ ಮಾರ್ಕ್ಯೂ ಕಂಪನಿ ಅಕ್ಟೋಬರ್ 18 ರಿಂದ 26ರ ವರೆಗೆ ರಜೆ ನೀಡಲಾಗಿದೆ. ಇದು ಸಂಪೂರ್ಣ ದೀಪಾವಳಿ ರಜೆ. ಈ ರಜೆಯಿಂದ ಇತರರ ರಜೆಗಳಿಗೆ ಯಾವುದೇ ಕಡಿತವಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. 9 ದಿನ ಕುಟುಬದ ಜೊತೆ, ಆಪ್ತರ ಜೊತೆ ಸಮಯ ಕಳೆಯಿರಿ. ರಜೆ ಬಳಿಕ ಅದೇ ಖುಷಿಯಿಂದ ಕಚೇರಿಯಲ್ಲಿ ಮತ್ತೆ ಅದೇ ಉತ್ಸಾಹದಿಂದ ಕೆಲಸ ಮಾಡೋಣ ಎಂದು ಬಾಸ್ ಇಮೇಲ್ ಮೂಲಕ ಹೇಳಿದ್ದಾರೆ. ಸಿಹಿ ತಿನ್ನಿ, ಪಟಾಕಿ ಸಿಡಿಸಿ, ಹೊಸ ಬಟ್ಟೆ ತೊಡಿ, ಎಲ್ಲರಿಗೂ ಖುಷಿ ಹಂಚಿ ಎಂದು ಇಮೇಲ್‌ನಲ್ಲಿ ಕಂಪನಿ ಬಾಸ್ ಉದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.
ದೆಹಲಿಯ ಕಂಪನಿಯ ಈ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸ್ವೀಟ್ ಬಾಕ್ಸ್ ಕೊಟ್ಟ ಕೈತೊಳೆದುಕೊಳ್ಳುವ ನಿರ್ಧಾರದಿಂದ 9 ದಿನ ರಜೆ ಮತ್ತಷ್ಟು ಸಿಹಿಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ . ಬೋನಸ್ ಕೊಡಲು ಸಾಧ್ಯವಾಗದಿದ್ದರೂ ಈ ರೀತಿಯ ಗಿಫ್ಟ್ ಕೊಟ್ಟರೆ ಸಾಕು ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ