ದೆಹಲಿ ದೇವಸ್ಥಾನದ 40 ಲಕ್ಷ ರೂಪಾಯಿ ಕಳಶ ಮಾಯ, ಸಿಸಿಟಿವಿಯಲ್ಲಿ ಬಯಲಾಯ್ತು ರಹಸ್ಯ

Published : Oct 12, 2025, 04:21 PM IST
  jain temple

ಸಾರಾಂಶ

ದೆಹಲಿ ದೇವಸ್ಥಾನದ 40 ಲಕ್ಷ ರೂಪಾಯಿ ಕಳಶ ಮಾಯ, ಸಿಸಿಟಿವಿಯಲ್ಲಿ ಬಯಲಾಯ್ತು ರಹಸ್ಯ, ದೇಶದೆಲ್ಲೆಡೆ ದೇವಸ್ಥಾನದ ಚಿನ್ನ ಕಳ್ಳತನ ಚರ್ಚೆಗಳು ನಡೆಯುತ್ತಿದ್ದಂತೆ ದೆಹಲಿ ದೇಗುಲದ ಘಟನೆ ಇದೀಗ ಮತ್ತೆ ಹಿಂದೂ ದೇವಸ್ಥಾನಗಳ ಮೇಲಿನ ಚಿನ್ನಾಭರಣಗಳ ಸುರಕ್ಷತೆ ಕುರಿತು ಪ್ರಶ್ನೆ ಏಳುವಂತೆ ಮಾಡಿದೆ.

ನವದೆಹಲಿ (ಅ.12) ಕೇರಳದ ಶಬರಿಮಲೆಯಲ್ಲಿನ ಚಿನ್ನಾಭರಣ ಕಳವು ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಆಡಳಿತ ಮಂಡಳಿ, ಸರ್ಕಾರ ಹಾಗೂ ಅಧಿಕಾರಿಗಳು ಈ ಕಳವು ಪ್ರಕರಣದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ದೆಹಲಿಯ ಜ್ಯೋತಿನಗರದಲ್ಲಿರುವ ಜೈನ ದೇಗುಲದ ಮೇಲಿನ ಚಿನ್ನದ ಕಳಶ ಮಾಯವಾದ ಘಟನೆ ಬೆಳೆಕಿಗೆ ಬಂದಿದೆ. ಬರೋಬ್ಬರಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಳಶ ಕಳ್ಳತನವಾಗಿದೆ. ಕರ್ವಾ ಚೌತ್ ಹಬ್ಬದ ದಿನವೇ ಕಳಶ ಕಳ್ಳತನವಾಗಿದೆ.

ಸಿಸಿಟಿವಿಯಲ್ಲಿ ಕಳ್ಳತನ ಸೆರೆ

ಜೈನ ದೇಗುಲದ ಮೇಲೆ ತಾಮ್ರ ಹಾಗೂ ಚಿನ್ನದ ಮೂಲಕ ನಿರ್ಮಣ ಮಾಡಿದ್ದ ಚಿನ್ನದ ಕಳಶ ಇಡಲಾಗಿತ್ತು. ಇತ್ತ ಜೈನ ದೇಗುಲದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಕಳ್ಳತನ ದೃಶ್ಯ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 25 ರಿದ 30 ಕಿಲೋಗ್ರಾಂ ತೂಕದ ಈ ಕಳಶ ಕಳ್ಳತನವಾಗಿರುವುದು ಭಕ್ತರ ಆತಂತಕ್ಕೆ ಕಾರಣಾಗಿದೆ.

ಸಿಸಿಟಿವಿಯಲ್ಲಿ ದಾಖಲಾಗಿರುವಂತೆ ಕಳಶ ಕಳ್ಳತನ ಮಾಡಲು ಕಳ್ಳ, ಎಲೆಕ್ಟ್ರಿಕ್ ವೈಯರ್ ಸೇರಿದಂತೆ ಇತರ ವಸ್ತುಗಳನ್ನು ಆಧಾರದಲ್ಲಿ ದೇಗುಲದ ಮೇಲ್ಚಾವಣಿಗೆ ಹತ್ತಿದ್ದಾನೆ. ಬಳಿಕ ತನ್ನಲ್ಲಿರುವ ಆಯುಧಗಳನ್ನು ಬಳಸಿ ಚಿನ್ನದ ಕಳಶ ಎಗರಿಸಿದ್ದಾನೆ. ರಾತ್ರಿ ಸುಮಾರು 11.45ರ ಸುಮಾರಿಗೆ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮರು ದಿನ ಬೆಳಕ್ಕೆ ಕಳಶ ನಾಪತ್ತೆ ಪತ್ತೆ

ಮರು ದಿನ ಬೆಳಗ್ಗೆ ಸ್ಥಳೀಯರು ದೇಗುಲದಲ್ಲಿರುವ ಕಳಶ ನಾಪತ್ತೆಯಾಗಿರುವುದು ಪತ್ತೆ ಹಚ್ಚಿದ್ದಾರೆ. ಶುಕ್ರವಾರ ರಾತ್ರಿ ಜೈನ ದೇಗುಲ ಮುಚ್ಚಲಾಗುತ್ತದೆ. ಇದೇ ವೇಳೆ ಕಳ್ಳತನ ನಡೆದಿದೆ. ಸ್ಥಳೀಯರು ತಕ್ಷಣವೇ ದೇಗುಲದ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರೆ. ಸದಸ್ಯರು ಆಗಮಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳತನ ಬಯಲಾಗಿದೆ. ಹೀಗಾಗಿ ಜೈನ ದೇಗುಲದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.

ಕೆಂಪು ಕೋಟೆ ಬಳಿ ಇರುವ ದೇಗುಲದಿಂದ 1 ಕೋಟಿ ರೂಪಾಯಿ ಕಳ್ಳತನ

ದೆಹಲಿಯ ಕೆಂಪು ಕೋಟೆ ಬಳಿ ಇರುವ ದೇವಸ್ಥಾನದಿಂದ 1 ಕೋಟಿ ರೂಪಾಯಿ ಕಳ್ಳತನವಾಗಿರುವ ಘಟನೆಯೂ ನಡೆದಿದೆ. ಈ ಘಟನೆ ನಡೆದ ಒಂದು ದಿನ ಬಳಿಕ ಮತ್ತೊಂದು ಜೈನ ದೇಗುಲದಿಂದ ಕಳಶ ಕಳ್ಳತನವಾಗಿದೆ. ಎರಡೂ ಜೈನ ದೇಗುಲದಲ್ಲಿ ನಡೆದಿರುವ ಕಳ್ಳತನ ಪ್ರಕರಣದಲ್ಲಿ ಒಂದೇ ಗ್ಯಾಂಗ್ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌
ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ