
ನಿನ್ನೆಯಷ್ಟೇ (ಫೆ.5) ದೆಹಲಿಯ ವಿಧಾನಸಭೆಯ ಚುನಾವಣೆ ಮುಗಿದಿದೆ. ಇದೇ ಅವಧಿಯಲ್ಲಿ ಅತ್ತ ಪ್ರಧಾನಿ ನರೇಂದ್ರ ಮೋದಿಯವರು ಮಹಾಕುಂಭಮೇಳಕ್ಕೆ ತಲುಪಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಚ್ಚರಿ ಎನ್ನಿಸುವಂಥ ಚುನಾವಣಾ ಸಮೀಕ್ಷೆಗಳು ಹೊರಕ್ಕೆ ಬಂದಿವೆ. ಇದಾಗಲೇ ಹಲವಾರು ಸಮೀಕ್ಷೆಗಳು ನಡೆದಿದ್ದು, ಬಹುತೇಕ ಸಮೀಕ್ಷೆಯ ಪೈಕಿ ಬಿಜೆಪಿ ಈ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆ ಏರಲಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ದೆಹಲಿ ಒಲಿಯಲಿದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಸುಮಾರು 43 ಸ್ಥಾನಗಳನ್ನು ಪಡೆಯಬಹುದು ಎಂದು ಹಲವು ಸಮೀಕ್ಷೆಗಳು ಸೂಚಿಸಿವೆ, ಆಮ್ ಆದ್ಮಿ ಪಕ್ಷ (ಎಎಪಿ) 26 ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿ ಬರುವ ಸಾಧ್ಯತೆಯಿದೆ. 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 36 ಸ್ಥಾನಗಳ ಬಹುಮತದ ಅಗತ್ಯವಿದೆ. 2015ರಲ್ಲಿ ಎಎಪಿ 67 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. 2020ರಲ್ಲಿ ಎಎಪಿಯ ಸ್ಥಾನಗಳ ಸಂಖ್ಯೆ 62ಕ್ಕೆ ಇಳಿದಿತ್ತು. ಬಿಜೆಪಿ 8 ಸ್ಥಾನಗಳನ್ನು ಗೆದ್ದಿತ್ತು.
ಆದರೆ ಕುತೂಹಲದ ವಿಷಯ ಏನೆಂದರೆ, ಬಹುತೇಕ ಸಮೀಕ್ಷೆಗಳ ಪ್ರಕಾರ ಸತತ ಮೂರನೆಯ ಬಾರಿಯೂ ಕಾಂಗ್ರೆಸ್ ದೆಹಲಿಯಲ್ಲಿ ಖಾತೆ ತೆರೆಯುವುದಿಲ್ಲ ಎನ್ನುವುದು. ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಶೂನ್ಯಸ್ಥಾನ ಗಳಿಸಿತ್ತು. ಈ ಬಾರಿಯೂ ಅದೇ ಮುಂದುವರೆಯಲಿದೆ ಎಂದೇ ಹೇಳಿವೆ ಸಮೀಕ್ಷೆಗಳು. ಕೆಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ಗೆ 1-2 ಸ್ಥಾನಗಳು ಸಿಗಲಿವೆ. ಭ್ರಷ್ಟ ಆಡಳಿತದ ವಿರುದ್ಧ ಸಮರ ಸಾರುವುದಾಗಿ ಘೋಷಿಸಿ ಎರಡು ಬಾರಿ ಅಧಿಕಾರದ ಗದ್ದುಗೆ ಹಿಡಿದಿದ್ದ ಆಮ್ ಆದ್ಮಿ ಪಾರ್ಟಿ ಒಂದಾದ ಮೇಲೊಂದರಂತೆ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ, ಈ ಬಾರಿ ದೆಹಲಿಯ ಬಹುತೇಕ ಮತದಾರರು ಈ ಪಕ್ಷದತ್ತ ಒಲವು ತೋರಿಲ್ಲ ಎನ್ನುವುದು ಎಕ್ಸಿಟ್ ಪೋಲ್ ಅಭಿಮತ.
ರಾಜ್ಯಪಾಲರ ಭಾಷಣ ಮಾಡ್ತಿರುವಾಗಲೇ ಕುಸಿದು ಬಿದ್ದ ಪೊಲೀಸ್ ಕಮಿಷನರ್: ಶಾಕಿಂಗ್ ವಿಡಿಯೋ ವೈರಲ್
ಅಂದಹಾಗೆ, ದೆಹಲಿಯಲ್ಲಿ ಒಂದೇ ಒಂದೇ ಹಂತದಲ್ಲಿ ಎಲ್ಲ 70 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆದಿತ್ತು. ಆದರೆ, ಕೇವಲ 59.71 ಪರ್ಸೆಂಟ್ ಮಾತ್ರ ಮತದಾನ ಆಗಿದೆ. ಅಂದರೆ ಸುಮಾರು ಅರ್ಧದಷ್ಟು ಮತದಾರರು ಮತ ಚಲಾಯಿಸಲಿಲ್ಲ. ಇನ್ನು ಲೆಕ್ಕಾಚಾರವನ್ನು ಹೇಳುವುದಾದರೆ, ಇಲ್ಲಿರುವ ಮ್ಯಾಜಿಕ್ ನಂಬರ್ 36. ಅಂದರೆ ಇರುವ 70 ಸ್ಥಾನಗಳಲ್ಲಿ ಅಧಿಕಾರ ಹಿಡಿಯುವವರು ಅರ್ಧ ಎಂದರೆ 35ಕ್ಕಿಂತ ಒಂದು ಹೆಚ್ಚಿಗೆ ಸ್ಥಾನ ಅಂದರೆ 36 ಸ್ಥಾನ ಗಳಿಸಬೇಕು. 36 ಕಡೆಗಳಲ್ಲಿ ಗೆಲುವು ಸಾಧಿಸಬೇಕು. ಸದ್ಯ ಮುಖ್ಯವಾಗಿ ಹತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ಪರಿಗಣಿಸಲಾಗಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಬಿಜೆಪಿಯು 39ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಿದ್ದರೆ, ಎಎಪಿಯು 30ರ ಆಸುಪಾಸು ಗೆಲ್ಲುವ ಸಾಧ್ಯತೆ ಇದೆ.
ಆದರೆ ಮೈಂಡ್ ಬ್ರಿಂಕ್, ವೀಪ್ರಿಸೈಡ್ ಮತ್ತು ಮ್ಯಾಟ್ರಿಜ್ ಪ್ರಕಾರ ಆಮ್ ಆದ್ಮಿ ಪಕ್ಷ ಅಧಿಕಾರವನ್ನು ಏರಲಿದೆ ಎಂದು ಹೇಳಿದೆ. ಇನ್ನುಳಿದಂತೆ ಪೀಪಲ್ಸ್ ಇನ್‌ಸೈಟ್, ಚಾಣಕ್ಯ ಸ್ಟ್ರಾಟೆಜೀಸ್, ಪೋಲ್ ಡೈರಿ, ಡಿವಿ ರಿಸರ್ಚ್, ಜೆವಿಸಿ, ಮ್ಯಾಟ್ರಿಜ್, ಪಿ-ಮಾರ್ಕ್ ಮುಂತಾದವರು ಬಿಜೆಪಿ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿವೆ. ಇವೆಲ್ಲವುಗಳ ಹೊರತಾಗಿಯೂ ಈ ಹಿಂದೆ ಕೆಲವು ರಾಜ್ಯಗಳಲ್ಲಿ ಎಕ್ಸಿಟ್ ಪೋಲ್ಗಳು ಸಂಪೂರ್ಣ ಹುಸಿಯಾಗಿರುವುದು ಸಾಬೀತಾಗಿದೆ ಎನ್ನುವುದು ಸತ್ಯ.
ಎಟಿಎಂನಲ್ಲಿ ವೃದ್ಧ ದುಡ್ಡು ಡ್ರಾ ಮಾಡ್ತಿದ್ದಾಗ ನುಗ್ಗಿದ ಹಂದಿ: ಗಾಜು ಪುಡಿ ಪುಡಿ- ಭಯಾನಕ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ