ಕಳೆದ ಕೆಲ ದಿನಗಳಿಂದ ವಾಯುಮಾಲಿನ್ಯದೊಂದಿಗೆ ಸೆಣಸುತ್ತಿರುವ ದೆಹಲಿಯ ಜನ ಇದೀಗ ಹೊಸ ರೀತಿಯ ಉಸಿರಾಟ ಸಂಬಂಧಿತ ಕಾಯಿಲೆಯೊಂದಕ್ಕೆ ತುತ್ತಾಗುತ್ತಿದ್ದಾರೆ. ಕಲುಷಿತ ಗಾಳಿಯ ಸೇವನೆಯಿಂದಾಗಿ ಹಲವರಲ್ಲಿ ‘ವಾಕಿಂಗ್ ನ್ಯುಮೋನಿಯಾ’ ಎಂಬ ಸಮಸ್ಯೆ ಕಾಣಿಸಿಕೊಳ್ಳತೊಡಗಿದೆ.
ನವದೆಹಲಿ (ನ.23): ಕಳೆದ ಕೆಲ ದಿನಗಳಿಂದ ವಾಯುಮಾಲಿನ್ಯದೊಂದಿಗೆ ಸೆಣಸುತ್ತಿರುವ ದೆಹಲಿಯ ಜನ ಇದೀಗ ಹೊಸ ರೀತಿಯ ಉಸಿರಾಟ ಸಂಬಂಧಿತ ಕಾಯಿಲೆಯೊಂದಕ್ಕೆ ತುತ್ತಾಗುತ್ತಿದ್ದಾರೆ. ಕಲುಷಿತ ಗಾಳಿಯ ಸೇವನೆಯಿಂದಾಗಿ ಹಲವರಲ್ಲಿ ‘ವಾಕಿಂಗ್ ನ್ಯುಮೋನಿಯಾ’ ಎಂಬ ಸಮಸ್ಯೆ ಕಾಣಿಸಿಕೊಳ್ಳತೊಡಗಿದೆ.
ಮೈಕೋಪ್ಲಾಸ್ಮಾ ನ್ಯುಮೋನಿಯಾ ಎಂಬ ಬ್ಯಾಕ್ಟೀರಿಯಾದಿಂದ ಉದ್ಭವಿಸುವ ಈ ಕಾಯಿಲೆಯ ತೀವ್ರತೆಯು ಮಾಮೂಲಿ ನ್ಯುಮೋನಿಯಾಗಿಂತ ಕಡಿಮೆಯಾಗಿದ್ದರೂ, ಇದು ಉಸಿರಾಟದಲ್ಲಿ ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ದೈಹಿಕ ಪರೀಕ್ಷೆ ಅಥವಾ ಎಕ್ಸರೇ ಮೂಲಕ ಪತ್ತೆ ಮಾಡಬಹುದು. ಸಾಮಾನ್ಯವಾಗಿ ಸ್ವಾಸ್ಥ್ಯ ಹದಗೆಟ್ಟಾಗ ಬೇಕೆನಿಸುವ ವಿಶ್ರಾಂತಿ, ವಾಕಿಂಗ್ ನ್ಯುಮೋನಿಯಾ ಪೀಡಿತರಲ್ಲಿ ಕಾಣಿಸದ ಕಾರಣ ಇದಕ್ಕೆ ಈ ಹೆಸರಿಡಲಾಗಿದೆ.ವಾಕಿಂಗ್ ನ್ಯುಮೋನಿಯಾ ಹರಡುವಿಕೆ, ಲಕ್ಷಣ:
undefined
ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಕಣಗಳೊಂದಿಗೆ ಸಂಪರ್ಕದಲ್ಲಿ ಬಂದಾಗ ವಾಕಿಂಗ್ ನ್ಯುಮೋನಿಯಾ ಹರಡುತ್ತದೆ. ಸಾಮಾನ್ಯವಾಗಿ ಜನಸಂದಣಿ ಇರುವ ಸ್ಥಳಗಳಲ್ಲಿ ಇದರ ಹರಡುವಿಕೆಯ ಪ್ರಮಾಣ ಅಧಿಕವಾಗಿರುತ್ತದೆ. ವಾಕಿಂಗ್ ನ್ಯುಮೋನಿಯಾದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಜ್ವರ, ಕೆಮ್ಮು, ಗಂಟಲು ನೋವಿನ ಲಕ್ಷಣಗಳು ಕಂಡುಬರುತ್ತವೆ. ಅಂಥವರು ಉಸಿರಾಡಲು ಕಷ್ಟ ಪಡುತ್ತಾರೆ. ಇದು 3ರಿಂದ 5 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಇರುತ್ತದೆ.
ಇಲ್ಲಿ 24 ಗಂಟೆ ಉಸಿರಾಡಿದ್ರೆ , 50 ಸಿಗರೇಟ್ ಸೇದಿರೋದಕ್ಕೆ ಸಮಯ; ಏನಾಗಿದೆ ಈ ನಗರಕ್ಕೆ?
ಕಳಪೆ ವಾಯುಗುಣಮಟ್ಟ: 3 ದಿನ ಗ್ರಾಪ್-4 ಮುಂದುವರಿಕೆಗೆ ಸುಪ್ರೀಂ ಸೂಚನೆ
ಕಳಪೆ ವಾಯುಗುಣಮಟ್ಟದಿಂದ ಉಸಿರುಗಟ್ಟುತ್ತಿರುವ ರಾಷ್ಟ್ರರಾಜಧಾನಿ ದೆಹಲಿ ಹಾಗೂ ಸುತ್ತಲಿನ ವಲಯಗಳಲ್ಲಿ ಜಾರಿಗೊಳಿಸಲಾಗಿರುವ 4ನೇ ಹಂತದ ಮಾಲಿನ್ಯ ವಿರೋಧಿ ಗ್ರಾಪ್ ಅನ್ನು ಇನ್ನೂ 3 ದಿನ ಮುಂದುವರೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ದೆಹಲಿ ವಾಯುಮಾಲಿನ್ಯ: ಆಸ್ಪತ್ರೆಗಳಲ್ಲಿ ಉಸಿರಾಟದ ಸಮಸ್ಯೆ ರೋಗಿಗಳು ಹೆಚ್ಚಳ!
ಈ ಕುರಿತ ಮುಂದಿನ ವಿಚಾರಣೆಯನ್ನು ಸೋಮವಾರ ನಡೆಸುವುದಾಗಿ ತಿಳಿಸಿರುವ ನ್ಯಾ। ಅಭಯ್ ಎಸ್. ಒಕಾ ನೇತೃತ್ವದ ಪೀಠ, ನ.25ರಂದು ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಗ್ರಾಪ್ ಅನ್ನು 4ನೇ ಹಂತದಿಂದ 2ನೇ ಹಂತಕ್ಕೆ ಇಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದೆ. ಇದೇ ವೇಳೆ, ಗ್ರಾಪ್-4 ಅಡಿಯಲ್ಲಿ ಟ್ರಕ್‌ಗಳ ದೆಹಲಿ ಪ್ರವೇಶ ನಿರ್ಬಂಧಿಸಲಾಗಿದ್ದರೂ ಅದು ಸರಿಯಾಗಿ ಪಾಲನೆಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.ಶುಕ್ರವಾರ ದೆಹಲಿಯಲ್ಲಿ ವಾಯುಗುಣಮಟ್ಟ (ಎಕ್ಯುಐ) ಗಂಭೀ ಎಂದು ಪರಿಗಣಿಸಲಾಗುವ 401 ಅಂಕ ಇದ್ದು, ತಾಪಮಾನ 11.3 ಡಿಗ್ರಿ ಉಷ್ಣಾಂಶ ವರದಿಯಾಗಿದೆ.