ದೆಹಲಿ ಜವಾಹರಲಾಲ್ ನೆಹರೂ ವಿದ್ಯಾರ್ಥಿಗಳ ಮೇಲೆ ಹಲ್ಲೆ| ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಬಾಲಿವುಡ್ ಗಣ್ಯರು| ವಿದ್ಯಾರ್ಥಿ ಹೋರಾಟಕ್ಕೆ ದೀಪಿಕಾ ಬೆಂಬಲ!
ನವದೆಹಲಿ[ಜ.08]: ಇತ್ತೀಚೆಗೆ ದೆಹಲಿಯ ಜೆಎನ್‌ಯುದಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ನಟಿ ದೀಪಿಕಾ ಪಡುಕೋಣೆ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಬಹುನಿರೀಕ್ಷೆಯ ‘ಛಪಾಕ್’ ಚಿತ್ರದ ಪ್ರಮೋಷನ್‌ಗಾಗಿ ದೆಹಲಿಗೆ ಆಗಮಿಸಿದ್ದ ದೀಪಿಕಾ, ಸಂಜೆ ವೇಳೆಗೆ ಜೆಎನ್‌ಯುದ ಸಾಬರ್‌ಮತಿ ಹಾಸ್ಟೆಲ್ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಹಾಜರಾದರು. ವಿದ್ಯಾರ್ಥಿಗಳ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ ದೀಪಿಕಾ, ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಮಾತುಗಳನ್ನು ಆಡಲಿಲ್ಲ. ಈ ಪ್ರತಿಭಟನೆ ನೇತೃತ್ವವನ್ನು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನೇತಾರ ಕನ್ಹಯಾ ಕುಮಾರ್ ವಹಿಸಿದ್ದರು.
Proud of you ! pic.twitter.com/WLTMAZ8JRE
— Hansraj Meena (@ihansraj)ಇದಕ್ಕೂ ಮುನ್ನ ದೆಹಲಿಯಲ್ಲಿ ಚಲನಚಿತ್ರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ದೀಪಿಕಾ, ‘ಸಮಾಜದ ಬದಲಾವಣೆಗೆಗಾಗಿ ಪ್ರತಿಯೊಬ್ಬರೂ ಧ್ವನಿಯೆತ್ತಬೇಕು’ ಎಂದು ಕರೆ ನೀಡಿದರು. ‘ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಮಗೆ ದಿಗಿಲಾಗದಿರುವುದನ್ನು ಕಂಡು ಹೆಮ್ಮೆಯಾಗುತ್ತಿದೆ. ನಾವು ದೇಶ ಮತ್ತು ದೇಶದ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೇವೆ ಎಂಬುದಾಗಿ ನಾನು ಭಾವಿಸುತ್ತೇನೆ. ನಮ್ಮ ಅಭಿಪ್ರಾಯ ಏನೇ ಇರಲಿ. ಅದನ್ನು ವ್ಯಕ್ತಪಡಿಸುತ್ತಿರುವುದನ್ನು ಕಂಡು ಖುಷಿಯಾಗುತ್ತಿದೆ. ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟಿಸುವ ಮೂಲಕ ತಮ್ಮ ಧ್ವನಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸಮಾಜ ಮತ್ತು ನಮ್ಮ ಜೀವನದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ ಎಂದಾದರೆ, ನಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದು ಬಹಳ ಮುಖ್ಯ’ ಎಂದು ಖಾಸಗಿ ಮಾಧ್ಯಮವೊಂದಕ್ಕೆ ದೀಪಿಕಾ ಪಡುಕೋಣೆ ತಿಳಿಸಿದ್ದಾರೆ.
JNU ಹುಡುಗಿಯರನ್ನು ಹೊಡೆದಿದ್ದು ಪಿಂಕಿ: ಹೊಣೆ ಹೊತ್ತ ಹಿಂದೂ ರಕ್ಷಾ ಸಂಘಟನೆ!
More power to you and thank you for your solidarity and support. You might be abused or trolled today, but history will remember you for your courage and standing by the idea of India. pic.twitter.com/wfpRNqNzlN
— Asif_NSUI (@iycasif)‘ನಾವೆಲ್ಲರೂ ಒಂದೇ ಸಮಾಜದಲ್ಲಿ ಬದುಕುತ್ತಿದ್ದೇವೆ. ಹಾಗಾಗಿ, ಈ ಬಗ್ಗೆ ಧ್ವನಿಯೆತ್ತಬೇಕಾಗುತ್ತದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಇಲ್ಲೊಂದು ನೋವಿದೆ. ಜಾಗೃತಿಯ ಪ್ರಜ್ಞೆಯಿದೆ ಎಂಬುದು ಮಾತ್ರ ವಾಸ್ತವ. ಶೀಘ್ರವೇ ದೇಶಾದ್ಯಂತ ಶಾಂತಿ ವಾತಾವರಣ ಮರುಕಳಿಸಲಿದೆ ಎಂಬ ಭರವಸೆಯಿದೆ. ಇದಕ್ಕೆ ಏನು ಮದ್ದು ಎಂಬುದು ನಮಗೆ ಗೊತ್ತಿಲ್ಲ’ ಎಂದು ಹೇಳಿದರು.
JNU ಬ್ಯಾನ್ ಮಾಡೋದು ಸರಿ ಅಲ್ಲ: ಕಲ್ಲಡ್ಕ ಪ್ರಭಾಕರ್ ಭಟ್