ಕೇಜ್ರಿವಾಲ್‌ ಖಾತೆ ರಹಿತ ಮುಖ್ಯಮಂತ್ರಿ!

By Suvarna NewsFirst Published Feb 18, 2020, 3:37 PM IST
Highlights

ಕೇಜ್ರಿವಾಲ್‌ ಖಾತೆ ರಹಿತ ಮುಖ್ಯಮಂತ್ರಿ!| ತಮ್ಮ ಬಳಿಯ ನೀರು ಪೂರೈಕೆ ಖಾತೆ ಬಿಟ್ಟುಕೊಟ್ಟ ಸಿಎಂ: ಮೂಲಗಳು| ಸಮಗ್ರವಾಗಿ ಎಲ್ಲ ಆಡಳಿತದ ಮೇಲೆ ಕೇಜ್ರಿ ಗಮನ

ನವದೆಹಲಿ[ಫೆ.18]: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಸಚಿವ ಸಂಪುಟದ ಖಾತೆಗಳನ್ನು ಹಂಚಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಬಳಿ ಯಾವುದೇ ಖಾತೆ ಇಟ್ಟುಕೊಂಡಿಲ್ಲ. ಸಮಗ್ರವಾಗಿ ಎಲ್ಲ ಆಡಳಿತವನ್ನೂ ಗಮನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಅವಧಿಯಲ್ಲಿ ಕೇಜ್ರಿವಾಲ್‌ ಮಹತ್ವದ ನೀರು ಪೂರೈಕೆ ಖಾತೆ ಹೊಂದಿದ್ದರು. ಈಗ ಅವರು ಅದನ್ನು ತಮ್ಮ ಸಂಪುಟದ ಸಹೋದ್ಯೋಗಿ ಸತ್ಯೇಂದ್ರ ಜೈನ್‌ ಅವರಿಗೆ ನೀಡಿದ್ದಾರೆ ಎಂದು ಮೂಲಗಳು ಸೋಮವಾರ ಹೇಳಿವೆ.

ಮುಖ್ಯಮಂತ್ರಿಯಾದವರು ತಮ್ಮ ಬಳಿ ಕೆಲವು ಮಹತ್ವದ ಖಾತೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಯಾವುದೇ ಖಾತೆಯನ್ನು ಹೊಂದದೇ ಇರುವ ಮುಖ್ಯಮಂತ್ರಿ ಬಲು ಅಪರೂಪ ಎನ್ನಲಾಗಿದೆ.

ಗೋಪಾಲ್‌ ರಾಯ್‌ ಅವರಿಗೆ ಪರಿಸರ, ರಾಜೇಂದ್ರ ಪಾಲ್‌ ಗೌತಮ್‌ ಅವರಿಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಗಿರಿ ಲಭಿಸಿದೆ.

ಕೇಜ್ರಿ ಮಂತ್ರಿಗಳೆಷ್ಟು ಓದಿದ್ದಾರೆ: ದೆಹಲಿ ಜನರಷ್ಟೇ ಅವರೂ ಜಾಣರಿದ್ದಾರೆ!

ಇನ್ನುಳಿದಂತೆ ಮನೀಶ್‌ ಸಿಸೋಡಿಯಾ ಅವರು ಈ ಹಿಂದಿನಂತೆ ವಿತ್ತ, ಶಿಕ್ಷಣ ಹಾಗೂ ಇತರ ಖಾತೆ ಉಳಿಸಿಕೊಂಡಿದ್ದಾರೆ.

ಇಮ್ರಾನ್‌ ಹುಸೇನ್‌, ಕೈಲಾಶ್‌ ಗೆಹ್ಲೋಟ್‌ ಅವರು ಸಂಪುಟದ ಇತರ ಸಚಿವರು.

ಅಧಿಕಾರ ಸ್ವೀಕಾರ:

ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದ ಕೇಜ್ರಿವಾಲ್‌ ಹಾಗೂ ಅವರ ಸಂಪುಟದ ಎಲ್ಲ 6 ಸಹೋದ್ಯೋಗಿಗಳು ಸೋಮವಾರ ತಮ್ಮ ಕಚೇರಿಗಳಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.

click me!