ಅಂಬಾನಿ ಮನೆ ಪಕ್ಕದಲ್ಲಿರೋ ಈ ಪುಟಾಣಿ ಅಂಗಡಿಯ ಬಾಡಿಗೆ ಎಷ್ಟು ಗೊತ್ತಾ?

Published : Jun 09, 2024, 02:29 PM IST
ಅಂಬಾನಿ ಮನೆ ಪಕ್ಕದಲ್ಲಿರೋ ಈ ಪುಟಾಣಿ ಅಂಗಡಿಯ ಬಾಡಿಗೆ ಎಷ್ಟು ಗೊತ್ತಾ?

ಸಾರಾಂಶ

ಇದೀಗ ಸುದ್ದಿ ಆಗುತ್ತಿರೋದು ಮುಖೇಶ್ ಅಂಬಾನಿ ಮನೆಯಲ್ಲ. ಆ ದೊಡ್ಡಮನೆಯ ಪಕ್ಕದಲ್ಲಿರುವ ಪುಟಾಣಿ ಅಂಗಡಿ. ಇದು ಮುಖೇಶ್ ಅಂಬಾನಿ ಮನೆಯ ಕಾಂಪೌಂಡ್‌ಗೆ ಹೊಂದಿಕೊಂಡಿದೆ. ಆದ್ದರಿಂದ ಕಳೆದ ಕೆಲವು ದಿನಗಳಿಂದ ಚಿಕ್ಕ ಅಂಗಡಿ ಹೆಚ್ಚು ಸದ್ದು ಮಾಡುತ್ತಿದೆ. 

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Businessman Mukhesh Ambani) ಮದುವೆ ಸಂಭ್ರಮ ಇಡೀ ವಿಶ್ವದ ಗಮನವನ್ನು ಸೆಳೆಯುತ್ತಿದೆ. ಆಗರ್ಭ ಶ್ರೀಮಂತರಾಗಿರುವ ಅಂಬಾನಿ ಕುಟುಂಬ (Ambani Family) ಮುಂಬೈನಲ್ಲಿ ನೆಲೆಸಿದೆ. ಅಂಬಾನಿ ಕುಟುಂಬದ ಮನೆ (Antilia building) ಅತ್ಯಂತ ಆಕರ್ಷಕವಾಗಿದ್ದು, ಒಳಗಡೆ ಏನೆಲ್ಲಾ ಇದೆ ಎಂಬುವುದು ಬಹುತೇಕರಲ್ಲಿ ಕುತೂಹಲ ಮೂಡಿರುತ್ತದೆ. ಅಂಬಾನಿ ನಿವಾಸದ ಏರಿಯಲ್ ವ್ಯೂವ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತಿವೆ. ಆದ್ರೆ ಇದೀಗ ಸುದ್ದಿ ಆಗುತ್ತಿರೋದು ಮುಖೇಶ್ ಅಂಬಾನಿ ಮನೆಯಲ್ಲ. ಆ ದೊಡ್ಡಮನೆಯ ಪಕ್ಕದಲ್ಲಿರುವ ಪುಟಾಣಿ ಅಂಗಡಿ. ಇದು ಮುಖೇಶ್ ಅಂಬಾನಿ ಮನೆಯ ಕಾಂಪೌಂಡ್‌ಗೆ ಹೊಂದಿಕೊಂಡಿದೆ. ಆದ್ದರಿಂದ ಕಳೆದ ಕೆಲವು ದಿನಗಳಿಂದ ಚಿಕ್ಕ ಅಂಗಡಿ ಹೆಚ್ಚು ಸದ್ದು ಮಾಡುತ್ತಿದೆ. 

ಈ ಪುಟ್ಟ ಅಂಗಡಿಯ ಬಾಡಿಗೆ ಎಷ್ಟು?

ದೊಡ್ಡ ಕಟ್ಟಡದ ಮುಂದೆ ಈ ಅಂಗಡಿ ಬೆಂಕಿಪೊಟ್ಟಣ ರೀತಿಯಲ್ಲಿ ಕಾಣುತ್ತಿದೆ. ಸಾಮಾನ್ಯವಾಗಿ ಇದೊಂದು ಪೆಟ್ಟಿ ಅಂಗಡಿ ರೀತಿಯಲ್ಲಿ ಕಾಣುತ್ತದೆ. ಆದ್ರೆ ಇದರ ಮಾಸಿಕ ಬಾಡಿಗೆ ಎಷ್ಟು ಅಂತ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳು ಇಟ್ಕೊಳ್ಳೋದು ಖಂಡಿತ. ಈ ಅಂಗಡಿಯ ಬಾಡಿಗೆ ತಿಂಗಳಿಗೆ ಐದು ಲಕ್ಷ ರೂಪಾಯಿ ಎಂದು ವರದಿಯಾಗುತ್ತಿದೆ. 

ಮುಖೇಶ್, ನೀತಾ ಅಂಬಾನಿ ನಿತ್ಯದ ಡಿನ್ನರ್ ನಲ್ಲಿ ಇದೊಂದು ಐಟಂ ಮಿಸ್ ಆಗಲೇಬಾರದು, ಏನದು?

ವಿದೇಶದಲ್ಲಿಯೂ ಮನೆಗಳು 

ಮುಖೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದು, 113 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮುಖೇಶ್ ಅಂಬಾನಿ ಮುಂಬೈ ಮಾತ್ರವಲ್ಲಿ ದೇಶದ ಪ್ರಮುಖ ನಗರಗಳು ಸೇರಿದಂತೆ ವಿದೇಶದಲ್ಲಿಯೂ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಒಂದೊಂದು ಮನೆಗಳ ಬೆಲೆ ನೂರಾರು ಕೋಟಿ ರೂಪಾಯಿ ಆಗಿದೆ. ಆದ್ರೆ ಅಂಬಾನಿ ಕುಟುಂಬ ಬಹುತೇಕ ಹೆಚ್ಚು ದಿನಗಳನ್ನು ಮುಂಬೈನಲ್ಲಿ ಕಳೆಯುತ್ತಾರೆ. ಹಾಗಾಗಿ ವಿಶೇಷ ಸೌಲಭ್ಯಗಳ ಮನೆಯನ್ನು ಮುಖೇಶ್ ಅಂಬಾನಿ ನಿರ್ಮಿಸಿಕೊಂಡಿದ್ದಾರೆ. ಮುಂಬೈನ ಮನೆಗೆ ಅಂಟಿಲಿಯಾ ಎಂದು ಹೆಸರಿಡಲಾಗಿದೆ.

ಹೇಗಿದೆ ಅಂಟಿಲಿಯಾ? 

ಮುಂಬೈನ ಅಂಬಾನಿ ಕುಟುಂಬದ ಅಧಿಕೃತ ನಿವಾಸವಾಗಿರುವ ಅಂಟಿಲಿಯಾ ನಿರ್ಮಾಣಕ್ಕೆ ನಾಲ್ಕು ವರ್ಷ ತಗುಲಿದೆ. 2006 ರಿಂದ 2010ರ ನಡುವೆ ಮನೆ ಕಾಮಗಾರಿ ನಡೆದಿತ್ತು. ಈ ಮನೆ ನಿರ್ಮಾಣಕ್ಕೆ 2 ಶತಕೋಟಿ ಡಾಲರ್ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. 8 ಮ್ಯಾಗ್ನಿಟೂಡ್ ಭೂಕಂಪದ ತೀವ್ರತೆಯನ್ನು ತಡೆದುಕೊಳ್ಳುವ ಸಾಮಾರ್ಥ್ಯದಲ್ಲಿ ಈ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಮೇಲಿನ ಆರು ಮಹಡಿಗಳು ಖಾಸಗಿಯಾಗಿದ್ದು, ಇಲ್ಲಿ ಯಾರಿಗೂ ಪ್ರವೇಶವಿಲ್ಲ.  173 ಮೀಟರ್ (568 ಅಡಿ) ಎತ್ತರ, 6,070 ಚದರ ಮೀಟರ್ (65,340 ಚದರ ಅಡಿ) ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲಾಗಿದೆ. 

ಇದು ಆ್ಯಂಟಿಲಿಯಾವಲ್ಲ, ಮುಖೇಶ್ ಅಂಬಾನಿಯ ಈ ಬಂಗಲೆಯಲ್ಲಿ ಇವೆ 49 ಬೆಡ್‌ರೂಮ್ಸ್, ಆಸ್ಪತ್ರೆ...

ಕಟ್ಟಡ 27 ಮಹಡಿ, 168 ಕಾರ್ ಗ್ಯಾರೇಹ್, 9 ಹೈ ಸ್ಪೀಡ್‌ ಲಿಫ್ಡ್, 50-ಆಸನಗಳ ಥಿಯೇಟರ್‌, ಮೇಲ್ಭಾಗದಲ್ಲಿ ಸುಂದರ ತೋಟ, ಈಜುಕೊಳವನ್ನು ಈ ಮನೆ ಹೊಂದಿದೆ. ಇದರ ಜೊತೆಗೆ ಮನೆಯೊಳಗೆ ದೇವಸ್ಥಾನ, ಆಸ್ಪತ್ರೆ, ಸ್ಪಾ, ಪಬ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳನ್ನು ಅಂಬಾನಿಯವರ ಮನೆ ಹೊಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!